Asianet Suvarna News Asianet Suvarna News

ಕಾಯಕವೇ ಕೈಲಾಸ: ಮೋದಿ 7 ವರ್ಷವಾದರೆ ಯೋಗಿ 4 ವರ್ಷ, ಒಂದೂ ರಜೆ ಪಡೆದಿಲ್ಲ!

* ಬಿಡುವಿಲ್ಲದ ಕೆಲಸ, ಸಮಾಜದ ಸೇವೆಯಲ್ಲಿ ಮೋದಿ, ಯೋಗಿ

* ಮೋದಿ 7 ವರ್ಷ, ಯೋಗಿ 4 ವರ್ಷ, ಒಂದೂ ರಜೆ ಪಡೆದಿಲ್ಲ

* ತನಗಾಗಿ ಅಲ್ಲ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುವವನೇ ನಿಜವಾದ ದೇಶಭಕ್ತ

Like PM Modi CM Yogi has not taken off in over 4 years UP Deputy Chief Minister pod
Author
Bangalore, First Published Sep 13, 2021, 1:03 PM IST

ಲಕ್ನೋ(ಸೆ.13): ಸಕ್ರಿಯ ರಾಜಕೀಯ ಜೀವನದಲ್ಲಿ ನೆಮ್ಮದಿಯಿಂದ ಉಸಿರಾಡುವುದು ಕೂಡ ತುಂಬಾ ಕಷ್ಟ. ನಿತ್ಯದ ಬಿಡುವಿಲ್ಲದ ಕೆಲಸದ ಮಧ್ಯೆ ಕೆಲವೇ ಗಂಟೆ ನಿದ್ದೆ ಮಾಡಲು ಸಿಗುತ್ತದೆ. ಇದರ ಹೊರತಾಗಿಯೂ, ನಾಯಕರು ಬಹಳ ಫಿಟ್ ಹಾಗೂ ಆರೋಗ್ಯಯುತವಾಗಿರುವುದನಬ್ನು ನೊಡಬಹುದು. ಇದರ ಹಿಂದೆ ಅವರ ನಿಯಮಿತ ದಿನಚರಿಯಿದೆ ಎಂದರೂ ತಪ್ಪಾಗದು. ಇನ್ನು ಸಾಮಾನ್ಯವಾಗಿ, ದುಡಿದು ಸಂಪಾದಿಸುವ ವ್ಯಕ್ತಿ ತನ್ನ ವೃತ್ತಿಜೀವನದಲ್ಲಿ ರಜೆಯನ್ನು ತೆಗೆದುಕೊಳ್ಳುತ್ತಾರೆ, ಆದರೆ ಪ್ರಧಾನಿ ನರೇಂದ್ರ ಮೋದಿ 7 ವರ್ಷಗಳಲ್ಲಿ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ಇನ್ನು ಅತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ವಿಷಯದಲ್ಲಿ ಹಿಂದುಳಿಯುವುದಿಲ್ಲ ಎಂಬುವುದು ಉಲ್ಲೇಖನೀಯ. ಅವರು ಕಳೆದ 4 ವರ್ಷಗಳಲ್ಲಿ ಯಾವುದೇ ರಜೆ ತೆಗೆದುಕೊಂಡಿಲ್ಲ.

ಯೋಗಿ ರಜೆ ತೆಗೆದುಕೊಳ್ಳದೆ ನಾಲ್ಕೂವರೆ ವರ್ಷ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ವೃತ್ತಿ ಶೈಲಿಯಿಂದ ಹೆಸರುವಾಸಿಯಾಗಿದ್ದಾರೆ. ಾದರೀಗ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಯುಪಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಭಾನುವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

ಗ್ರೇಟರ್ ನೋಯ್ಡಾದಲ್ಲಿ ನಡೆದ ಪ್ರಬುದ್ಧ ಸಮ್ಮೇಳನದಲ್ಲಿ, ದಿನೇಶ್ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ 7 ವರ್ಷಗಳ ಅವಧಿಯಲ್ಲಿ ಒಂದೂ ರಜೆ ತೆಗೆದುಕೊಳ್ಳದೆ ಹೇಗೆ ಕಾರ್ಯ ನಿರ್ವಹಿಸಿದ್ದಾರೋ, ಅದೇ ರೀತಿ ಯೋಗಿ ಆದಿತ್ಯನಾಥ್ ಕೂಡ ನಾಲ್ಕುವರೆ ವರ್ಷಗಳಲ್ಲಿ ಒಂದು ದಿನವೂ ರಜೆ ಪಡೆದಿಲ್ಲ. ಅವರು ತಮ್ಮ ಎಲ್ಲ ಸಮಯವನ್ನು ಸಾರ್ವಜನಿಕರ ಸೇವೆಯಲ್ಲಿ ಕಳೆದಿದ್ದಾರೆ. ತನಗಾಗಿ ಅಲ್ಲ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುವವನೇ ನಿಜವಾದ ದೇಶಭಕ್ತ. ಅಂತಹ ವ್ಯಕ್ತಿ ಮಾತ್ರ ದೇಶ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಯೋಗಿಯ ಅಧಿಕಾರಾವಧಿಯ ಪ್ರಶಂಸೆ

ಯೋಗಿ ಅವರ ಅಧಿಕಾರಾವಧಿಯನ್ನು ಉಪಮುಖ್ಯಮಂತ್ರಿ ಶರ್ಮಾ ಪ್ರಶಂಸಿಸಿದ್ದಾರೆ. ಬಿಜೆಪಿ ಜಾತಿ ಮತ್ತು ಸಮುದಾಯದ ತಾರತಮ್ಯ ಮಾಡುವುದಿಲ್ಲ. ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಯೋಗಿ ಸರ್ಕಾರವು ತನ್ನ ಪ್ರತಿ ಯೋಜನೆಯ ಲಾಭ ಪ್ರತಿಯೊಂದು ವರ್ಗಕ್ಕೂ ಲಭಿಸುವಂತೆ ನೋಡಿಕೊಂಡಿದೆ. ಈ ಮೂಲಕ ಯೋಜನೆಗಳು ಎಲ್ಲರನ್ನೂ ಸಮನಾಗಿ ತಲುಪಿವೆ ಎಂದಿದ್ದಾರೆ. 

ಹಿಂದೂ-ಮುಸ್ಲಿಂ ಗಲಭೆ ಇರಲಿಲ್ಲ

ಯೋಗಿ ಅವರ ಅಧಿಕಾರಾವಧಿಯ ಬಗ್ಗೆ ವಿವರಿಸಿದ ಉಪಮುಖ್ಯಮಂತ್ರಿ, ಯುಪಿಯಲ್ಲಿ ಒಂದೇ ಒಂದು ಹಿಂದೂ-ಮುಸ್ಲಿಂ ಗಲಭೆ ನಡೆದಿಲ್ಲ. ಏಕೆಂದರೆ ಬಿಜೆಪಿ ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ. ಬಿಜೆಪಿ ಸಮಾಜದ ಪ್ರತಿಯೊಂದು ವಿಭಾಗವನ್ನು ಜೊತೆಯಲ್ಲಿ ಕೊಂಡೊಯ್ಯುವ ಪಕ್ಷವಾಗಿದೆ ಎಂದು ದಿನೇಶ್ ಶರ್ಮಾ ತಿಳಿಸಿದ್ದಾರೆ.

26ನೇ ವಯಸ್ಸಿನಲ್ಲಿ ಸಂಸದರಾದರು

ಜೂನ್ 5, 1972 ರಂದು ಉತ್ತರಾಖಂಡದ ಪೌರಿ ಗರ್ವಾಲ್‌ನ ಪಂಚೂರ್ ಗ್ರಾಮದಲ್ಲಿ ಜನಿಸಿದ ಅಜಯ್ ಸಿಂಗ್ ಬಿಶ್ತ್ ಅವರು ನಿವೃತ್ತಿಯ ನಂತರ ಗೋರಖ್‌ಪುರ್ ತಲುಪಿದಾಗ ಯೋಗಿ ಆದಿತ್ಯನಾಥ್ ಎಂದು ಪ್ರಸಿದ್ಧರಾದರು. ಯೋಗಿ 26 ನೇ ವಯಸ್ಸಿನಲ್ಲಿ ಸಂಸದರಾದರು ಮತ್ತು 45 ನೇ ವಯಸ್ಸಿನಲ್ಲಿ ಯುಪಿಯ ಸಿಎಂ ಆದರು. ಯೋಗಿ 1998 ರಲ್ಲಿ ಮೊದಲ ಬಾರಿಗೆ ಗೋರಖ್‌ಪುರದಿಂದ ಸಂಸದರಾದರು. ಇದರ ನಂತರ, ಅವರು 2017 ರವರೆಗೆ ಸತತ ಐದು ಅವಧಿಗೆ ಸಂಸದರಾಗಿದ್ದರು. ಯೋಗಿ ಆದಿತ್ಯನಾಥ್ 19 ಮಾರ್ಚ್ 2017 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

Follow Us:
Download App:
  • android
  • ios