Test Championship  

(Search results - 50)
 • <p><strong>6. Ben Stokes (England)</strong></p>

  Cricket18, Jul 2020, 6:21 PM

  ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಟಾಪ್ 7 ಬ್ಯಾಟ್ಸ್‌ಮನ್‌ಗಳಿವರು

  2019ರ ಏಕದಿನ ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಯಿತು. ಉತ್ತಮವಾಗಿ ಹಾಗೆಯೇ ಅಷ್ಟೇ ರೋಚಕವಾಗಿ ಸಾಗುತ್ತಿದ್ದ ಟೆಸ್ಟ್ ಚಾಂಪಿಯನ್‌ಶಿಪ್‌ ಕೊರೋನಾ ಹೆಮ್ಮಾರಿ ಕಂಟಕವಾಗಿ ಪರಿಣಮಿಸಿತು. ಜಗತ್ತಿನಾದ್ಯಂತ ಮೂರ್ನಾಲ್ಕು ತಿಂಗಳು ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿ ಬಿಟ್ಟಿತು.
  ಆದರೆ ಇದೀಗ ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕ್ರಿಕೆಟ್ ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲೇ ಆತಿಥೇಯರನ್ನು ಬಗ್ಗುಬಡಿಯುವಲ್ಲಿ ಕೆರಿಬಿಯನ್ ಪಡೆ ಯಶಸ್ವಿಯಾಗಿದೆ. ಆದರೆ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡದ ಮೇಲೆ ಇಂಗ್ಲೆಂಡ್ ಎರಡನೇ ದಿನದಾಟದಂತ್ಯಕ್ಕೆ ಸವಾರಿ ಮಾಡಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಆರಂಭಿಕ ಸಿಬ್ಲಿ ಆಕರ್ಷಕ ಶತಕ ಚಚ್ಚಿದ್ದಾರೆ. ಆದರೆ ಹೊಸ ವಿಷ್ಯಾ ಏನಪ್ಪಾ ಅಂದ್ರೆ ಬೆನ್ ಸ್ಟೋಕ್ಸ್ ಶತಕ ಸಿಡಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಶತಕ ಬಾರಿಸಿದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. 
  ಜುಲೈ 18, 2020ರ ಅಂತ್ಯದ ವೇಳೆಗೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಟಾಪ್ 7 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • Cricket23, Apr 2020, 9:48 AM

  ಆಸೀಸ್‌ ಜತೆ 5 ಟೆಸ್ಟ್‌ ಟೆಸ್ಟ್ ಸರಣಿ ಪ್ರಸ್ತಾಪದ ಬಗ್ಗೆ ತುಟಿ ಬಿಚ್ಚಿದ ಬಿಸಿಸಿಐ

  ‘ಕ್ರಿಕೆಟ್‌ ಆಸ್ಪ್ರೇಲಿಯಾ ಪ್ರಸ್ತಾಪಿಸಿದ್ದರ ಬಗ್ಗೆ ಚಿಂತನೆ ನಡೆಸಿಲ್ಲ. ಆಸ್ಪ್ರೇಲಿಯಾದಲ್ಲಿ ಸೆ.30ರ ವರೆಗೂ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದೆ. ಟಿ20 ವಿಶ್ವಕಪ್‌ ನಡೆಯಬೇಕಿದೆ. ಆನಂತರವಷ್ಟೇ ಟೆಸ್ಟ್‌ ಸರಣಿ ಬಗ್ಗೆ ಯೋಚನೆ. ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುತ್ತೇವೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

 • Cricket22, Apr 2020, 10:42 AM

  ಭಾರತ-ಆಸೀಸ್‌ ಟೆಸ್ಟ್‌ ಸರಣಿಯಲ್ಲಿ 5 ಪಂದ್ಯ?

  ಬಿಸಿಸಿಐನೊಂದಿಗೆ ಚರ್ಚಿಸುವುದಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. ಇದೇ ವೇಳೆ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
   

 • ভারতীয় দল

  Cricket18, Apr 2020, 10:29 AM

  ಟೆಸ್ಟ್‌ ಚಾಂಪಿಯನ್‌ಶಿಪ್‌ ರದ್ದು ಪಡಿಸಲು ಐಸಿಸಿ ಮೇಲೆ ಹೆಚ್ಚಿದ ಒತ್ತಡ

  ಇದುವರೆಗೂ ಎಲ್ಲಾ 9 ತಂಡಗಳು ಸೇರಿ ಒಟ್ಟು 56 ಟೆಸ್ಟ್ ಪಂದ್ಯಗಳನ್ನಾಡಿವೆ. ಟೀಂ ಇಂಡಿಯಾ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 296 ಅಂಕ ಗಳಿಸಿರುವ ಆಸ್ಟ್ರೇಲಿಯಾ ಹಾಗೂ 180 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್‌ ತಂಡಗಳು ಟಾಪ್ 3 ಪಟ್ಟಿಯಲ್ಲಿ ಭದ್ರವಾಗಿವೆ.

 • করোনা ভাইরাসের জেরে স্তব্ধ খেল বিশ্ব, চলছে শুধু 'খেলা ভাঙার খেলা'

  Cricket21, Mar 2020, 12:49 PM

  ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ವಿಶ್ವ ಟಿ20ಗೂ ಕೊರೋನಾ ಅಡ್ಡಿ?

  ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿ ಮಾತ್ರವಲ್ಲ ಇನ್ನೂ ಹಲವು ಟೂರ್ನಿಗಳನ್ನು ಮುಂದೂಡಬೇಕಾಗಬಹುದು ಎನ್ನುವ ಲೆಕ್ಕಾಚಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಕಿದೆ.

 • Bumrah

  Cricket1, Mar 2020, 9:09 AM

  ಶಮಿ-ಬುಮ್ರಾ ಝಲಕ್, ನ್ಯೂಜಿಲೆಂಡ್ 235ಕ್ಕೆ ಆಲೌಟ್

  ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 63 ರನ್ ಬಾರಿಸಿದ್ದ ನ್ಯೂಜಿಲೆಂಡ್ ಎರಡನೇ ದಿನದಾಟದ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಬ್ಲಂಡೆಲ್ ತಮ್ಮ ಖಾತೆಗೆ ಒಂದು ರನ್ ಸೇರಿಸಿ ವಿಕೆಟ್ ಒಪ್ಪಿಸಿದರು.

 • tom latham and henry nicholls

  Cricket29, Feb 2020, 12:56 PM

  2ನೇ ಟೆಸ್ಟ್: ಕಿವೀಸ್‌ಗೆ ಮೊದಲ ದಿನದ ಗೌರವ

  ಭಾರತವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಕಿವೀಸ್, ಬ್ಯಾಟಿಂಗ್‌ನಲ್ಲೂ ದಿಟ್ಟ ಹೆಜ್ಜೆಯಿಟ್ಟಿದೆ. ಮೊದಲ ವಿಕೆಟ್‌ಗೆ ಟಾಮ್ ಲಾಥಮ್(27) ಹಾಗೂ ಟಾಮ್ ಬ್ಲಂಡೆಲ್(29) ಮುರಿಯದ 63 ರನ್‌ಗಳ ಜತೆಯಾಟವಾಡಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. 

 • Team India
  Video Icon

  Cricket28, Feb 2020, 5:30 PM

  ಕಿವೀಸ್ ಎದುರು ಕಮ್‌ಬ್ಯಾಕ್ ಮಾಡುತ್ತಾ ಟೀಂ ಇಂಡಿಯಾ..?

  ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿರುವ ಭಾರತ, ಸರಣಿ ಸಮಬಲ ಸಾಧಿಸಬೇಕಿದ್ದರೆ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯ ಡ್ರಾ ಆದರೂ ಸರಣಿ ಕಿವೀಸ್ ಪಾಲಾಗಲಿದೆ.

 • ishant sharma

  Cricket28, Feb 2020, 12:43 PM

  ಕಿವೀಸ್ ಎದುರಿನ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಶಾಂತ್ ಶರ್ಮಾ..!

  ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಫೆಬ್ರವರಿ 29ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ. ಟೆಸ್ಟ್ ಸರಣಿಯನ್ನು ಸಮಬಲ ಮಾಡಿಕೊಳ್ಳಬೇಕಿದ್ದರೆ ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ಗೆ ಶರಣಾಗಿತ್ತು. 

 • KL Rahul

  Cricket26, Feb 2020, 11:12 AM

  ಟೆಸ್ಟ್‌ನಿಂದ ರಾಹುಲ್‌ ಕೈಬಿಟ್ಟಿದ್ದಕ್ಕೆ ಕಿಡಿಕಾರಿದ ಟೀಂ ಇಂಡಿಯಾ ಮಾಜಿ ನಾಯಕ

  ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದ ಭಾರತ, ಕಿವೀಸ್‌ ವಿರುದ್ಧ ಮೊದಲ ಸೋಲು ಕಂಡಿದೆ. ಸೋಲಿನ ಕಾರಣ ಹುಡುಕುತ್ತಿರುವ ವೇಳೆಯಲ್ಲಿ ಕಪಿಲ್‌ ದೇವ್‌, ಭಾರತ ಟೆಸ್ಟ್‌ ತಂಡದಿಂದ ಕರ್ನಾಟಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಅವರನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

 • ভারত বনাম নিউজিল্যান্ড
  Video Icon

  Cricket25, Feb 2020, 5:34 PM

  ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವೇನು..?

  ಐಸಿಸಿ ಟೆಸ್ಟ್ ನಂಬರ್ 01 ತಂಡವಾಗಿರುವ ಟೀಂ ಇಂಡಿಯಾ, ಕಿವೀಸ್ ಎದುರು ದಯಾನೀಯ ಸೋಲು ಕಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ನೀರಸ ಪ್ರದರ್ಶನ ತೋರುವ ಮೂಲಕ ನಿರಾಸೆ ಅನುಭವಿಸಿತ್ತು.

 • virat kohli captain

  Cricket25, Feb 2020, 12:49 PM

  ಒಂದು ಪಂದ್ಯ ಸೋತಿದ್ದಕ್ಕೆ ಆಕಾಶ ಕಳಚಿ ಬೀಳಲ್ಲ: ಕೊಹ್ಲಿ!

  ‘ಎಲ್ಲೇ ಆಡಿದರೂ ಗೆಲ್ಲಬೇಕು ಎಂದರೆ ಉತ್ತಮ ಆಟವಾಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೂ ಸುಲಭವಲ್ಲ. ಪ್ರತಿ ತಂಡವೂ ಎದುರಾಳಿಯನ್ನು ಸೋಲಿಸಲೆಂದೇ ಆಡುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಕೊಹ್ಲಿ ಹೇಳಿದರು.

 • new zealand win

  Cricket24, Feb 2020, 10:04 AM

  ಟೀಂ ಇಂಡಿಯಾಗೆ 10 ವಿಕೆಟ್‌ಗಳ ಹೀನಾಯ ಸೋಲು, ಕಿವೀಸ್‌ಗೆ 100ನೇ ಐತಿಹಾಸಿಕ ಟೆಸ್ಟ್ ಗೆಲುವು

  144/4 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಟಿಮ್ ಸೌಥಿ ಆಘಾತ ನೀಡಿದರು. ಪ್ರವಾಸಿ ಭಾರತ ತಂಡ  191 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 9 ರನ್‌ಗಳ ಸುಲಭ ಗುರಿ ನೀಡಿತು.

 • Ishant Sharma

  Cricket22, Feb 2020, 12:45 PM

  ಮೊದಲ ಟೆಸ್ಟ್: ನ್ಯೂಜಿಲೆಂಡ್‌ಗೆ ಅಲ್ಪ ಮುನ್ನಡೆ, ಕಮ್‌ಬ್ಯಾಕ್ ಮಾಡಿದ ಭಾರತ

  ಭಾರತ ತಂಡವನ್ನು ಕೇವಲ 165 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಬೃಹತ್ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬೃಹತ್ ಮೊತ್ತದ ಕನಸಿಗೆ ಟೀಂ ಇಂಡಿಯಾ ವೇಗಿಗಳು ತಣ್ಣೀರೆರಚಿದ್ದಾರೆ. 

 • test team

  Cricket22, Feb 2020, 9:28 AM

  ಟೀಂ ಇಂಡಿಯಾ 165ಕ್ಕೆ ಆಲೌಟ್, ಬೃಹತ್ ಮೊತ್ತದತ್ತ ಕಿವೀಸ್

  ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿದ್ದ ಭಾರತ, ಎರಡನೇ ದಿನದಾಟದಾರಂಭದಲ್ಲೇ ನಾಟಕೀಯ ಕುಸಿತ ಕಂಡಿತು. ರಹಾನೆ(45) ತಮ್ಮ ಖಾತೆಗೆ 7 ರನ್ ಸೇರಿಸಿ ವಿಕೆಟ್ ಒಪ್ಪಿಸಿದರೆ, ಪಂತ್(19) ಬೇಗನೇ ವಿಕೆಟ್ ಒಪ್ಪಿಸಿದರು.