ಫಳ ಫಳ ಹೊಳೆಯುವ ಪ್ರಿಯಾಂಕಾ ಚೋಪ್ರಾ ಹೊಕ್ಕಳಿಗೆ 2.7 ಕೋಟಿ ಬೆಲೆ! ಅಂಥದ್ದೇನಿದೆ ನೋಡಿ..

 ಫಳ ಫಳ ಹೊಳೆಯುತ್ತಿದೆ ನಟಿ ಪ್ರಿಯಾಂಕಾ ಚೋಪ್ರಾ ಹೊಕ್ಕಳು! ಇದರಲ್ಲಿದೆ 2.7 ಕೋಟಿ ಮೌಲ್ಯದ ವಸ್ತು,  ಅಂಥದ್ದೇನಿದೆ  ನೋಡಿ! 
 

Priyanka Chopras Belly Button Diamond Ring is worth Rs two point seven Crores suc

ಕೋಟಿ ಕೋಟಿ ಎಂದರೆ ಹಲವರಿಗೆ ಅದರಲ್ಲಿಯೂ ಸೆಲೆಬ್ರಿಟಿಗಳಿಗೆ ಲೆಕ್ಕವೇ ಇಲ್ಲ ಬಿಡಿ. ಲಕ್ಷ ಎಂದರೆ ಅಲಕ್ಷ ಎನ್ನುವ ಕಾಲವಿತ್ತು. ಆದರೆ ಈಗ ಕೋಟಿಗೂ ಬೆಲೆ ಇಲ್ಲದ ಸ್ಥಿತಿ ಬಂದಿದೆ. ಕೆಲವು ಶ್ರೀಮಂತರು ಮೈತುಂಬಾ ಚಿನ್ನಾಭರಣ ತೊಟ್ಟು ಮೆರೆದರೆ, ಸೆಲೆಬ್ರಿಟಿಗಳಿಗೆ ಪಾಪ ಅವರ ಡ್ರೆಸ್‌ಗೆ ಮ್ಯಾಚ್‌ ಆಗುವಂಥ ಚಿನ್ನಾಭರಣ ತೊಡುವುದು ಕಷ್ಟವೇ. ಏಕೆಂದರೆ ಜೀನ್ಸ್‌, ಮಿನಿ ಸ್ಕರ್ಟ್, ಷಾರ್ಟ್, ಬಿಕಿನಿ ಇಂಥ ಡ್ರೆಸ್‌ಗಳನ್ನೇ ಹಾಕಿಕೊಳ್ಳುವಾಗ ಇನ್ನು ಮೈತುಂಬಾ ಆಭರಣ ತೊಡುವುದು ದೂರದ ಮಾತೇ. ಹಾಗೆಂದು ನಟಿಯರು ಸುಮ್ಮನೇ ಇರ್ತಾರೆಯೇ? ತಮ್ಮ ಡ್ರೆಸ್‌ಗೆ ಸೂಟ್‌ ಆಗುವ ಜಾಗದಲ್ಲಿ ಎಲ್ಲಿ ಬೇಕಾದರೂ ಆಭರಣ ತೊಟ್ಟುಕೊಳ್ಳುತ್ತಾರೆ. ಅಷ್ಟಕ್ಕೂ ನಟಿಯರಿಗೆ ಇಂಥದ್ದೇ ಜಾಗ ಬೇಕು ಅಂತೇನೂ ಇಲ್ಲವಲ್ಲ, ಎಲ್ಲಿಯೇ ಡಿಸೈನ್‌ ಮಾಡಿಕೊಂಡರೂ, ಟ್ಯಾಟೂ ಹಾಕಿಸಿಕೊಂಡರೂ, ಆಭರಣ ಧರಿಸಿದರೂ ಅದನ್ನು ಧಾರಾಳವಾಗಿ ಪ್ರದರ್ಶನ ಮಾಡುವ ಗುಣ ಅವರಲ್ಲಿ ಇದ್ದೇ ಇದೆ.

ಅದೇ ರೀತಿ, ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಹೊಕ್ಕಳ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಇದರ ಬೆಲೆ 2.7 ಕೋಟಿ ರೂಪಾಯಿಗಳು! ಛೇ ಛೇ ಹಾಗೆಂದು ನಟಿಯ ಹೊಕ್ಕಳಿಗೆ ಇಷ್ಟು ಬೆಲೆ ಅಲ್ಲ ಬಿಡಿ. ಬೆಲೆ ಇರುವುದು ಅವರು ಹೊಕ್ಕಳಲ್ಲಿ ಧರಿಸಿರುವ ಪುಟಾಣಿ ವಜ್ರದ ರಿಂಗ್‌ಗೆ. ನಟಿ ನಡೆದು ಬರುವಾಗ ಈಕೆಯ ಹೊಕ್ಕಳು ಹೈಲೈಟ್‌ ಆದರೂ, ಅದರಲ್ಲಿ ಇರುವ ವಜ್ರ ಅಷ್ಟು ಕಾಣಿಸುವುದಿಲ್ಲ. ಆದರೆ ಫಳ ಫಳ ಹೊಳೆದಾಗಲೇ ತಿಳಿಯುತ್ತದೆ, ಅವರ ಹೊಕ್ಕಳಿನಲ್ಲಿ ಡೈಮೆಂಡ್‌ ರಿಂಗ್‌ ಇದೆ ಎನ್ನುವುದು. ಇದರ ಬೆಲೆ 2.7 ಕೋಟಿ ರೂಪಾಯಿಗಳು ಎನ್ನಲಾಗಿದೆ. ಹೊಕ್ಕಳ ರಿಂಗ್‌ ಇದೀಗ ಟ್ರೆಂಡ್‌ನಲ್ಲಿ ಇರುವ ಫ್ಯಾಷನ್ ಆಗಿದೆ. ಅಷ್ಟಕ್ಕೂ ಚಿತ್ರ ತಾರೆಯರನ್ನು ಅನುಸರಿಸುವ ದೊಡ್ಡ ವರ್ಗವೇ ಇದೆಯಲ್ಲ, ಅದೇ ಕಾರಣಕ್ಕೆ ಯುವತಿಯರು ಈ ರೀತಿಯ ಫ್ಯಾಷನ್ ಮಾಡುತ್ತಿದ್ದಾರೆ. ಮೈತುಂಬಾ ಚಿನ್ನ, ವಜ್ರದ ಆಭರಣ ತೊಡುವುದು ಈಗಿನ ಯುವತಿಗೆ ಬೇಕಿಲ್ಲ. ಅದು ಔಟ್‌ಡೇಟೆಡ್‌ ಫ್ಯಾಷನ್‌. ಅದೇ ಕಾರಣಕ್ಕೆ ಇಂಥ ಸಿಕ್ರೇಟ್‌ ಜಾಗದಲ್ಲಿ ಆಭರಣ ತೊಟ್ಟು ಅದನ್ನು ಪ್ರದರ್ಶಿಸುತ್ತಾರೆ. 

ನನಗೆ ಮಗು ಇಷ್ಟವಿಲ್ಲ, ಎಲ್ಲರೂ ಸುಳ್ಳೆ ಹೇಳ್ತಾರೆ, ಈ ಹಿಂಸೆ ತಾಳೋಕೆ ಕಷ್ಟವಾಗ್ತಿದೆ: ನಟಿ ರಾಧಿಕಾ ಓಪನ್ ಮಾತು!

 ಇನ್ನು ನಟಿ ಕುರಿತು ಹೇಳುವುದಾದರೆ, ಇವರೀಗ ಅಮೆರಿಕದ ಸೊಸೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ (Nick Jonas) ಅವರು ತಮ್ಮ ಪುತ್ರಿ ಮಾಲ್ತಿ ಮೇರಿಯ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಅಮೆರಿಕದ  ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು 2018ರಲ್ಲಿ ಮದುವೆಯಾದ ಬಳಿಕ ನಟಿ, ಬಾಲಿವುಡ್ ಜಗತ್ತಿನಿಂದ  ದೂರವೇ ಉಳಿದಿದ್ದಾರೆ. ಹಾಲಿವುಡ್ ವೆಬ್ ಸಿರೀಸ್ ಮಾಡುತ್ತಾ, ಅಲ್ಲಿ ಹಲವಾರು ಟಿವಿ ಶೋ, ಸಂದರ್ಶನಗಳು ಹಾಗೂ ಸುತ್ತಾಟಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.   2022ರಲ್ಲಿ  ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ  ತಾಯಿಯಾಗಿದ್ದಾರೆ.  

Priyanka Chopras Belly Button Diamond Ring is worth Rs two point seven Crores suc

ಇನ್ನು, ಈ ಜೋಡಿಯ ಕುರಿತು ಹೇಳುವುದಾದರೆ, ಇವರದ್ದು ಪ್ರೇಮ ವಿವಾಹ. ಪ್ರಿಯಾಂಕಾ ಹಿಂದೂ ಹುಡುಗಿಯಾಗಿದ್ದರೆ ನಿಕ್ ಜೊನಸ್ ಕ್ರಿಶ್ಚಿಯನ್ ಹುಡುಗ. ಈ ಜೋಡಿ ತಮ್ಮ ಧರ್ಮಗಳ ಅನುಸಾರವೇ ಮದುವೆಯಾಗಲು ತೀರ್ಮಾನಿಸಿದ್ದರಂತೆ.  ಪ್ರಿಯಾಂಕಾ ಮತ್ತು ನಿಕ್ ಮದುವೆ ಮಾತುಕತೆಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಲ್ಲಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರಂತೆ. ಅದರಂತೆ ಹಿಂದೂ ಸಂಪ್ರದಾಯದಂತೆ ಜಾತಕ, ಮುಹೂರ್ತ ಎಲ್ಲವನ್ನೂ ನೋಡಿ ಅದಕ್ಕೂ ಮೊದಲು ಹಿಂದಿನ ದಿನ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.   ನಟಿ ಪ್ರಿಯಾಂಕಾ  ಮತ್ತು ನಿಕ್​ ಜೋನಸ್​ ಅವರಿಗೆ ಹತ್ತು ವರ್ಷಗಳ ಅಂತರ. ಅಂದರೆ ನಿಕ್​ ಅವರಿಗಿಂತಲೂ ಪ್ರಿಯಾಂಕಾ ಹತ್ತು ವರ್ಷ ಚಿಕ್ಕವರು. 2000ನೇ ಸಾಲಿನಲ್ಲಿ ಪ್ರಿಯಾಂಕಾ ಅವರು ಮಿಸ್​ ವರ್ಲ್ಡ್ ಗೆದ್ದಾಗ ನಿಕ್​ ಅವರು ಆಗಿನ್ನೂ ಏಳು ವರ್ಷದವರಾಗಿದ್ದರು. ಇದೇ ಕಾರಣಕ್ಕೆ ಈ ಜೋಡಿ ಸದಾ ಟ್ರೋಲ್​ ಆಗುತ್ತಲೇ ಇರುತ್ತದೆ. ಈಗಲೂ ಅದನ್ನೇ ಹೇಳುವ ಮೂಲಕ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. 

ಎಂಟು ವರ್ಷ ಕಿರಿಯ ಹಿಂದೂ ಯುವಕನ ಮದ್ವೆಯಾದ ನಟಿ ಕಿಶ್ವೆರ್‍‌: ಹೇಗಿದೆ ಲೈಫ್‌? ಅವರ ಬಾಯಲ್ಲೇ ಕೇಳಿ...

Latest Videos
Follow Us:
Download App:
  • android
  • ios