ಇವಳು ಇರಾ ಖಾನ್‌. 21 ವರ್ಷದ ಚಾರ್ಮಿಂಗ್‌ ಗರ್ಲ್‌. ಸ್ಟಾರ್‌ ಮಕ್ಕಳೆಲ್ಲ ಬಾಲಿವುಡ್‌ಗೆ ಎಂಟ್ರಿ ಕೊಡ್ಬೇಕು ಅಂತ ತುದಿಗಾಲಲ್ಲಿ ನಿಂತಿದ್ರು ಈ ಹುಡುಗಿ ನಂಗೆ ಸಿನಿಮಾಕ್ಕಿಂತ ನಾಟಕ ಇಷ್ಟ ಅಂದಳು. ಒಂದಿಷ್ಟು ನಾಟಕಗಳನ್ನು ನಿರ್ದೇಶನ ಮಾಡಿದ್ಲು. ಕೆಲವು ದಿನಗಳ ಹಿಂದೆ ಇವಳ ನಿರ್ದೇಶನದ ನಾಟಕ ಬೆಂಗಳೂರಿಗೂ ಬಂದಿತ್ತು. ಇದೀಗ ಈ ತುಂಬುಗೆನ್ನೆಯ ಹುಡುಗಿ ಡಿಫರೆಂಟ್‌ ಕಾರಣಕ್ಕೆ ಸುದ್ದಿಯಾಗಿದ್ದಾಳೆ.

‘ಇರಾ ಮರ ಹತ್ತಿದ್ಲು..’

ಈ ಸುದ್ದಿ ಇದೀಗ ಸೋಷಲ್‌ ಮೀಡಿಯಾಗಳಲ್ಲಿ ವೈರಲ್‌ ಆಗ್ತಿದೆ. ಅರೆ, ಸಿಟಿಯಲ್ಲೇ ಬೆಳೆದ, ಅಮೀರ್‌ನಂಥಾ ಬುದ್ಧಿವಂತ ನಟನ ಮಗಳದ್ದು ಇದೆಂಥಾ ಹುಚ್ಚಾಟ ಅಂದುಕೊಂಡೇ ಹುಡುಗ್ರು ಆಕೆಯ ಇನ್‌ಸ್ಟಾದಲ್ಲಿ ಇಣುಕಿದ್ರು. ಈ ಕುತೂಹಲವೇ ಇರಾ ಫೋಟೋ ವೈರಲ್‌ ಆಗೋ ಹಾಗೆ ಮಾಡಿತ್ತು.

ಬಾಯ್‌ಫ್ರೆಂಡ್ ಜೊತೆ ಡ್ಯಾನ್ಸ್ ಮಾಡುವಾಗ ಸಿಕ್ಕಾಕ್ಕೊಂಡ್ಲು ಅಮೀರ್ ಪುತ್ರಿ!

ಅಷ್ಟಕ್ಕೂ ಇರಾ ಮರ ಹತ್ತಿದ್ಯಾಕೆ?

ನಿಮಗೂ ಈ ಕುತೂಹಲ ಇದ್ರೆ ಇರಾ ಳ ಇನ್‌ಸ್ಟಾಗ್ರಾಂಗೊಮ್ಮೆ ವಿಸಿಟ್‌ ಮಾಡಿಬನ್ನಿ. ವಿಷ್ಯ ಮತ್ತೇನಿಲ್ಲ, ಆಕೆಗೀಗ ಫೋಟೋಶೂಟ್‌ ಮಾಡಿಸೋ ಕ್ರೇಜ್‌ ಹತ್ತಿಕೊಂಡಿದೆ. ಉಳಿದ ಹುಡುಗೀರ ಹಾಗೆ ಸ್ಟೈಲಾದ ಉಡುಗೆ ತೊಟ್ಟು ಯಾವ್ದೋ ಸ್ಟಾರ್‌ ಹೋಟೆಲ್‌ನಲ್ಲಿ ಮಾಡೋ ಫೋಟೋ ಶೂಟ್‌ ಥರ ಅಲ್ಲ ಇದು. ಪ್ರಕೃತಿಯ ನಡುವೆ ನಿಂತು ಫೋಟೋ ಹೊಡೆಸಿಕೊಳ್ಳುವ ಹುಚ್ಚು. ಇರಾ ಮರಾ ಹತ್ತಿದ್ದೂ ಈ ಫೋಟೋಶೂಟ್‌ಗಾಗಿ.

ಕಡುಗೆಂಪು ಬಣ್ಣದ ರೇಷ್ಮೆಯ ಗೌನ್‌ ತೊಟ್ಟು ಮರದ ಮೇಲೇರಿ ನಿಂತು ಫೋಟೋಗೆ ಫೋಸ್‌ ನೀಡಿದ ಇರಾ ಇನ್‌ಸ್ಟಾದಲ್ಲಿ ಅದನ್ನು ಹಂಚಿದ್ದಾರೆ. ಜೊತೆಗೊಂದು ಕ್ಯಾಪ್ಶನ್ನೂ ಕೊಟ್ಟಿದ್ದಾರೆ. ‘ನಂಗೆ ಮರದ ಮನೆಯಲ್ಲಿರಲು ಇಷ್ಟ’ ಅನ್ನೋ ಅರ್ಥದಲ್ಲಿ. ಇರಾ ಹಾಕಿರೋ ಈ ಇನ್‌ಸ್ಟಾ ಪೋಸ್ಟ್‌ಅನ್ನು ಬಹಳ ಜನ ಲೈಕ್‌ ಮಾಡಿದ್ದಾರೆ. ಸಾಕಷ್ಟು ಜನ ಕಮೆಂಟೂ ಮಾಡಿದ್ದಾರೆ. ಅದಿತಿ ರಾವ್‌ ಹೈದರಿ ‘ಲವ್‌’ ಅಂತ ಕಮೆಂಟ್‌ ಮಾಡಿ ಚಿಕ್ಕ ಹುಡುಗಿಯ ಬೆನ್ನು ತಟ್ಟಿದ್ದಾರೆ. ಇರಾಳ ಫ್ಯಾನ್‌ ಒಬ್ಬ ಕುತೂಹಲದಿಂದ ಪ್ರಶ್ನೆ ಮಾಡಿದ್ದಾನೆ,‘ಇರಾ ನೀನ್ಯಾಕೆ ಯಾವತ್ತೂ ಮರ ಹತ್ತಿಯೇ ಫೋಟೋ ಶೂಟ್‌ ಮಾಡಿಸಿಕೊಳ್ತೀಯಾ ಅಂತ’

ಈ ಹಿಂದೆ ಇರಾ ಫೋಟೋ ಶೂಟ್‌ ಮಾಡಿಸಿಕೊಂಡಿದ್ದೂ ಮರದ ಮೇಲೆ. ಬಹಳ ಸೆಕ್ಸಿಯಾಗಿ ನೇರಳೆ ಬಣ್ಣದ ಫ್ರಂಟ್‌ ಓಪನ್‌ ಗೌನ್‌ ತೊಟ್ಟು ಒಣ ಮರದ ಮೇಲೆ ಆಗಸಕ್ಕೆ ಮುಖ ಮಾಡಿ ಮಲಗಿ ಫೋಸ್‌ ಕೊಟ್ಟಿದ್ದಳು. ಎದುರು ಪರ್ವತದ ನೋಟ.. ‘ವಾಟ್‌ ಅ ವ್ಯೂ..’ ಅನ್ನೂ ಕ್ಯಾಪ್ಶನ್‌ ನೋಡಿ, ಈ ಸುಂದರಿ ತನ್ನ ಬಗ್ಗೆಯೇ ಈ ಸ್ಟೇಟ್‌ಮೆಂಟ್‌ ಕೊಡ್ತಿದ್ದಾಳಾ ಅಥವಾ ನಿಸರ್ಗ ಸೊಬಗನ್ನು ವರ್ಣಿಸುತ್ತಿದ್ದಾಳಾ ಅಂತ ಸಖತ್‌ ಕನ್‌ಫä್ಯಸ್‌ ಆದ್ರು ಹುಡುಗ್ರು.  ಬೋಲ್ಡ್‌, ಹಾಟ್‌ ಆ್ಯಂಡ್‌ ಬ್ಯೂಟಿಫುಲ್‌ ಆಗಿದ್ದ ಈ ಫೋಟೋ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದು ಸುಳ್ಳಲ್ಲ.

ಬ್ಯಾಕ್‌ಲೆಸ್ ಫೋಟೋಗಳನ್ನು ಶೇರ್ ಮಾಡಿಕೊಂಡ ಅಮಿರ್ ಖಾನ್ ಪುತ್ರಿ ಇರಾ ಖಾನ್!

ಅಂದಹಾಗೆ ಇರಾ ಈ ಕೆಂಪು ಗೌನ್‌ನಲ್ಲಿ ಮರದ ಮೇಲೆ ನಿಂತು ಫೋಟೋ ಶೂಟ್‌ ಮಾಡಿಸಿದ್ದು ನವೆಂಬರ್‌ನಲ್ಲಿ. ಚಳಿಗಾಲದ ಕಂಪಿಸುವ ಗಾಳಿ ಬೀಸುತ್ತಿದ್ದ ಹೊತ್ತಲ್ಲಿ ಈ ಹುಡುಗಿ ಮರದ ಮನೆಯ ಪಕ್ಕ ರೆಂಬೆಯ ಮೇಲೆ ನಿಂತು ಕಣ್ಣರಳಸಿ ನಿಂತಿದ್ದಳು. ಒಂದಿಷ್ಟು ಸಮಯದ ಬಳಿಕ ಡಿಸೆಂಬರ್‌ ಕೊನೆಯಲ್ಲಿ ಇನ್‌ಸ್ಟಾದಲ್ಲಿ ಈ ಫೋಟೋ ರಿವೀಲ್‌ ಮಾಡಿದ್ದು. ಈ ಫೋಟೋ ನೋಡಿ, ವರ್ಷದ ಕೊನೆಯಲ್ಲಿ ಎಂಥಾ ಸರ್‌ಪ್ರೈಸ್‌ ಕೊಟ್ಟೆ ಹುಡುಗಿ ಅಂತ ಬಾಲಿವುಡ್‌ ಮಂದಿ ಮಾತಾಡ್ಕೊಳ್ತಿದ್ದಾರಂತೆ.

ಡಿಸೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ