Asianet Suvarna News

ರಾಷ್ಟ್ರ ರಾಜಧಾನಿಯಲ್ಲಿ ಲಘು ಭೂಕಂಪನ; ಆತಂಕದಲ್ಲಿ ಜನ

  • ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಭೂಕಂಪನ ಭೀತಿ
  • ದೆಹಲಿ, ಪಂಜಾಬ್ ಭಾಗದಲ್ಲಿ ಸಂಭವಿಸಿದ ಭೂಕಂಪನ
  • ಭಯಭೀತರಾಗಿ ಮನೆ, ಆಪಾರ್ಟ್‌ಮೆಂಟ್‌ನಿಂದ ಹೊರಬಂದ ಜನ
Low intensity earthquake hit Delhi Punjabi Bagh area with a magnitude 2 1 on Richter Scale ckm
Author
Bengaluru, First Published Jun 20, 2021, 2:52 PM IST
  • Facebook
  • Twitter
  • Whatsapp

ನವದೆಹಲಿ(ಜೂ.20): ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿರುವ ಭಾರತಕ್ಕೆ ಇದೀಗ ಭೂಕಂಪನ ಭೀತಿ ಆವರಿಸಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಪಂಜಾಬಿ ಭಾಗ್ ವಲಯಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆಯ ಭೂಕಂಪನ ದಾಖಲಾಗಿದೆ.

ವಿಜಯಪುರದ ಹಲವೆಡೆ ಭೂಕಂಪನದ ಅನುಭವ...

ಮಧ್ಯಾಹ್ನ 12.02 ಗಂಟೆಗೆ ಭೂಮಿ ಲಘುವಾಗಿ ಕಂಪಿಸಿದೆ.  ಪಂಜಾಬಿ ಭಾಗ್ ವಲಯ ಭೂಕಂಪದ ಕೇಂದ್ರಬಿಂದವಾಗಿದೆ.  28.67 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 77.14 ಡಿಗ್ರಿ ಪೂರ್ವ ರೇಖಾಂಶದಲ್ಲಿ ಭೂಮಿ ಕಂಪಿಸಿದೆ. ಸುಮಾರು 7 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ.

ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭಸಿಲ್ಲ. ದೆಹಲಿಯ ಪಂಜಾಬಿ ಭಾಗ್ ಜನ ಭೂಕಂಪನದಿಂದ ಮನಯಿಂದ ಹೊರಗೋಡಿದ್ದಾರೆ. ಕೊರೋನಾ ಸಂಕಷ್ಟದ ನಡುವೆ ಭೂಕಂಪನ ಸಂಭವಿಸಿರುವುದು ಜನರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ. 

ಚೀನಾ-ಮಯನ್ಮಾರ್ ಗಡಿಯಲ್ಲಿ ಭೂಕಂಪನ, ಮೂವರ ಸಾವು

ಇಂದು ಬೆಳಗ್ಗೆ ಈಶಾನ್ಯ ರಾಜ್ಯಗಳಲ್ಲೂ ಲಘು ಭೂಕಂಪನ ಸಂಭವಿಸಿದೆ. ಅರುಣಾಚಲದಲ್ಲಿ 3.1 ಹಾಗೂ ಮಣಿಪುರದಲ್ಲಿ 3.6 ರಷ್ಟು ತೀವ್ರತೆ ಲಘು ಭೂಕಂಪ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Follow Us:
Download App:
  • android
  • ios