ಬೋಲ್ಡ್ ಅವತಾರದಲ್ಲಿ ಶಾನ್ವಿ..ಎಲ್ಲಿದ್ದಾರೆ ಬೆಡಗಿ?
ಬೆಂಗಳೂರು(ಸೆ. 13) ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುವುದು ಈ ಬೆಡಗಿಗೆ ಹೊಸದೇನಲ್ಲ. ರಾಕಿಂಗ್ ಸ್ಟಾರ್ ಯಶ್ ಜತೆ ಮಾಸ್ಟರ್ ಪೀಸ್ ನಲ್ಲಿ ಕಾಣಿಸಿಕೊಂಡಿದ್ದ ಶಾನ್ವಿ ಶ್ರೀವತ್ಸವ್ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದ್ದು ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಶಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಅಪ್ ಡೇಟ್ ಕೊಡುತ್ತಲೇ ಇರುತ್ತಾರೆ. ಸಹೋದರಿ ಜತೆ ರೀಲ್ ವಿಡಿಯೋದಲ್ಲಿಯೂ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಕಳೆದ ವರ್ಷ ರಜಾ ದಿನ ಕಳೆದಿದ್ದಶಾನ್ವಿ ಹಂಚಿಕೊಂಡ ಪೋಟೋಗಳಿಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಾರಿ ಸಹ ಅನೇಕರು ಮೆಚ್ಚಿ ಕೊಂಡಾಡಿದ್ದಾರೆ.
ನಿಮ್ಮ ಮುಖದ ಮೇಲಿನ ಕಾಂತಿ ನಿಮ್ಮ ಭಾವನೆಗಳನ್ನು ವ್ಯಕ್ತಮಾಡುತ್ತದೆ. ಭಾವನೆಗಳು ನಿಜವಾಗಿದ್ದರೆ ಕಾಂತಿಯೂ ನಿಜವಾಗಿರುತ್ತದೆ ಎಂದು ಚೆಂದದ ಶೀರ್ಷಿಕೆ ಕೊಟ್ಟಿದ್ದಾರೆ.
ನಿಮ್ಮ ವಾರಾಂತ್ಯ ಹೇಗೆ ಇತ್ತು? ಎಂದು ಪ್ರಶ್ನೆ ಮಾಡಿ ಎಲ್ಲರಿಗೂ ಜೀವನವನ್ನು ಎಂಜಾಯ್ ಮಾಡಿ ಎಂಬ ಸಂದೇಶವನ್ನು ಶಾನ್ವಿ ಕೊಟ್ಟಿದ್ದಾರೆ . ನಟಿ ನಿಧಿ ಸುಬ್ಬಯ್ಯ ಮತ್ತು ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಸಹ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.