Asianet Suvarna News Asianet Suvarna News

'ಇವತ್ತು ರಾತ್ರಿ ಹೋಟೆಲ್‌ ರೂಮ್‌ಗೆ ಬರ್ಬೇಕು..' ಫ್ಯಾಶನ್‌ ಕಂಪನಿ ಸಿಇಒ Ankiti Bose ಮೇಲೆ ಲೈಂಗಿಕ ಕಿರುಕುಳ!

ಪ್ರಖ್ಯಾತ ಫ್ಯಾಶನ್‌ ಕಂಪನಿ ಹಾಗೂ ಅಪ್ಲಿಕೇಶನ್‌ ಆಗಿರುವ ಜಿಲಿಂಗೋದ ಮಾಜಿ ಸಿಇಒ ಅಂಕಿತಿ ಬೋಸ್‌, ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಒಒ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

Sexual Harassment Case Zilingo CEO Ankiti Bose Co-Founder and COO san
Author
First Published Apr 25, 2024, 7:14 PM IST | Last Updated Apr 25, 2024, 7:14 PM IST

ಮುಂಬೈ (ಏ.25): ಬಿ2ಬಿ ಫ್ಯಾಶನ್‌ ಸ್ಟಾರ್ಟ್‌ಅಪ್‌ ಜಿಲಿಂಗೋದ ಮಾಜಿ ಮುಖ್ಯ ವ್ಯವಸ್ಥಾಪಕಿ ಅಂಕಿತಿ ಬೋಸ್‌, ಕಂಪನಿಯ ಸಹ ಸಂಸ್ಥಾಪಕ ಧ್ರುವ್‌ ಕಪೂರ್‌ ಹಾಗೂ ಕಂಪನಿಯ ಮಾಜಿ ಮುಖ್ಯ ವ್ಯವಾಹಾರಾಧಿಕಾರಿ ಆದಿ ವೈದ್ಯ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲು ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಎ) ಮತ್ತು 354 (ಡಿ) ಅಡಿಯಲ್ಲಿ ಇಬ್ಬರ ವಿರುದ್ಧ ಮಂಗಳವಾರ ಉಪನಗರ ಮುಂಬೈನ ಕಸ್ತೂರ್ಬಾ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಪೊಲೀಸರು ಇನ್ನೂ ಕಪೂರ್ ಮತ್ತು ವೈದ್ಯ ಸವರಿಗೆ ಸಮನ್ಸ್‌ ನೀಡಬೇಕಿದೆ. ಎರಡೂ ಸೆಕ್ಷನ್‌ಗಳು ಜಾಮೀನು ರಹಿತವಾಗಿದ್ದು, ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಎಫ್‌ಐಆರ್‌ನ ವಿವರಗಳ ಪ್ರಕಾರ, ಮಾರ್ಚ್‌ 2021ರಲ್ಲಿ ಇಬ್ಬರೂ ಕೂಡ ಅಂಕಿತಿ ಬೋಸ್‌ಗೆ ಬೆದರಿಕೆ ಹಾಕಿದ್ದಲ್ಲದೆ, ತಮ್ಮೊಂದಿಗೆ ಲೈಂಗಿಕವಾಗಿ ಸಹಕಾರ ನೀಡುವಂತೆ ಹೇಳಿದ್ದರು ಎಂದು ತಿಳಿಸಿದ್ದಾರೆ.

'ಇಬ್ಬರೂ ಕೂಡ ಹೊತ್ತಲ್ಲದ ಹೊತ್ತಿನಲ್ಲಿ ನನಗೆ ಕರೆ ಆಡುತ್ತಿದ್ದರು. ಹಾಗೇನಾದರೂ ಅವರ ಲೈಂಗಿಕ ಆಸೆಗಳನ್ನು ಈಡೇರಿಸದೇ ಇದ್ದಲ್ಲಿ, ಅವರು ಹೇಳಿದ ಹೋಟೆಲ್‌ಗೆ ಬರದೇ ಇದ್ದಲ್ಲಿ ನನ್ನನ್ನು ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿದ್ದರು. ಇದು ನನಗೆ ಸಾಕಷ್ಟು ಮಾನಸಿಕ ಯಾತನೆ ಹಾಗೂ ಒತ್ತಡ ನೀಡಿತ್ತು' ಎಂದು ಅಂಕಿತಿ ಬೋಸ್‌ ಬರೆದಿದ್ದಾರೆ.  ಕಂಪನಿಯ ಹದಗೆಡುತ್ತಿರುವ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡದಂತೆ ಆಕೆಗೆ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಇನ್ನೊಂದೆಡೆ ಅಂಕಿತಿ ಬೋಸ್‌ ಅವರ ಆರೋಪಗಳು ಆಧಾರರಹಿತ ಎಂದು ಧ್ರುವ್‌ ಕಪೂರ್‌ ಹೇಳಿದ್ದಾರೆ. ಇದು ಸಂಪೂರ್ಣವಾಗಿ ಆಧಾರರಹಿತ, ಅಸತ್ಯ ಮತ್ತು ದುರುದ್ದೇಶಪೂರಿತ" ಎಂದು ಹೇಳಿದ್ದಾರೆ. "ಒಂದು ಸಂಪೂರ್ಣ ತನಿಖೆ ಈಗಾಗಲೇ ಆಕೆ ಹೇಳಿದ್ದು ಸುಳ್ಳು ಎಂದು ಸಾಬೀತಾಗಿದೆ. ಇದರ ಆಧಾರದ ಮೇಲೆ ಆಕೆಯನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಇದು ಪ್ರತೀಕಾರದ ವರ್ತನೆಯಲ್ಲದೆ ಬೇರೇನೂ ಅಲ್ಲ' ಎಂದು ಅವರು ತಿಳಿಸಿದ್ದಾರೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಆದಿ ವೈದ್ಯ ನನಗೆ ನಷ್ಟವನ್ನುಂಟುಮಾಡುವ ವ್ಯವಹಾರಗಳನ್ನು ತಪ್ಪಾಗಿ ಆರೋಪಿಸುವ ಮೂಲಕ ಮತ್ತು ನನ್ನ ಹೆಸರಿನಲ್ಲಿ ವಿವಿಧ ವ್ಯಕ್ತಿಗಳಿಗೆ ವ್ಯಾಪಾರದ ಸಾಲವನ್ನು ವಿಸ್ತರಿಸುವ ಮೂಲಕ ದುಷ್ಕೃತ್ಯದಲ್ಲಿ ತೊಡಗಿದ್ದಾರೆ. ನಂತರ ಅವರು ನನ್ನ ಹಿಂದಿನ ಕಂಪನಿಯಲ್ಲಿ ಎಲ್ಲಾ ಕಾರ್ಯಾಚರಣೆಯ ವ್ಯವಹಾರಗಳನ್ನು ನಡೆಸುತ್ತಿದ್ದರೂ ಸಹ, ಹೂಡಿಕೆದಾರರಿಗೆ ನನ್ನನ್ನು ತಪ್ಪಾಗಿ ಸಿಲುಕಿಸುವ ಮೂಲಕ ನನಗೆ ಬೆದರಿಕೆ ಹಾಕಲು ಆ ವ್ಯವಹಾರಗಳನ್ನು ಬಳಸಿದರು. ಬಹುಕೋಟಿ ಮೌಲ್ಯದ ನನ್ನ ಷೇರುಗಳನ್ನು ವೈದ್ಯ ಮೋಸದಿಂದ ಸ್ವಾಧೀನಪಡಿಸಿಕೊಳ್ಳಲು ನನಗೆ ಬೆದರಿಕೆ ಹಾಕಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

9 ಬ್ಯುಸಿನೆಸ್‌ನಲ್ಲಿ ಲಾಸ್‌ ಆದ ಬಳಿಕ ಖಿನ್ನತೆಯಲ್ಲಿದ್ದ ಉದ್ಯಮಿ ಬಳಿಕ ಕಟ್ಟಿದ್ದು 1.40 ಲಕ್ಷ ಕೋಟಿಯ ಸಾಮ್ರಾಜ್ಯ!

ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬದ ಬಗ್ಗೆಯೂ ಆಕೆಯ ಮಾಹಿತಿ ನೀಡಿದ್ದಾರೆ. ಮೇ 2022 ರಲ್ಲಿ ವಜಾಗೊಳಿಸಿದಾಗ, ಅದೇ ವರ್ಷದ ಜೂನ್‌ನಲ್ಲಿ ಸ್ವತಃ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೆ.ನಂತರ ನಾನು ಹೊಸ ಕೆಲಸದಲ್ಲಿ ಬ್ಯುಸಿಯಾಗಿದ್ದೆ. ಕನಿಷ್ಠ ದೂರು ನೀಡಲು ನನಗೆ ರಜೆ ಕೂಡ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.

ಕಂಕುಳ ಕೂದಲು‌ ಮಾರಿ‌ ಲಕ್ಷ ಗಳಿಸ್ತಿದ್ದಾಳೆ.. ಖರೀದಿಸೋದು ಯಾರು?

Latest Videos
Follow Us:
Download App:
  • android
  • ios