5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆ| ಫೋಟೋ ಸೆಷನ್ ತಡವಾಗಲು ಕಾರಣರಾದರು ಮೋದಿ| ರಷ್ಯಾದ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ಸೋಫಾ ನಿರಾಕರಿಸಿದ ಪ್ರಧಾನಿ ಮೋದಿ| ಫೋಟೋ ಸೆಷನ್‌ಗಾಗಿ ಇಡಲಾಗಿದ್ದ ಸೋಫಾ ನಿರಾಕರಿಸಿ ಸರಳತೆ ಮೆರೆದ ಮೋದಿ| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮೋದಿ ಸರಳತೆ ವಿಡಿಯೋ|  

ವ್ಲಾಡಿವೋಸ್ಟಾಕ್(ಸೆ.06): 5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಗೆ ತೆರಳಿದ್ದ ಪ್ರಧಾನಿ ಮೋದಿ, ಕೊನೆಯಲ್ಲಿ ಫೋಟೋ ಸೆಷನ್’ನಲ್ಲಿ ಸರಳತೆ ಮೆರೆದು ಗಮನ ಸೆಳೆದಿದ್ದಾರೆ.

ರಷ್ಯಾದ ವ್ಲಾಡಿವೋಸ್ಟಾಕ್'ನಲ್ಲಿ ನಡೆದ ಶೃಂಗಸಭೆ ಬಳಿಕ ಫೋಟೋ ಸೆಷನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೋದಿ ಅವರಿಗೆ ಕೂರಲು ದುಬಾರಿ ಸೋಫಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸೋಫಾ ನಿರಾಕರಿಸಿದ ಪ್ರಧಾನಿ ಮೋದಿ, ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ.

Scroll to load tweet…

ಇದನ್ನು ಕಂಡ ಇತರೆ ಅಧಿಕಾರಿಗಳು ತಾವೂ ಕೂಡ ಸೋಫಾದಿಂದ ಎದ್ದು ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ವಿಶ್ವ ವೇದಿಕೆಯಲ್ಲಿ ಮೋದಿ ತೋರಿದ ಈ ಸರಳತೆಯನ್ನು ಎಲ್ಲರೂ ಕೊಂಡಾಡಿದ್ದಾರೆ. 

ಇನ್ನು ಪ್ರಧಾನಿ ಮೋದಿ ಸೋಫಾ ನಿರಾಕರಿಸಿರುವ ವಿಡಿಯೋವನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ. ಮೋದಿಯವರ ಸರಳತೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.