3 ತಿಂಗಳ ಹಿಂದೆ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿಗೆ ಕೆಲವೇ ಕೆಲವು ಎಡಪಂಥೀಯ ಒಲವುಳ್ಳ ಪತ್ರಕರ್ತರು ಬರುತ್ತಿದ್ದರು.

ನವದೆಹಲಿ (ಜ.09): 3 ತಿಂಗಳ ಹಿಂದೆ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿಗೆ ಕೆಲವೇ ಕೆಲವು ಎಡಪಂಥೀಯ ಒಲವುಳ್ಳ ಪತ್ರಕರ್ತರು ಬರುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಜರಾತ್ ಚುನಾವಣೆ ನಂತರ ಜಿಗ್ನೇಶ್ ಮೇವಾನಿ ಶುಕ್ರವಾರ ದೆಹಲಿಯ ಪ್ರೆಸ್‌'ಕ್ಲಬ್‌' ಗೆ ಬಂದಿದ್ದಾಗ ದೊಡ್ಡ ಪತ್ರಕರ್ತರ ದಂಡೇ ನೆರೆದಿತ್ತು. ಜೊತೆಗೆ ಕ್ಯಾಮೆರಾಗಳು, ಫೋಟೋಗ್ರಾಫರ್‌ಗಳು ಬೇರೆ. ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ನೋಡುತ್ತಿರಿ ಎಂದು ಆಗಿನಿಂದಲೇ ಸೆಲ್ಫಿ ತೆಗೆದಿಟ್ಟುಕೊಂಡಿದ್ದ ಯುವ ಪತ್ರಕರ್ತರೇ ಈಗ ಪ್ರೆಸ್‌ಕ್ಲಬ್‌ನಲ್ಲಿ ನಿಂತು ಜಿಗ್ನೇಶ್ ಮೇವಾನಿ ಜೊತೆ ಸೆಲ್ಫಿ ಪ್ಲೀಸ್ ಎನ್ನುತ್ತಿದ್ದರು. ಆದರೆ ಈ ತಳ್ಳಾಟ ನೂಕಾಟ ಪ್ರಶ್ನೆಗಳ ಸುರಿಮಳೆ ನಡುವೆಯೇ ಜಿಗ್ನೇಶ್ ಮೇವಾನಿಗೆ ಬಂದು ಕೈಕುಲುಕಿದ ವಯಸ್ಸಾದ ಪತ್ರಕರ್ತರೊಬ್ಬರು ‘ಸ್ವಲ್ಪವೇ ಮಾತನಾಡು. ಚೆನ್ನಾಗಿ ಮಾತನಾಡುತ್ತೀಯಾ. ಬಹಳ ಮಾತನಾಡಿದರೆ ಬೇಗ ಜನಪ್ರಿಯತೆ ಇಳಿಯುತ್ತದೆ’ ಎಂದು ಕಿವಿಯಲ್ಲಿ ಹೇಳಿ ಬೆನ್ನುತಟ್ಟಿ ಹೋದರು.

ಇಂಡಿಯಾ ಗೇಟ್ ನ ಆಯ್ದ ಭಾಗಗಳು ಪ್ರಶಾಂತ್ ನಾತು