Asianet Suvarna News Asianet Suvarna News

ಮೋದಿ ಕೈಯಲ್ಲಿ ಬಿಎಸ್‌‌ವೈ ಭವಿಷ್ಯ, ಭಾರತಕ್ಕೆ ಬ್ಯಾಟಿಂಗ್ ಸಂಕಷ್ಟ; ಜೂ.20ರ ಟಾಪ್ 10 ಸುದ್ದಿ!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪನವಾಗಿದ್ದು, ಜನರು ಆತಂಕಗೊಂಡಿದ್ದಾರೆ. ರಾಜ್ಯದ ನಾಯಕತ್ವ ಬದಲಾವಣೆ ವಿಚಾರ ಇದೀಗ ಮೋದಿ ಅಂಗಳಕ್ಕೆ ತಲುಪಿದೆ. ಇತ್ತ ಕೆಪಿಸಿಸಿ ಸರ್ಜರಿಗಾಗಿ ಡಿಕೆಶಿ ದೆಹಲಿಗೆ ಹಾರಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ಸಂಕಷ್ಟ ಎದುರಾಗಿದೆ.  ಸಂಚಾರಿ ವಿಜಯ್ ಅಪಘಾತಕ್ಕೆ ಕಾರಣ ಬಿಟ್ಟಿಟ್ಟ ಸ್ನೇಹಿತ, ಖ್ಯಾತ ಗಾಯಕಿ ತಪು ಮಿಶ್ರಾ ಕೊರೋನಾಗೆ ಬಲಿ ಸೇರಿದಂತೆ ಜೂನ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

Karnataka BSY Leadership to Team India test cricket top 10 News of June 20 ckm
Author
Bengaluru, First Published Jun 20, 2021, 4:56 PM IST
  • Facebook
  • Twitter
  • Whatsapp

ರಾಷ್ಟ್ರ ರಾಜಧಾನಿಯಲ್ಲಿ ಲಘು ಭೂಕಂಪನ; ಆತಂಕದಲ್ಲಿ ಜನ...

ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿರುವ ಭಾರತಕ್ಕೆ ಇದೀಗ ಭೂಕಂಪನ ಭೀತಿ ಆವರಿಸಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಪಂಜಾಬಿ ಭಾಗ್ ವಲಯಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆಯ ಭೂಕಂಪನ ದಾಖಲಾಗಿದೆ.

ಕೆಪಿಸಿಸಿಗೆ ಭಾರೀ ಸರ್ಜರಿ?: ರಾಹುಲ್‌ ಭೇಟಿಗಾಗಿ ಡಿಕೆಶಿ ದಿಲ್ಲಿಗೆ, ಭಾರೀ ಕುತೂಹಲ!...

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಭರ್ಜರಿ ಸರ್ಜರಿ ಮಾಡಲು ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಜ್ಜಾಗಿದ್ದು, ಈ ಸರ್ಜರಿಗೆ ಅನುಮೋದನೆ ಪಡೆಯಲು ಸೋಮವಾರ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.

WTC final: ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ ಔಟ್; ಸಂಕಷ್ಟದಲ್ಲಿ ಭಾರತ!...

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪೈನಲ್ ಪಂದ್ಯ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಮಳೆ ಕಾರಣ ವಿಳಂಭವಾಗಿ ಆರಂಭಗೊಂಡ 3ನೇ ದಿನದಾಟ ಆರಂಭದಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಕಾರಣ ತಂಡಕ್ಕೆ ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿದೆ.

ಹೈಕಮಾಂಡ್ ಅಂಗಳದಲ್ಲಿ ನಾಯಕತ್ವ ಬದಲಾವಣೆ ಚೆಂಡು, ಮೋದಿ ಕೈಯಲ್ಲಿ ಬಿಎಸ್‌ವೈ ಭವಿಷ್ಯ..?...

ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತಾರೂಢ ಬಿಜೆಪಿಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ಸದ್ಯಕ್ಕೆ ದೆಹಲಿಗೆ ಸ್ಥಳಾಂತರಗೊಂಡಿದೆ. 

ತಂದೆ ನಿಧನದ ಬೆನ್ನಲ್ಲೇ ಖ್ಯಾತ ಗಾಯಕಿ ತಪು ಮಿಶ್ರಾ ಕೊರೋನಾಗೆ ಬಲಿ!...

ಕೊರೋನಾ ವಕ್ಕರಿಸಿದ ಮನಕಲುಕುವ ಘಟನೆಗಳು ಜನರಿಗೆ ಮತ್ತಷ್ಟು ಆಘಾತ ನೀಡುತ್ತಿದೆ. ತಂದೆ ನಿಧನರಾದ 10 ದಿನಕ್ಕೆ ಖ್ಯಾತ ಗಾಯಕಿ ತಪು ಮಿಶ್ರಾ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. 36 ವರ್ಷದ ಒಡಿಯಾ ಪ್ಲೇ ಬ್ಲಾಕ್ ಸಿಂಗರ್ ತಪು ಮಿಶ್ರಾ, ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ.

ಬಾಯ್‌ಫ್ರೆಂಡ್‌ ಜೊತೆ ಲೀವ್‌ ಇನ್‌ಗೆ ಪ್ಲಾನ್‌ ಮಾಡುತ್ತಿದ್ದರಾ ಜಾಕ್ವೆಲಿನ್?...

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ಸಂತೋಷದಿಂದ ತೇಲಾಡುತ್ತಿದ್ದಾರೆ. ತಮ್ಮ ಕೆರಿಯರ್‌ನ ಟಾಪ್‌ನಲ್ಲಿರುವ ಶ್ರೀಲಂಕಾ ಚೆಲುವೆಯ ಪರ್ಸನಲ್‌ ಲೈಫ್‌ ಸಹ ಸದ್ದು ಮಾಡುತ್ತಿವೆ. ನಟಿ ತಮ್ಮ ಬಾಯ್‌ಫ್ರೆಂಡ್‌ ಜೊತೆ ಲೀವ್‌ ಇನ್‌ಗೆ ಪ್ಲಾನ್‌ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 

ಪಿಎಫ್‌ ನಿಯಮಗಳಲ್ಲಿ ಬದಲಾವಣೆ: ಹೀಗ್ಮಾಡದಿದ್ರೆ EPF ಹಣಕ್ಕೆ ಕತ್ತರಿ!...

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದರ ಅನ್ವಯ UAN ಅಕೌಂಟ್‌ ಜೊತೆ ಆಧಾರ್‌ ಕಾರ್ಡ್‌ ಲಿಂಕ್ ಮಾಡದ ಉದ್ಯೋಗಿಗಳ ಖಾತೆಗೆ ಇನ್ಮುಂದೆ ಹಣ ಕ್ರೆಡಿಟ್ ಆಗುವುದಿಲ್ಲ. ಹೌದು ಇಪಿಎಫ್‌ಒ ಯುಎಎನ್ ಖಾತೆ ಜೊತೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ನೀಡಲಾಗಿದ್ದ ಸಮಯವನ್ನು  2021ರ ಜೂನ್ 1ರಿಂದ 2021 ರ ಸೆಪ್ಟೆಂಬರ್‌ 1rವರೆಗೆ ವಿಸ್ತರಿಸಿದೆ. ತಪ್ಪಿದಲ್ಲಿ ಪಿಎಫ್ ಹಣ ಸೇರಿ ಇತರ ಅನುಕೂಲಗಳು ಕೈತಪ್ಪಲಿವೆ.

ಮ್ಯಾನ್‌ಹೋಲ್‌ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಯ್ತು: ಸಂಚಾರಿ ವಿಜಯ್ ಸ್ನೇಹಿತನ ಸ್ಪಷ್ಟನೆ!...

 ರಸ್ತೆ ಅಪಘಾತದಿಂದ ಮೃತಪಟ್ಟ ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಕೊನೆಯ ಕ್ಷಣದ ಬಗ್ಗೆ ಸ್ನೇಹಿತ ಬ್ರಿಜೇಶ್ ಮಾತನಾಡಿದ್ದಾರೆ. 

ಲಾಕ್‌ಡೌನ್ ನಿಯಮ ಮೀರಿ ಮದುವೆ, ಸ್ಥಳಕ್ಕೆ ಭೇಟಿ ನೀಡಿ ಮದುವೆ ನಿಲ್ಲಿಸಿದ ಅಧಿಕಾರಿಗಳು...

ಲಾಕ್ ಡೌನ್ ನಡುವೆಯೂ ಮಂಗಳಾದೇವಿ ದೇವಸ್ಥಾನದಲ್ಲಿ ನಾಲ್ಕು ಜೋಡಿಗಳ ಅದ್ಧೂರಿ ಮದುವೆ ಆಯೋಜಿಸಲಾಗಿತ್ತು. ಸರಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮದುವೆ ಏರ್ಪಡಿಸಿದ್ದ ದೇವಸ್ಥಾನದ ಆಡಳಿತ ಮಂಡಳಿಯನ್ನು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಮದುವೆಯನ್ನು ನಿಲ್ಲಿಸಿದ್ದಾರೆ. 

Follow Us:
Download App:
  • android
  • ios