ಭಾರತ ಒಂದಿಂಚು ನೆಲ ಬಿಟ್ಟಿಲ್ಲ, ಸದ್ಯ ರಶ್ಮಿಕಾ ಕನ್ನಡ ಸಿನ್ಮಾ ಮಾಡಲ್ಲ; ಫೆ.11ರ ಟಾಪ್ 10 ಸುದ್ದಿ!
ಚೀನಾ ಅತಿಕ್ರಮ, ತಿಕ್ಕಾಟದಲ್ಲಿ ಭಾರತ ಒಂದಿಂಚು ನೆಲ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಟ್ವಿಟರ್ ಪ್ರತಿಸ್ಪರ್ಧಿ ದೇಶಿ ಆ್ಯಪ್ ಕೂ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಸೋಲಿನ ಆಘಾತದಲ್ಲಿರುವ ಟೀಂ ಇಂಡಿಯಾಗೆ ಕೆಲ ಸಮಸ್ಯೆ ಎದುರಾಗಿದೆ. ರಾಜ್ಯ ಬಜೆಟ್‌ನಲ್ಲಿ ಹೊಸ ಯೋಜನೆಗೆ ಬ್ರೇಕ್, ಆಗಸ್ಟ್‌ವರೆಗೆ ಕನ್ನಡ ಸಿನಿಮಾ ಬ್ರೇಕ್ ಎಂದ ರಶ್ಮಿಕಾ ಸೇರಿದಂತೆ ಫೆಬ್ರವರಿ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ
ಡ್ರ್ಯಾಗನ್‌ಗೆ ಒಂದಿಂಚೂ ನೆಲ ಬಿಟ್ಟಿಲ್ಲ: ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ-ಚೀನಾ ಒಪ್ಪಂದ'...
ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೇನೆಗಳು ವಾಪಸ್ ಹೋಗುವ ಕೆಲಸ ಆರಂಭವಾಗಿದೆ.
ಕರ್ನಾಟಕದಲ್ಲೇ ಹೆಚ್ಚು ದೇಶದ್ರೋಹ ಕೇಸ್ ದಾಖಲು..!...
2019ರಲ್ಲಿ ದೇಶದ ವಿವಿಧ ಭಾಗಗಳಲ್ಲಿ 93 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, 96 ಮಂದಿಯನ್ನು ಬಂಧಿಸಲಾಗಿದೆ.
ಉತ್ತರಾಖಂಡ ಹಿಮಕುಸಿತ ಆಗಿದ್ದು ಹೀಗೆ!...
ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟವಾಗಿ ಬೆಳಕು ಚೆಲ್ಲಬಹುದಾದ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳು ಹಿಮಕುಸಿತವಾದ ಪ್ರದೇಶ ಯಾವುದು? ಆ ಪ್ರದೇಶದ ದುರ್ಘಟನೆಗೂ ಮೊದಲು ಹೇಗಿತ್ತು? ಬಳಿಕ ಹೇಗೆ ಕಾಣುತ್ತಿದೆ ಎಂಬುದರ ಸ್ಪಷ್ಟಚಿತ್ರಣ ನೀಡಿದೆ.
ಟೀಂ ಇಂಡಿಯಾಗೆ ಪಂಚ ಸಂಕಟ; ದಿಟ್ಟ ನಿರ್ಧಾರ ಕೈಗೊಳ್ತಾರಾ ಕೊಹ್ಲಿ..?...
ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಈ 5 ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ. .
ಆಗಸ್ಟ್‌ವರೆಗೂ ಕನ್ನಡ ಸಿನಿಮಾ ಮಾಡಲ್ವಂತೆ ರಶ್ಮಿಕಾ..! ಕಾರಣ..?...
ಧ್ರುವ ಸರ್ಜಾ ಹೊಸ ಅವತಾರಕ್ಕೆ ಬೆಚ್ಚಿಬಿದ್ರಂತೆ ಪೊಗರು ನಾಯಕಿ | ಪೊಗರು ಚಿತ್ರ ಫೆ. 19 ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಜೊತೆಗೆ ಮಾತುಕತೆ.
ಟ್ವೀಟರ್‌ಗೆ ಸಡ್ಡು: ದೇಶಿ ‘ಕೂ’ಗೆ ಬಿಜೆಪಿಗರು, ಗಣ್ಯರ ಸೇರ್ಪಡೆ!...
ಟ್ವೀಟರ್‌ಗೆ ಸಡ್ಡು: ದೇಶಿ ‘ಕೂ’ಗೆ ಬಿಜೆಪಿಗರು, ಗಣ್ಯರ ಸೇರ್ಪಡೆ| ಸಚಿವ ಪಿಯೂಷ್, ಪ್ರಸಾದ್, ಕ್ರಿಕೆಟಿಗ ಕುಂಬ್ಳೆ, ಸಿಎಂ ಚೌಹಾಣ್, ಜಗ್ಗಿ ವಾಸುದೇವ್ ಖಾತೆ ಆರಂಭ
ಕೊರೋನಾ ಹೊಡೆತ ಕುಸಿದ ಆರ್ಥಿಕತೆ, ರಾಜ್ಯ ಬಜೆಟ್‌ನಲ್ಲಿ ಹೊಸ ಯೋಜನೆಗೆ ಬ್ರೇಕ್?...
ರಾಜ್ಯ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗೆ ಅವಕಾಶವಿಲ್ಲ. ಕೊರೋನಾ ಹೊಡೆತದಿಂದ ಕುಸಿದಿರುವ ಆರ್ಥಕತೆ ಮೇಲೆತ್ತಲು ಕಸರತ್ತು ನಡೆಯುತ್ತಿದೆ. ಹೀಗಾಗಿ ಆರ್ಥಿಕ ಹೊರೆ ಸರಿದೂಗಿಸುವ ನಿಟ್ಟಿನಲ್ಲಿ ಈ ಬಾರಿ ಹೊಸ ಯೋಜನೆಗಳಿಗೆ ಅವಕಾಶ ಇರಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ಹುಡುಗಿಯರ ಕಾಟಕ್ಕೆ ಬೇಸತ್ತು ವ್ಯಾಲಂಟೈನ್ಸ್ ಡೇಗೆ ರಜೆ ಬೇಕೆಂದು ಪ್ರಾಂಶುಪಾಲರಿಗೆ ಪತ್ರ ಬರೆದ ವಿದ್ಯಾರ್ಥಿ..!...
ಪ್ರೀತಿಗಾಗಿ ಹುಡುಗಿಯರ ಹಿಂದೆ ಬೀಳುವ ಹುಡುಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರೆ, ಇಲ್ಲೊಬ್ಬ ವಿದ್ಯಾರ್ಥಿ ಹುಡುಗಿಯರ ಸಹವಾಸವೇ ಬೇಡ, ವ್ಯಾಲಂಟೈನ್ಸ್ ಡೇ ಹಿನ್ನೆಲೆಯಲ್ಲಿ ನನಗೆ ರಜೆ ಕೊಡಿ ಎಂದು ಪ್ರಾಂಶುಪಾಲರಿಗೆ ಪತ್ರವೊಂದನ್ನ ಬರೆದಿದ್ದಾನೆ.
ಫೆ.15ಕ್ಕೆ ರೆನಾಲ್ಟ್ ಕಿಗರ್ ಕಾರು ಬಿಡುಗಡೆ; ಇದು ಅತೀ ಕಡಿಮೆ ಬೆಲೆಯ SUV!...
ಸಬ್ ಕಾಂಪಾಕ್ಟ್ SUV ಕಾರುಗ ಪೈಕಿ ಇತ್ತೀಚೆಗೆ ಬಿಡುಗಡೆಯಾದ ನಿಸಾನ್ ಮ್ಯಾಗ್ನೈಟ್ ಅತೀ ಕಡಿಮೆ ಬೆಲೆ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ರೆನಾಲ್ಟ್ ಕಿಗರ್ ಕಾರು ಬಿಡುಗಡೆಯಾಗುತ್ತಿದ್ದು, ಅತೀ ಕಡಿಮೆ ಬೆಲೆಯ ಪಟ್ಟ ಈ ಕಾರಿಗೆ ಸಲ್ಲಲಿದೆ.
ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ...
ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ 40 ಲಕ್ಷ ಚೆಕ್ ಬೌನ್ಸ್ ಪ್ರಕರಣ| ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯ|
ಸರ್ಕಾರಿ ವಿಮಾನ ಹಾರಾಟಕ್ಕೆ ಅನುಮತಿ ಕೊಡದ ಸರ್ಕಾರ, 20 ನಿಮಿಷ ಕಾದ ಗವರ್ನರ್!...
ಸಾಮಾನ್ಯವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಅಸಮಾಧಾನದ ಅಲೆಯ ವಿಚಾರ ಸದ್ದು ಮಾಡುತ್ತಲೇ ಇರುತ್ತದೆ. ಆದರೀಗ ಮಹಾರಾಷ್ಟ್ರ ರಾಜಭವನದಿಂದ ಶಾಕಿಂಗ್ ವಿಚಾರವೊಂದು ಬಯಲಾಗಿದೆ.
ರಾಮ ಮಂದಿರ ದೇಣಿಗೆ ಮೇಲ್ವಿಚಾರಣೆಗೆ 3 ಸ್ತರದ ವ್ಯವಸ್ಥೆ!...
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯ ಭಕ್ತರು ನೀಡುತ್ತಿರುವ ದೇಣಿಗೆ| ಪಾರದರ್ಶಕವಾಗಿ ಬಳಕೆ ಆಗುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಮೇಲ್ವಿಚಾರಣೆಗೆ 3 ಸ್ತರದ ವ್ಯವಸ್ಥೆ
'ಹಿಂದ' ಹೋರಾಟ ನಡೆಯುವ ಬಗ್ಗೆ ಸಿದ್ದು ಸ್ಪಷ್ಟನೆ, ಉಲ್ಟಾ ಹೊಡೆದ ಲೆಕ್ಕಾಚಾರ..!...
ರಾಜ್ಯ ರಾಜಕಾರಣದಲ್ಲಿ 'ಹಿಂದ' ಸಮಾವೇಶ ಭಾರೀ ಸಂಚಲನ ಉಂಟು ಮಾಡಿದೆ. ಈಗಾಗಲೇ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತ ನಾಯಕರೊಂದಿಗೆ ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.