ಸಿಯಾಚಿನ್ ಸನಿಹ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ರಸ್ತೆ ನಿರ್ಮಾಣ, ಸ್ಯಾಟಲೈಟ್ ದೃಶ್ಯದಿಂದ ಖಚಿತ
ಹೊಸ ರಸ್ತೆಯು ಸಿಯಾಚಿನ್‌ನ ಉತ್ತರಕ್ಕೆ ಆಕ್ರಮಿತ ಕಾಶ್ಮೀರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಚೀನಾದ ಯೋಜನೆಯ ಪ್ರಮುಖ ಭಾಗವಾಗಿದೆ.
ನವದೆಹಲಿ (ಏ.25): ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಭದ್ರತಾ ಆತಂಕವನ್ನು ಉಂಟು ಮಾಡುವ ಬೆಳವಣಿಗೆಯಲ್ಲಿ, ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಒಂದು ಭಾಗ ಅಥವಾ ಸಿಯಾಚಿನ್ ಗ್ಲೇಸಿಯರ್‌ಗೆ ಸಮೀಪದಲ್ಲಿ ಕಾಂಕ್ರಿಟ್ ರಸ್ತೆಯ ನಿರ್ಮಾಣ ಮಾಡುತ್ತಿದೆ. ವಿಶ್ವದ ಅತೀ ಎತ್ತರದ ಯುದ್ಧಭೂಮಿ ಎನಿಸಿಕೊಂಡಿರುವ ಸಿಯಾಚಿನ್ ಸಮೀಪ ಚೀನಾ ರಸ್ತೆ ನಿರ್ಮಾಣ ಮಾಡುತ್ತಿರುವ ದೃಶ್ಯಗಳನ್ನು ಸ್ಯಾಟಲೈಟ್‌ಗಳು ಕೂಡ ಖಚಿತಪಡಿಸಿವೆ. 1963 ರಲ್ಲಿ ಪಾಕಿಸ್ತಾನ, ಆಕ್ರಮಿತ-ಕಾಶ್ಮೀರದ (PoK) ಭಾಗವಾದ ಶಾಕ್ಸ್‌ಗಾಮ್ ಕಣಿವೆಯಲ್ಲಿನ ರಸ್ತೆಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು, ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ಹೆದ್ದಾರಿ G219 ನ ವಿಸ್ತರಣೆಯಿಂದ ಇದು ಕವಲೊಡೆದಿದೆ. ಒಂದು ಸ್ಥಳದಲ್ಲಿ ಪರ್ವತಗಳ ನಡುವೆ ಕಣ್ಮರೆಯಾಗುತ್ತದೆ (ಕೋಆರ್ಡಿನೇಟ್ಸ್: 36.114783°, 76.670), ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ಬಾರಿ ಭೇಟಿ ನೀಡಿದ ಫಾರ್ವರ್ಡ್ ಪ್ರದೇಶವಾದ ಸಿಯಾಚಿನ್ ಗ್ಲೇಸಿಯರ್‌ನಲ್ಲಿರುವ ಇಂದಿರಾ ಕಲ್‌ನ ಅಂದರೆ ಭಾರತದ ಉತ್ತರದ ತುದಿಯಿಂದ ಸುಮಾರು 50 ಕಿಮೀ ಉತ್ತರಕ್ಕೆ ಈ ರಸ್ತೆ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಸೆರೆಹಿಡಿಯಲಾದ ಉಪಗ್ರಹ ಚಿತ್ರಗಳನ್ನು ಭಾರತದಲ್ಲಿಯೂ ಪರಿಶೀಲನೆ ಮಾಡಲಾಗಿದೆ. ಕಳೆದ ವರ್ಷ ಜೂನ್ ಮತ್ತು ಆಗಸ್ಟ್ ನಡುವೆ ರಸ್ತೆಯನ್ನು ನಿರ್ಮಾಣ ಮಾಡಿರುವ ಸಾಧ್ಯತೆ ಇದೆ..
"ಈ ರಸ್ತೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಮತ್ತು ಭಾರತವು ಚೀನಾದೊಂದಿಗೆ ತನ್ನ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಬೇಕು" ಎಂದು ಕಾರ್ಗಿಲ್, ಸಿಯಾಚಿನ್ ಗ್ಲೇಸಿಯರ್ ಮತ್ತು ಪೂರ್ವ ಲಡಾಖ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ಭಾರತೀಯ ಸೇನೆಯ ಫೈರ್ & ಫ್ಯೂರಿ ಕಾರ್ಪ್ಸ್‌ನ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಕೇಶ್ ಶರ್ಮಾ ಹೇಳಿದ್ದಾರೆ.
ಎಕ್ಸ್‌ನಲ್ಲಿ 'ನೇಚರ್ ದೇಸಾಯಿ' ಎಂದು ಕರೆದುಕೊಳ್ಳುವ ಇಂಡೋ-ಟಿಬೆಟಿಯನ್ ಗಡಿಯ ವೀಕ್ಷಕರು ಈ ನಿರ್ಮಾಣವನ್ನು ಮೊದಲು ಫ್ಲ್ಯಾಗ್ ಮಾಡಿದರು. ಈ ರಸ್ತೆಯು ಟ್ರಾನ್ಸ್-ಕಾರಕೋರಂ ಟ್ರಾಕ್ಟ್‌ನಲ್ಲಿದೆ - ಇದು ಐತಿಹಾಸಿಕವಾಗಿ ಕಾಶ್ಮೀರದ ಭಾಗವಾಗಿದೆ ಮತ್ತು ಭಾರತದಿಂದ ಹಕ್ಕು ಸಾಧಿಸಲ್ಪಟ್ಟಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರ ಸರ್ಕಾರವು ಪ್ರಕಟಿಸಿದ ಇತ್ತೀಚಿನ ಅಧಿಕೃತ ನಕ್ಷೆಯು ಈ ಪ್ರದೇಶವನ್ನು ಭಾರತೀಯ ಪ್ರದೇಶವೆಂದು ತೋರಿಸುವುದನ್ನು ಮುಂದುವರೆಸಿದೆ.
ಜಾಗತಿಕ ರಕ್ಷಣಾ ವೆಚ್ಚದಲ್ಲಿ ಶೇ.6.8ರಷ್ಟು ಏರಿಕೆ: ಭಾರತಕ್ಕೆ 4ನೇ ಸ್ಥಾನ
ಸುಮಾರು 5,300 ಚದರ ಕಿಲೋಮೀಟರ್‌ಗಳಷ್ಟು ಹರಡಿರುವ ಪ್ರದೇಶವನ್ನು 1947 ರ ಯುದ್ಧದಲ್ಲಿ ಪಾಕಿಸ್ತಾನ ವಶಪಡಿಸಿಕೊಂಡಿತು ಮತ್ತು 1963 ರಲ್ಲಿ ಸಹಿ ಮಾಡಿದ ದ್ವಿಪಕ್ಷೀಯ ಗಡಿ ಒಪ್ಪಂದದ ಭಾಗವಾಗಿ ಚೀನಾಕ್ಕೆ ಹಸ್ತಾಂತರಿಸಲಾಯಿತು. ಆದರೆ, ಈ ಒಪ್ಪಂದವನ್ನು ಭಾರತ ಮಾನ್ಯ ಮಾಡಿಲ್ಲ.
ಭಾರಿ ಮಳೆಗೆ ಕೊಚ್ಚಿ ಹೋದ ಹೆದ್ದಾರಿ: ಚೀನಾಗೆ ಹೊಂದಿಕೊಂಡಿರುವ ಭಾರತದ ಗ್ರಾಮಕ್ಕೆ ಸಂಪರ್ಕ ಕಡಿತ
ಆಕ್ರಮಿತ ಕಾಶ್ಮೀರದ ಈ ಭಾಗದಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗುತ್ತದೆ ಎಂದು ಭಾರತೀಯ ರಕ್ಷಣಾ ತಜ್ಞರು ಬಹಳ ಹಿಂದಿನಿಂದಲೂ ವಾದಿಸಿದ್ದಾರೆ. ಅಂತಹ ಹೆಚ್ಚಿನ ಮೂಲಸೌಕರ್ಯ ಯೋಜನೆಗಳು ಈ ಪರ್ವತ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಭದ್ರತಾ ಸನ್ನಿವೇಶಕ್ಕೆ ಬೆದರಿಕೆ ಹಾಕಬಹುದು ಎಂಬ ಆತಂಕವೂ ಇದೆ.