Asianet Suvarna News Asianet Suvarna News

ಬೊಮ್ಮಾಯಿ ಸರ್ಕಾರಕ್ಕೆ ಬೆಲೆ ಏರಿಕೆ ಬಿಸಿ, ಬೋಲ್ಡ್ ಅವತಾರದಲ್ಲಿ ಶಾನ್ವಿ; ಸೆ.13ರ ಟಾಪ್ 10 ಸುದ್ದಿ!

ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಸದನದ ಆರಂಭಗೊಂಡ ಮೊದಲ ದಿನ ಬೊಮ್ಮಾಯಿ ಸರ್ಕಾರ ಬೆಲೆ ಏರಿಕೆ ಪ್ರತಿಭಟನೆ ಎದುರಿಸಿದೆ. ಕಾಂಗ್ರೆಸ್ ಪ್ರತಿಭಟನೆಯನ್ನು ಬಿಜೆಪಿ ವ್ಯಂಗ್ಯವಾಡಿದೆ. ಓಲಾ ದಿಂದ 10,000 ಮಹಿಳಾ ಉದ್ಯೋಗಿಗಳ ನೇಮಕ, ನಾಲ್ಕನೆ ಸಾಲಿನಲ್ಲಿ ಬಿಎಸ್‌ವೈ, ಶೆಟ್ಟರ್ ಸೇರಿದಂತೆ ಸೆಪ್ಟೆಂಬರ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
karnataka assembly session to shanvi srivastava top 10 news of september 13 ckm
Author
Bengaluru, First Published Sep 13, 2021, 4:42 PM IST
  • Facebook
  • Twitter
  • Whatsapp

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ನಿಧನ!

karnataka assembly session to shanvi srivastava top 10 news of september 13 ckm

ಕಳೆದ ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್(80) ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಾಯಕವೇ ಕೈಲಾಸ: ಮೋದಿ 7 ವರ್ಷವಾದರೆ ಯೋಗಿ 4 ವರ್ಷ, ಒಂದೂ ರಜೆ ಪಡೆದಿಲ್ಲ!

karnataka assembly session to shanvi srivastava top 10 news of september 13 ckm

ನರೇಂದ್ರ ಮೋದಿ 7 ವರ್ಷಗಳಲ್ಲಿ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ಇನ್ನು ಅತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ವಿಷಯದಲ್ಲಿ ಹಿಂದುಳಿಯುವುದಿಲ್ಲ ಎಂಬುವುದು ಉಲ್ಲೇಖನೀಯ. ಅವರು ಕಳೆದ 4 ವರ್ಷಗಳಲ್ಲಿ ಯಾವುದೇ ರಜೆ ತೆಗೆದುಕೊಂಡಿಲ್ಲ

ನಾಲ್ಕನೆ ಸಾಲಿನಲ್ಲಿ ಬಿಎಸ್‌ವೈ, ಶೆಟ್ಟರ್ : ಬದಲಾದ ರಾಜಕೀಯ ವಿದ್ಯಮಾನ

karnataka assembly session to shanvi srivastava top 10 news of september 13 ckm

ಬದಲಾದ ರಾಜಕೀಯ  ವಿದ್ಯಮಾನಗಳ  ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿನ  ಕುರ್ಚಿಗಳಲ್ಲಿ ಸ್ಥಾನ ಪಲ್ಲಟ ಉಂಟಾಗಿದೆ. 

T20 World Cup ಬಳಿಕ ಟೀಂ ಇಂಡಿಯಾ ಏಕದಿನ & ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‌ ಬೈ..?

karnataka assembly session to shanvi srivastava top 10 news of september 13 ckm

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ಟೀಂ ಇಂಡಿಯಾ ನಾಯಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಭಾರತೀಯ ಕ್ರಿಕೆಟ್ ಪಾಳಯದಲ್ಲಿ ಈ ಸುದ್ದಿ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ. ಅಷ್ಟಕ್ಕೂ ಟಿ20 ವಿಶ್ವಕಪ್‌ ಟೂರ್ನಿ ಕೆಲವೇ ದಿನಗಳು ಬಾಕಿ ಇರುವಾಗ ಇಂತಹದ್ದೊಂದು ಸುದ್ದಿ ಸಾಕಷ್ಟು ವೈರಲ್ ಆಗಿದೆ. 

ಬೋಲ್ಡ್ ಅವತಾರದಲ್ಲಿ ಶಾನ್ವಿ..ಎಲ್ಲಿದ್ದಾರೆ ಬೆಡಗಿ?

karnataka assembly session to shanvi srivastava top 10 news of september 13 ckm

ಸೋಶಿಯಲ್  ಮೀಡಿಯಾದಲ್ಲಿ ಹವಾ ಎಬ್ಬಿಸುವುದು ಈ ಬೆಡಗಿಗೆ ಹೊಸದೇನಲ್ಲ. ರಾಕಿಂಗ್ ಸ್ಟಾರ್ ಯಶ್ ಜತೆ ಮಾಸ್ಟರ್ ಪೀಸ್ ನಲ್ಲಿ ಕಾಣಿಸಿಕೊಂಡಿದ್ದ  ಶಾನ್ವಿ ಶ್ರೀವತ್ಸವ್ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದ್ದು ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಈ ಬಾರಿ ಸ್ವಿಸ್‌ ಬ್ಯಾಂಕಿಂದ ರಿಯಲ್‌ ಎಸ್ಟೇಟ್‌ ಮಾಹಿತಿ!

karnataka assembly session to shanvi srivastava top 10 news of september 13 ckm

ಸ್ವಿಟ್ಜರ್ಲೆಂಡ್‌ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತೀಯರ ಹಣದ ಕುರಿತ 3ನೇ ವರದಿ ಶೀಘ್ರವೇ ಭಾರತದ ಕೈ ಸೇರಲಿದೆ.

ಆತ್ಮನಿರ್ಭರ್ ಭಾರತ್; ಓಲಾ ಸ್ಕೂಟರ್‌ನಿಂದ 10,000 ಮಹಿಳಾ ಉದ್ಯೋಗಿ ನೇಮಕಾತಿ ಆರಂಭ!

karnataka assembly session to shanvi srivastava top 10 news of september 13 ckm

ಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಂಚಲನ ಮೂಡಿಸಿರುವ ಓಲಾ S1 ಹಾಗೂ S1 ಪ್ರೋ ಎಸೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 121 ಕಿ.ಮೀ ಪ್ರಯಾಣದ ರೇಂಜ್ ನೀಡಬಲ್ಲ ಈ ಸ್ಕೂಟರ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಓಲಾ ಮುಂದಿನ ಹಂತದ ಸ್ಕೂಟರ್ ಉತ್ಪಾದನೆಗೆ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ.

ಸಿಎಂ ಆಗಿ ಮೊದಲ ಬಾರಿಗೆ ಸದನದಲ್ಲಿ ಬೊಮ್ಮಾಯಿ ಮಾತು

karnataka assembly session to shanvi srivastava top 10 news of september 13 ckm

ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಸದನದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಮೊದಲಿಗೆ ಅಗಲಿದ ಗಣ್ಯರಿಗೆ ಸಿಎಂ ಸಂತಾಪವನ್ನ ಸೂಚಿಸಿದ್ದಾರೆ. ಇತ್ತೀಚೆಗೆ ಅಗಲಿದ ಶಾಸಕ ಸೇರಿ 31 ಗಣ್ಯರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪವನ್ನ ಸೂಚಿಸಿದ್ದಾರೆ. ಇದೇ ವೇಳೆ ಸಂತಾಪ ಸೂಚಕ ನಿಲುವಳಿಯನ್ನ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದ್ದಾರೆ.

'ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ರೆ ಚೆನ್ನಾಗಿರ್ತಿತ್ತು'

karnataka assembly session to shanvi srivastava top 10 news of september 13 ckm

ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ಎತ್ತಿನ ಬಂಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದು, ಇದನ್ನು ಸಚಿವ ಡಾ. ಸುಧಾಕರ್ ವ್ಯಂಗ್ಯವಾಡಿದ್ದಾರೆ. 

Follow Us:
Download App:
  • android
  • ios