Asianet Suvarna News Asianet Suvarna News

ದಶಕದ ಏಕದಿನ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಧೋನಿಗೆ ನಾಯಕ ಪಟ್ಟ !

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಾರಣ ಡಿ.23ರಂದು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, ಇದರಲ್ಲೂ ಧೋನಿಗೆ ಸ್ಥಾನ ಸಿಕ್ಕಿಲ್ಲ. ಇದೀಗ ಧೋನಿ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿರುವ ಫ್ಯಾನ್ಸ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿಹಿ ಸುದ್ದಿ ನೀಡಿದೆ 

MS Dhoni named as a captain of Cricket australias odi team of decade
Author
Bengaluru, First Published Dec 24, 2019, 3:20 PM IST

ಸಿಡ್ನಿ(ಡಿ.24): 2019ರ ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲೊಂದು ಇಲ್ಲೊಂದು ಬಾರಿ ರಾಂಚಿ ಮೈದಾನದಲ್ಲಿನ ಅಭ್ಯಾಸ  ಹೊರತು ಪಡಿಸಿದರೆ ಧೋನಿ ಕ್ರಿಕೆಟ್ ಮೈದಾನದಿಂದಲೂ ದೂರ ಉಳಿದಿದ್ದಾರೆ. ಧೋನಿ ಭವಿಷ್ಯ ಕುರಿತು ಬಿಸಿಸಿಐ ಅಡ್ಜ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡುತ್ತಿದೆ. ಹೀಗಾಗಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ತಂಡದ ಪ್ರಟಿಸೋ ಮೂಲಕ ಧೋನಿ ಅಭಿಮಾನಿಗಳಿಗೆ ಸಮಾಧಾನ ನೀಡಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಧೋನಿ

ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಏಕದಿನ ಪ್ರಕಟಿಸಿದೆ. 10 ವರ್ಷಗಳಲ್ಲಿ ಕ್ರಿಕೆಟ್ ಕಂಡ ಅದ್ಭುತ ಹಾಗೂ ಅತ್ಯುತ್ತಮ ಆಟಗಾರರ ತಂಡವನ್ನು ಆಸ್ಟ್ರೇಲಿಯಾ ಪ್ರಕಟಿಸಿದೆ. ಈ ದಶಕದ ತಂಡದಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿಗೆ ನಾಯಕತ್ವ ನೀಡಿದೆ. ಈ ತಂಡದಲ್ಲಿ ಧೋನಿ ಜೊತೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ಸ್ಥಾನ ಪಡೆದಿದ್ದಾರೆ..

ಡಿಸೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

ಆಸ್ಟ್ರೇಲಿಯಾ ಪ್ರಕಟಿಸಿದ ದಶಕದ ಏಕದಿನ ತಂಡ:
ಎಂ.ಎಸ್.ಧೋನಿ(ನಾಯಕ),ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಶೀಮ್ ಆಮ್ಲಾ, ಎಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್, ಜೋಸ್ ಬಟ್ಲರ್, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೋಲ್ಟ್, ಲಸಿತ್ ಮಲಿಂಗ

Follow Us:
Download App:
  • android
  • ios