ನಾಲ್ಕನೆ ಸಾಲಿನಲ್ಲಿ ಬಿಎಸ್‌ವೈ, ಶೆಟ್ಟರ್ : ಬದಲಾದ ರಾಜಕೀಯ ವಿದ್ಯಮಾನ

  • ಬದಲಾದ ರಾಜಕೀಯ  ವಿದ್ಯಮಾನಗಳ  ಹಿನ್ನೆಲೆ ವಿದಾನಸಭೆಯಲ್ಲಿನ  ಕುರ್ಚಿಗಳಲ್ಲಿ ಸ್ಥಾನ ಪಲ್ಲಟ 
  • ಅಧಿವೇಶನದಲ್ಲಿ ಮೊದಲ ಸಾಲಿನಲ್ಲಿ ನಿಂತು ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ  ಯಡಿಯೂರಪ್ಪ ಜಾಗಕ್ಕೆ ನೂತನ ಮುಖ್ಯಮಂತ್ರಿa ಬೊಮ್ಮಾಯಿ 
BS Yediyurappa Jagadish Shetter Seats in fourth line At assembly  snr

ಬೆಂಗಳೂರು (ಸೆ.13): ಬದಲಾದ ರಾಜಕೀಯ  ವಿದ್ಯಮಾನಗಳ  ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿನ  ಕುರ್ಚಿಗಳಲ್ಲಿ ಸ್ಥಾನ ಪಲ್ಲಟ ಉಂಟಾಗಿದೆ. 

ಕಳೆದ ಅಧಿವೇಶನದಲ್ಲಿ ಮೊದಲ ಸಾಲಿನಲ್ಲಿ ನಿಂತು ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಬಿ ಎಸ್ ಯಡಿಯೂರಪ್ಪ ಅವರ ಜಾಗಕ್ಕೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಪರಿಣಾಮ  ಮಾಜಿಯಾಗಿರುವ  ಯಡಿಯೂರಪ್ಪ ಅವರಿಗೆ ವಿಧಾನಸಭೆಯ ಆಡಳಿತ  ಪಕ್ಷಕ್ಕೆ ನಿಗದಿಯಾದ ನಾಲ್ಕನೆ ಸಾಲಿನಲ್ಲಿ ಕುಳಿತುಕೊಳ್ಳುವ  ಅನಿವಾರ್ಯತೆ ಎದುರಾಗಿದೆ. 

ಮಿತಿ ಮೀರಿದ ಭ್ರಷ್ಟಾಚಾರದಿಂದ ಬಿಜೆಪಿಯಲ್ಲಿ ಸಿಎಂ ಬದಲಾವಣೆ: ಡಿಕೆಶಿ

2018 ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ  ಬಳಿಕ  ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಸಹ ಹಿಂಬದಿ ಸಾಲಿನಲ್ಲಿ ಕೂರುವಂತಾಗಿತ್ತು. 

ಇದೀಗ ಅದೇ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ನಿಂತಿದ್ದು ನಾಲ್ಕನೆ  ಸಾಲಿನಲ್ಲಿ ಅಸಿನರಾಗುವಂತಾಗಿದೆ. 

ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸದಸ್ಯರಾಗಿ ಮೊದಲ ಸಾಲಿನಲ್ಲಿ ಕೂರುತ್ತಿದ್ದ ಜಗದೀಶ್ ಶೆಟ್ಟರ್ ಅವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸದಸ್ಯರಾಗಲು ನಿರಾಕರಿಸಿದರು. 

ಪರಿಣಾಮ ಬಿ.ಎಸ್  ಯಡಿಯೂರಪ್ಪ ಅವರ ಪಕ್ಕದಲ್ಲೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂರಲಿದ್ದಾರೆ. ಸರ್ಕಾರದ  ಮುಖ್ಯ ಸಚೇತಕರಿಗೆ ನಾಲ್ಕನೆ ಸಾಲಿನ ಮೊದಲ ಆಸನ ಮೀಸಲಾಗಿರುತ್ತದೆ. 

Latest Videos
Follow Us:
Download App:
  • android
  • ios