- Home
- News
- World News
- ನಾನಿದ್ದೀನಿ, ಧೈರ್ಯವಾಗಿರಿ: ದುಬೈ ಏರ್ಪೋರ್ಟ್ನಲ್ಲಿ ಕನ್ನಡಿಗರ ಜೊತೆ Bigg Boss Drone Pratap
ನಾನಿದ್ದೀನಿ, ಧೈರ್ಯವಾಗಿರಿ: ದುಬೈ ಏರ್ಪೋರ್ಟ್ನಲ್ಲಿ ಕನ್ನಡಿಗರ ಜೊತೆ Bigg Boss Drone Pratap
ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್, ಆತಂಕದ ವಾತಾವರಣದ ನಡುವೆಯೂ ಧೈರ್ಯ ಕಳೆದುಕೊಂಡಿಲ್ಲ. ಅವರು ಅಲ್ಲಿರುವ ಇತರ ಕನ್ನಡಿಗರಿಗೆ ಧೈರ್ಯ ತುಂಬುತ್ತಾ, ಎಲ್ಲರೂ ಸುರಕ್ಷಿತವಾಗಿದ್ದಾರೆಂದು ವಿಡಿಯೋ ಮೂಲಕ ಭರವಸೆ ನೀಡುತ್ತಿದ್ದಾರೆ.

ದುಬೈನಲ್ಲಿ ಸಿಲುಕಿರುವ ಕನ್ನಡಿಗರು
ಬಿಗ್ಬಾಸ್ ಮೂಲಕ ಖ್ಯಾತಿ ಪಡೆದಿರುವ ಡ್ರೋನ್ ಪ್ರತಾಪ್ ಇದೀಗ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಇರಾನ್-ಅಮರಿಕ-ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ದುಬೈನಿಂದ ಭಾರತಕ್ಕೆ ಬರಬೇಕಿರುವ ವಿಮಾನಗಳನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಸುಳ್ಳು ಸುದ್ದಿಗಳು
ದುಬೈನಲ್ಲಿಯೂ ಬಿಗುವಿನ ವಾತಾವರಣ ಉಂಟಾಗಿದೆ. ಇದರ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ಯಾವ್ಯಾವುದೋ ಬ್ಲಾಸ್ಟ್, ಬೆಂಕಿಯ ಕ್ಲಿಪ್ಪಿಂಗ್ಸ್ ಹಾಕಿ ಇದು ಇಲ್ಲಿಯದ್ದೇ ಎನ್ನುವ ರೀತಿಯಲ್ಲಿ ಪೋಸ್ಟ್ ಮಾಡಿ ಜನರಲ್ಲಿ ಇನ್ನಷ್ಟು ಆತಂಕ ಹುಟ್ಟಿಸುತ್ತಿದ್ದಾರೆ.
ದುಬೈನಲ್ಲಿ ಆತಂಕದ ವಾತಾವರಣ
ಇದಾಗಲೇ ದುಬೈ ವಿಮಾನ ನಿಲ್ದಾಣದ ಮೇಲೂ ಕ್ಷಿಪಣಿ ದಾಳಿಯಾಗಿದೆ. ಬುರ್ಜ್ ಕಲೀಫಾಕ್ಕೆ ಹಾನಿಯಾಗಿದೆ. ದುಬೈನಲ್ಲಿ ಭಾರಿ ಗಂಭೀರ ಸ್ಥಿತಿ ಇದೆ ಎನ್ನುವ ಸುದ್ದಿಗಳು ಬರುತ್ತಿರುವ ನಡುವೆಯೇ, ಇಲ್ಲಿ ಸಿಲುಕಿರುವ ಡ್ರೋನ್ ಪ್ರತಾಪ್ ಎಲ್ಲರೂ ಸೇಫ್ ಆಗಿರುವುದಾಗಿ ವಿಡಿಯೋ ಮಾಡಿ ಹಾಕುತ್ತಲೇ ಇದ್ದಾರೆ.
ಎಲ್ಲರಿಗೂ ಡ್ರೋನ್ ಪ್ರತಾಪ್ ಅಭಯ
ಇದೀಗ, ದುಬೈ ವಿಮಾನ ನಿಲ್ದಾಣದಲ್ಲಿ ಆತಂಕದಲ್ಲಿರುವ ಕನ್ನಡಿಗರಿಗೆ ಧೈರ್ಯ ತುಂಬಿರುವ ಡ್ರೋನ್ ಪ್ರತಾಪ್, ಇಲ್ಲಿ ನಿಮ್ಮವರು ಎಲ್ಲರೂ ಸೇಫ್ ಆಗಿದ್ದಾರೆ. ಭಯ ಪಡಬೇಡಿ. ಇಲ್ಲಿಯಾವುದೇ ಆತಂಕ ಇಲ್ಲ ಎಂದು ಸಂಬಂಧಿಕರಿಗೆ ವಿಡಿಯೋ ಮೂಲಕ ಹೇಳಿದ್ದಾರೆ.
ಕನ್ನಡಿಗರಿಗೆ ಧೈರ್ಯ
ಇದೇ ವೇಳೆ, ಆದಷ್ಟು ಬೇಗ ನಾವು ಭಾರತಕ್ಕೆ ಹೋಗುತ್ತೇವೆ. ಭಯ ಪಡಬೇಡಿ. ವಿಮಾನ ಆರಂಭವಾಗುತ್ತದೆ ಎಂದು ಅಲ್ಲಿರುವ ಕನ್ನಡಿಗರಿಗೂ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಡ್ರೋನ್ ಪ್ರತಾಪ್.
ಆಗಿನ ಡ್ರೋನ್, ಈಗಿನ ಪ್ರತಾಪ್!
ತಾನೊಬ್ಬ ವಿಜ್ಞಾನಿ, ನಾನೇ ಡ್ರೋನ್ ತಯಾರಿಸುವುದು, ನನ್ನ ಬಾಲ್ಯ ಹೀಗಿತ್ತು-ಹಾಗಿತ್ತು ಎಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿಯೂ ಸುಳ್ಳಿನ ಭಾಷಣವನ್ನೇ ಮಾಡಿ, ಘಟಾನುಘಟಿಗಳನ್ನೂ ಯಾಮಾರಿಸಿ, ಚಿತ್ರತಾರೆಯರಿಗೂ ಮಂಕುಬೂದಿ ಎರಚಿ ವಂಚಕ ಎಂದೇ ಎಲ್ಲರ ಬಾಯಲ್ಲಿಯೂ ಅಂದುಕೊಂಡು ಜೈಲುಪಾಲಾಗಿದ್ದ ಡ್ರೋನ್ ಪ್ರತಾಪ್ಗೆ ಈ ಕುಖ್ಯಾತಿಯಿಂದಾಗಿಯೇ ಬಿಗ್ಬಾಸ್ನಲ್ಲಿಯೂ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ಅವರ ಲೈಫ್ ಚೇಂಜ್ ಆಯಿತು. ಬಿಗ್ಬಾಸ್ನಲ್ಲಿ ಎಲ್ಲರ ಪ್ರೀತಿ ಗಳಿಸಿ, ಅಲ್ಲಿಂದ ಹೊರಬಂದು ಸೆಲೆಬ್ರಿಟಿಯಾಗಿ, ಇದೀಗ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದ್ದಾರೆ ಡ್ರೋನ್ ಪ್ರತಾಪ್. ಇದೀಗ ಅವರು ದುಬೈನಲ್ಲಿ ಕನ್ನಡಿಗರಿಗೆ ತೋರಿಸುತ್ತಿರುವ ಪ್ರೀತಿಗೆ ಎಲ್ಲರೂ ಆಭಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

