ರಾಮ ಮಂದಿರ ದೇಣಿಗೆ ಮೇಲ್ವಿಚಾರಣೆಗೆ 3 ಸ್ತರದ ವ್ಯವಸ್ಥೆ!
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯ ಭಕ್ತರು ನೀಡುತ್ತಿರುವ ದೇಣಿಗೆ| ಪಾರದರ್ಶಕವಾಗಿ ಬಳಕೆ ಆಗುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಮೇಲ್ವಿಚಾರಣೆಗೆ 3 ಸ್ತರದ ವ್ಯವಸ್ಥೆ
ಜೈಪುರ(ಫೆ.11): ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯ ಭಕ್ತರು ನೀಡುತ್ತಿರುವ ದೇಣಿಗೆ ಪಾರದರ್ಶಕವಾಗಿ ಬಳಕೆ ಆಗುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂರು ಸ್ತರದ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಿಸಿದೆ. ಡಿಜಿಟಲ್ ಆ್ಯಪ್ ಮೂಲಕ ಆನ್‌ಲೈನ್ ಮೇಲ್ವಿಚಾರಣೆ, ವಿಶಿಷ್ಟಗುರುತಿನ ಬಳಕೆ ಮತ್ತು ಸಮಗ್ರ ಲೆಕ್ಕಪರಿಶೋಧನೆಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಅಭಿಯಾನದ ವೇಳೆ ಸಂಗ್ರಹವಾಗುವ ಹಣವನ್ನು ಠೇವಣಿ ಇಡುವ ತಂಡವನ್ನು ಮುನ್ನಡೆಸುತ್ತಿರುವ ಲೆಕ್ಕಪರಿಶೋಧಕ ಅಭಿಷೇಕ್ ಅಗರ್ವಾಲ್ ಅವರು ಈ ಮಾಹಿತಿ ನೀಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಸಂಗ್ರಹವಾಗುವ ಹಣವನ್ನು ದಿನನಿತ್ಯ ಮೇಲ್ವಿಚಾರಣೆ ಮಾಡಲಾಗುತ್ತಿದೆ. 2000ಕ್ಕಿಂತಲೂ ಹೆಚ್ಚಿನ ಹಣ ನೀಡುವವರು ತಮ್ಮ ಪಾನ್ ಕಾರ್ಡ್ ನೀಡಬೇಕಿದೆ.