ಇರಾನ್-ಇಸ್ರೇಲ್ ಯುದ್ಧದ ನಡುವೆಯೇ ಚಿನ್ನದ ಬೆಲೆಯಲ್ಲಿ 30 ಸಾವಿರ ರೂಪಾಯಿ ಇಳಿಕೆ
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡದಿಂದಾಗಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 30,000 ಮತ್ತು 32,900 ರೂ. ಇಳಿಕೆಯಾಗಿದ್ದು, ಬೆಳ್ಳಿ ದರವೂ ಕುಸಿದಿದೆ.

ಯುದ್ಧದ ಕಾರ್ಮೋಡ
ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಇರಾನ್ ಮತ್ತು ಇಸ್ರೇಲ್ ನಡುವೆ ನೂರಾರು ಕ್ಪಿಪಣಿಗಳ ದಾಳಿ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಇಂದು ಚಿನ್ನದ ಬೆಲೆಯಲ್ಲಿ 30 ಸಾವಿರ ರೂ.ಗಳಷ್ಟು ಕುಸಿತವಾಗಿದೆ.
ಚಿನ್ನದ ಮಾರುಕಟ್ಟೆ
ಜಾಗತೀಕ ಸನ್ನಿವೇಶಗಳು ಚಿನ್ನದ ಮಾರುಕಟ್ಟೆ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಲೇಖನ ಒಳಗೊಂಡಿದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 16,980 ರೂಪಾಯಿ
8 ಗ್ರಾಂ: 1,35,840 ರೂಪಾಯಿ
10 ಗ್ರಾಂ: 1,69,800 ರೂಪಾಯಿ
100 ಗ್ರಾಂ: 16,98,000 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,565 ರೂಪಾಯಿ
8 ಗ್ರಾಂ: 1,24,520 ರೂಪಾಯಿ
10 ಗ್ರಾಂ: 1,55,650 ರೂಪಾಯಿ
100 ಗ್ರಾಂ: 15,56,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,56,600 ರೂಪಾಯಿ, ಮುಂಬೈ: 1,56,550 ರೂಪಾಯಿ, ದೆಹಲಿ: 1,55,800 ರೂಪಾಯಿ, ಕೋಲ್ಕತ್ತಾ: 1,55,650 ರೂಪಾಯಿ, ಬೆಂಗಳೂರು: 1,55,650 ರೂಪಾಯಿ, ಹೈದರಾಬಾದ್: 1,56,500 ರೂಪಾಯಿ
ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಇಳಿಕೆ!
ಬೆಳ್ಳಿ ಬೆಲೆ
ಇಂದು 22 ಮತ್ತು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 30,000 ರೂಪಾಯಿ ಮತ್ತು 32,900 ರೂ.ಗಳಷ್ಟು ಕುಸಿತವಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 35,000 ರೂ.ಗಳಷ್ಟು ಕುಸಿತವಾಗಿದೆ.
10 ಗ್ರಾಂ: 3,300 ರೂಪಾಯಿ
100 ಗ್ರಾಂ: 33,000 ರೂಪಾಯಿ
1000 ಗ್ರಾಂ: 3,30,000 ರೂಪಾಯಿ
ಇದನ್ನೂ ಓದಿ: ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

