ಬೆಂಗಳೂರು (ಡಿ.24): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಮುಸ್ಲಿಮ್ ಸಂಘಟನೆಗಳು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. 

ಪ್ರತಿಭಟನೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ, CAA ಮತ್ತು ಕೇಂದ್ರ ಸರ್ಕಾರದ ಉದ್ದೇಶಿತ ಎನ್‌ಆರ್‌ಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.

ಬಹುತೇಕ ಪುರುಷರೇ ತುಂಬಿಕೊಂಡಿದ್ದ ಈ ಪ್ರತಿಭಟನೆಯಲ್ಲಿ, ಸಪೋರ್ಟ್ ಮಾಡಲು ಮುಸ್ಲಿಮೇತರ ಮಹಿಳೆಯೊಬ್ಬರು ಭಾಗವಹಿಸಿದ್ದರು.  ಪ್ರತಿಭಟನೆಯ ಬಳಿಕ ಅವರು ಅಲ್ಲಿನ ಚಿತ್ರಣವನ್ನು ಎಳೆಎಳೆಯಾಗಿ ವಿವರಿಸುವ ಫೇಸ್ಬುಕ್‌ ಪೋಸ್ಟ್‌ ಹಾಕಿದ್ದು, ಇದೀಗ ವೈರಲ್ ಆಗಿದೆ.

ಹೈದರಾಬಾದ್ ದಿಶಾ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಯುವಕರ ಗುಂಪು ಒಂದು ಕಡೆ ಸೇರಿದಾಗ, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವ ಪ್ರಕರಣಗಳೇ ಹೆಚ್ಚು. 

ಇದನ್ನೂ ಓದಿ |  CAA ಹೋರಾಟ: ಕಾಂಗ್ರೆಸ್‌ ಮುಖಂಡನಿಗೆ ಇಲ್ಲ ಮಣೆ, ಮುಜುಗರದಿಂದ ವಾಪಸು ಮನೆ!...

ಆದರೆ ಈ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಮಂದಿ ಸೇರಿದ್ದರೂ, ಮಹಿಳೆಯರಿಗೆ ಕೊಟ್ಟ ಗೌರವ, ವ್ಯವಸ್ಥೆಯನ್ನು ಬಹಳ ವಿವರವಾಗಿ ರಿಯಾ ರೋಡ್ರಿಗಸ್ ಮುಖರ್ಜಿ ಬಿಚ್ಚಿಟಿದ್ದಾರೆ.

ಪ್ರತಿಭಟನೆ ಜಾಗಕ್ಕೆ ಕಾಲಿಟ್ಟಿದಾಗಿನಿಂದ, ಅಲ್ಲಿನ ಪುರುಷರು, ಲೇಡಿಸ್ ಬಂದಿದ್ದಾರೆ ಜಾಗ ಕೊಡಿ ಎಂದು ಜಾಗ ಮಾಡಿಕೊಟ್ಟರು. ಜೀವನದಲ್ಲಿ ಅಷ್ಟೊಂದು ಪುರುಷರಿಂದ ನಾನು ಯಾವತ್ತೂ ಸುತ್ತುವರಿಯಲ್ಪಟ್ಟಿರಲಿಲ್ಲ.  ನೂಕುನುಗ್ಗಲು ಇದ್ದರೂ, ಒಬ್ಬನೇ ಒಬ್ಬ ಪುರುಷ ನನ್ನ ಮೈಗೆ ತಾಗುವುದಾಗಲಿ, ಮೈಯನ್ನು ಮುಟ್ಟುವುದಾಗಲಿ ಅಥವಾ ಯಾವುದೇ ರೀತಿಯಲ್ಲಿ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸಲಿಲ್ಲ. ಮಹಿಳೆಯರ ಬಗ್ಗೆ ಈ ಭಾರತೀಯ ಪುರುಷರ ಗೌರವ, ನಡತೆ ಕಂಡು ನನ್ನ ಕಣ್ಣುಗಳು ತುಂಬಿ ಬಂತು ಎಂದು ಮುಖರ್ಜಿ  ಬರೆದಿದ್ದಾರೆ.

ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿದ್ದರೂ ಅವರ ಸುರಕ್ಷತೆಗೆ ಮಾನವ ಸರಪಳಿ ನಿರ್ಮಿಸಿ ಯಾವುದೇ ತೊಂದರೆಯಾಗದಂತೆ ಅಲಲ್ಇನ ಜನ ನೊಡಿಕೊಂಡರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾನವೀಯತೆ ಮೇಲೆ ನಂಬಿಕೆ ಮತ್ತಷ್ಟು ಹೆಚ್ಚಾಯ್ತು, ಎಂದು ಬರೆದಿದ್ದಾರೆ.

ಡಿಸೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ