ಸತ್ತ ಮಗುವನ್ನು ಸೊಂಡಿಲ್ಲಲ್ಲಿ ಹೊತ್ತೊಯ್ಯುತ್ತಿರುವ ಅಮ್ಮ, ಸತ್ಯ ಗೊತ್ತಾಗೋಕೆ ಇನ್ನೆಷ್ಟು ದಿನ ಬೇಕೋ..

ಅಮ್ಮ – ಮಗುವಿನ ಸಂಬಂಧ ಬಿಡಿಸಲಾಗದ್ದು. ಮಗು ಸತ್ತಾಗ ತಾಯಿಯ ನೋವು ಹೇಳಲಸಾಧ್ಯ. ಈ ವಿಡಿಯೋ ನೋಡಿದ್ರೆ ಪ್ರತಿಯೊಬ್ಬನ ಕಣ್ಣಲ್ಲಿ ನೀರು ಬರುತ್ತೆ. 
 

Mother elephant grief on death calf  viral video roo

ಮಗು (Child)ವನ್ನು ತಾಯಿಗಿಂತ ಹೆಚ್ಚು ಪ್ರೀತಿ (love)ಸುವವರು ಜಗತ್ತಿನಲ್ಲಿ ಯಾರಿಲ್ಲ. ಅದು ಮನುಷ್ಯನಾಗಿರಲಿ ಇಲ್ಲ ಪ್ರಾಣಿಯಾಗಿರಲಿ. ಮಕ್ಕಳ ವಿಷ್ಯ ಬಂದಾಗ ಪಾಲಕರು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ಧವಿರ್ತಾರೆ. ಕಣ್ಣ ಮುಂದೆಯೇ ಮಕ್ಕಳ ಸಾವು (death) ನೋಡಲು ಯಾವ ಪಾಲಕರೂ ಬಯಸೋದಿಲ್ಲ. ಮಗುವಿನ ಸಾವನ್ನು ತಾಯಿಯಿಂದ ಸಹಿಸಲು ಸಾಧ್ಯವಿಲ್ಲ. ಎಂದೂ ಮರೆಯಲಾಗದ, ಜೀವನ ಪರ್ಯಂತ ಕಾಡುವ ಅತ್ಯಂತ ದುಃಖದ ಸಂಗತಿ ಅಂದ್ರೆ ಮಕ್ಕಳ ಸಾವು. ಸಾಮಾಜಿಕ ಜಾಲತಾಣ (social media)ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಕರುಳು ಚುರಕ್ ಎನ್ನದೆ ಇರದು. ಸತ್ತ ಮಗುವನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ತಾಯಿ, ಯಾವುದಕ್ಕೂ ಪ್ರತಿಕ್ರಿಯೆ ನೀಡದ ತನ್ನ ಮಗುವನ್ನು ಹೊತ್ತೊಯ್ಯುತ್ತಾಳೆ. ಮಗು ಸತ್ತಿದೆ ಎಂಬ ವಿಷ್ಯ ಆ ತಾಯಿಗೆ ಗೊತ್ತಿದೆಯೋ ಇಲ್ವೋ. ಮೂಕ ಪ್ರಾಣಿಯ ಮೂಕ ವೇದನೆ ನೋಡೋದು ಕಷ್ಟ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ನೀವು ತಾಯಿ ಆನೆ (elephant) ಹಾಗೂ ಸತ್ತ ಆನೆ ಮರಿಯನ್ನು ಕಾಣ್ಬಹುದು. ಆನೆ, ಕೆಳಗೆ ಬಿದ್ದಿರುವ ಮಗುವನ್ನು ತನ್ನ ಕಾಲಿನಿಂದ ಏಳಿಸುವ ಪ್ರಯತ್ನ ನಡೆಸುತ್ತಿದೆ. ಎಷ್ಟೇ ಮಾಡಿದ್ರೂ ಮರಿ ಆನೆ ಪ್ರತಿಕ್ರಿಯೆ ನೀಡದಿರುವುದನ್ನು ನೋಡಿದ ತಾಯಿ ಆನೆ, ತನ್ನ ಸೊಂಡಿಲಿನಿಂದ ಮಗುವಿನ ಶವವನ್ನು ಹೊತ್ತೊಯ್ಯುತ್ತಿದೆ. ನಿರ್ಜೀವ ಮಗುವನ್ನು ತಾಯಿ ಆನೆ ಸೊಂಡಿಲಿನಿಂದ ಹೊತ್ತೊಯ್ಯುತ್ತಿರೋದನ್ನು ನೋಡಿದ್ರೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತೆ. ಈ ತಾಯಿ ಆನೆ ತನ್ನ ಸತ್ತ ಮಗುವಿನ ಜೊತೆ ಎಷ್ಟೋ ದಿನಗಳ ಕಾಲ ಹೀಗೆ ಕಳೆದಿದೆ. 

91ರ ಪತ್ನಿ, 23ರ ಪತಿ, ಹನಿಮೂನ್‌ಗೆ ಹೋದಾಗ ಆಗಿದ್ದೇನು? ಸತ್ಯ ತಿಳಿದು ಪೊಲೀಸ್‌ ಶಾಕ್‌

ಪರ್ವೀನ್ ಕಸ್ವಾನ್ ತಮ್ಮ ಪೋಸ್ಟ್ ನಲ್ಲಿ ಈ ವಿಷ್ಯವನ್ನು ಬರೆದಿದ್ದಾರೆ. ಆನೆ ತಾಯಿಗೆ ತನ್ನ ಮಗುವಿನ ಸಾವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವಳು ಮೃತ ದೇಹವನ್ನು ಸ್ವಲ್ಪ ಸಮಯದವರೆಗೆ, ಕೆಲವೊಮ್ಮೆ ದಿನಗಳವರೆಗೆ ಎಳೆಯುವುದನ್ನು ಮುಂದುವರೆಸುತ್ತಾಳೆ. ಅವರು ನಮ್ಮಂತೆಯೇ ಇದ್ದಾರೆ - ಅವರು ತುಂಬಾ ಮಾನವೀಯರು.  ಇಂಥ ಭಾವನಾತ್ಮಕ ಚಟುವಟಿಕೆಯು ಆನೆಗಳಲ್ಲಿ ಕಂಡು ಬರುತ್ತಿರುತ್ತದೆ ಎಂದು ಕಸ್ವಾನ್ ಬರೆದಿದ್ದಾರೆ. ಅನೇಕ ಬಾರಿ, ಸತ್ತ ಆನೆ ಮರಿಯನ್ನು ತಾಯಿ ಹೊತ್ತೊಯ್ಯುತ್ತಿದ್ದರೆ ಅದ್ರ ಹಿಂದೆ ಆನೆಗಳ ಹಿಂಡು ಹೋಗ್ತಿರುತ್ತದೆ. ಇದು ಅಂತ್ಯಕ್ರಿಯೆಯ ಮೆರವಣಿಗೆಯಂತೆ ಕಾಣಿಸುತ್ತದೆ ಎಂದು ಕಸ್ವಾನ್ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಈ ವೀಡಿಯೊವನ್ನು ಕಸ್ವಾನ್, ನವೆಂಬರ್ 21 ರಂದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 1,72,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಪೋಸ್ಟ್‌ಗೆ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದು ಹೃದಯವಿದ್ರಾವಕವಾಗಿದೆ. ದೇವರು ಅವರಿಗೆ ಶಾಂತಿ ನೀಡಲಿ ಎಂದು ಕಮೆಂಟ್ ಮಾಡಿದ್ದಾರೆ. ಈ ಮಧ್ಯೆ ಬಳಕೆದಾರರೊಬ್ಬರು, ಇಂಥ ಸಂದರ್ಭದಲ್ಲಿ ಆನೆ ಕಣ್ಣಿನಲ್ಲಿ ನೀರು ಬರುತ್ತದೆ. ಅದು ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕಸ್ವಾನ್, ಅದು ಕಣ್ಣೀರು ಎಂದಿದ್ದಾರೆ. 

ಇನ್ ರಿಲೇಷನ್ ಶಿಪ್ ಎಂದ ವಿಜಯ್ ದೇವರಕೊಂಡ, ಕನ್ನಡ ನಟಿಯೊಂದಿಗೆ ನಂಟಾ?

ಆನೆಗಳು ಅತ್ಯಂತ ಬುದ್ಧಿವಂತ, ಸೂಕ್ಷ್ಮ ಹಾಗೂ ಕೌಟುಂಬಿಕ ಪ್ರಾಣಿ. ಅವರ ಗುಂಪಿನಲ್ಲಿ ಯಾವುದೇ ಆನೆ ಸತ್ತ ತಕ್ಷಣ ಅವು ಅಲ್ಲಿಂದ ತೆರಳುವುದಿಲ್ಲ. ಆನೆ ವಾಪಸ್ ಬರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅವರಿಗೆ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಅಲ್ಲಿಯೇ ಇರುವ ಆನೆಗಳು, ನಂತ್ರ ಅಲ್ಲಿಂದ ತೆರಳುತ್ತವೆ ಎಂದು ಇನ್ನೊಬ್ಬರು ಬರೆದಿದ್ದಾರೆ. 

Latest Videos
Follow Us:
Download App:
  • android
  • ios