ಬಾಗಲಕೋಟೆಯ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘದಲ್ಲಿ ಮತ್ತೆ ಒಂದಾದರು. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಬಾಗಲಕೋಟೆಯ ಶೈಕ್ಷಣಿಕ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಗಲಕೋಟೆ: ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್‌ ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘಕ್ಕೆ ಭೇಟಿ ನೀಡಿ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಬಿವಿವಿ ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ವೀಕ್ಷಿಸಿದ ಹಳೆಯ ವಿದ್ಯಾರ್ಥಿಗಳು, ಬಾಗಲಕೋಟೆ ಇಂದು ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಮೆಡಿಕಲ್ ಹಬ್ ಆಗಿ ಬೆಳೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ ಡಾ.ವೀರಣ್ಣ ಚರಂತಿಮಠ

ಬಿವಿವಿ ಸಂಘದಲ್ಲಿ ವಿದ್ಯಾಭ್ಯಾಸ ಮಾಡಿ ದೇಶ-ವಿದೇಶಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಡಾ.ವೀರಣ್ಣ ಚರಂತಿಮಠ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿವಿವಿ ಸಂಘದ ವತಿಯಿಂದ 2001ರ ಬ್ಯಾಚ್ ನ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 25 ವರ್ಷಗಳ ಬಳಿಕ ನಡೆದ ಈ ಸಮ್ಮಿಲನವು ಹಳೆಯ ಸ್ನೇಹ, ಆತ್ಮೀಯತೆ ಹಾಗೂ ಕಾಲೇಜು ದಿನಗಳ ಸವಿನೆನಪುಗಳನ್ನು ಹಂಚಿಕೊಳ್ಳುವ ವಿಶೇಷ ಸಂದರ್ಭವಾಯಿತು.

ಇದನ್ನೂ ಓದಿ: ಕೆಲಸ ಹೋಯ್ತು ಅಂತ ಕಂಗೆಡಲಿಲ್ಲ: ಓಲಾ ಓಡಿಸಿ 2 ಮನೆ ಕಟ್ಟಿ, ತಿಂಗಳಿಗೆ ₹80 ಸಾವಿರ ಬಾಡಿಗೆ ಗಳಿಸ್ತಿರೋ ಚಾಲಕ

ಡಾ.ಅಮೀತ ಮಾತೂರ್, ಡಾ.ಸಂದ್ಯಾರಾಣಿ, ಡಾ.ಆಸೀನ ಪಿರಮನಿ, ಡಾ.ಅಂಜುಮ್ ಬಿಸ್ವಾಸ್, ಡಾ.ಆನಂದ, ಡಾ.ಸುಪ್ರೀತ ತ್ರಿಪಾಟಿ, ಡಾ.ಪಾಯಲ್ ತ್ರೀಪಾಟಿ ಸೇರಿ ಅನೇಕರು ಭಾಗವಹಿಸಿದ್ದರು.

ಇದನ್ನೂ ಓದಿ: 6ನೇ ಕ್ಲಾಸ್ ಪುಸ್ತಕದಲ್ಲಿ AI, ಪೈಥಾನ್ ಪಾಠ! ಬುಕ್ ನೋಡಿ ಬೆಚ್ಚಿಬಿದ್ದ ಇಂಜಿನಿಯರ್‌ಗಳು, ವಿಡಿಯೋ ವೈರಲ್!