Asianet Suvarna News Asianet Suvarna News

'ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ರೆ ಚೆನ್ನಾಗಿರ್ತಿತ್ತು'

* ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರ ವಿನೂತನ ಪ್ರತಿಭಟನೆ
* ಬೆಲೆ ಏರಿಕೆಯನ್ನು ವಿರೋಧಿಸಿ ಎತ್ತಿನ ಬಂಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು
* ಕಾಂಗ್ರೆಸ್‌ನ ಈ ಪ್ರತಿಭಟನೆಗೆ ಸಚಿವ ಸುಧಾಕರ್ ವ್ಯಂಗ್ಯ

Minister Sudhakar Taunts Congress Leaders bullock cart protest rbj
Author
Bengaluru, First Published Sep 13, 2021, 3:28 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.13): ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ಎತ್ತಿನ ಬಂಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದು, ಇದನ್ನು ಸಚಿವ ಡಾ. ಸುಧಾಕರ್ ವ್ಯಂಗ್ಯವಾಡಿದ್ದಾರೆ. 

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಎತ್ತಿನ ಬಂಡಿ ಏರಿ ಹಸುಗಳಿಗೆ ತೊಂದರೆ ಕೊಡೋ ಬದಲು ಸೈಕಲ್​ ಏರಿ ಪ್ರತಿಭಟನೆ ಮಾಡಿದ್ದರೆ ಚೆನ್ನಾಗಿರ್ತಿತ್ತು  ಎಂದು ಟಾಂಗ್ ಕೊಟ್ಟರು.

ಬೆಲೆ ಏರಿಕೆ ಖಂಡಿಸಿ ಸದನಕ್ಕೆ ಎತ್ತಿನಗಾಡಿ ಮೂಲಕ ಬರಲಿದ್ದಾರೆ ಡಿಕೆಶಿ, ಸಿದ್ದರಾಮಯ್ಯ

 ಇವರ ಪ್ರತಿಭಟನೆಯಿಂದ ವಿಧಾನಸೌಧಕ್ಕೆ ಬರೋದಕ್ಕೆ ಮುಕ್ಕಾಲು ಗಂಟೆ ತಡ ಆಯ್ತು. ಯಾರು ಬೆಲೆ ಏರಿಕೆ ಮಾಡಿದ್ದಾರೆ , ಯಾರು ಸಾಲದ ಬಾಂಡ್​ ಮಾಡಿದ್ದಾರೆ ಯಾರ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ ಎಂದು ಎಂದು ಸದನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಬಹುದು. ಅದನ್ನ ಬಿಟ್ಟು ಸುಮ್ಮನೆ ಹೀಗೆ ಜನಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ ಎಂದರು.

ಇಂದಿನಿಂದ 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ತೆರಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ಆಗಮಿಸಿ ಗಮನಸೆಳೆದರು.

Follow Us:
Download App:
  • android
  • ios