ಬಿಗ್‌ಬಾಸ್‌ ಕನ್ನಡ11ರಲ್ಲಿ ಮನೆ ಮಂದಿ ವಿರುದ್ಧ ಕ್ಯಾಪ್ಟನ್‌ ಮಂಜು ದಬ್ಬಾಳಿಕೆ, ಇದಕ್ಕೆ ಬ್ರೇಕ್‌ ಹಾಕೋದು ಯಾರು?

ಬಿಗ್‌ಬಾಸ್‌ ಕನ್ನಡ 11ರಲ್ಲಿ 8ನೇ ವಾರದ ಕ್ಯಾಪ್ಟನ್ ಉಗ್ರಂ ಮಂಜು. ರಾಜ ಮತ್ತು ಪ್ರಜೆಗಳ ಟಾಸ್ಕ್‌ನಲ್ಲಿ ಮಂಜು ಕೊಡುವ ಕಾಟ, ದಬ್ಬಾಳಿಕೆಯನ್ನು ಮನೆಯ ಇತರ ಸ್ಪರ್ಧಿಗಳು ಸಹಿಸಬೇಕಿದೆ. ಮಂಜುಗೆ ಬಿಗ್‌ಬಾಸ್‌ ನೀಡಿದ ಸೀಕ್ರೆಟ್‌ ಟಾಸ್ಕ್‌ನ ಫಲಿತಾಂಶವೇನು?

Bigg Boss Kannada 11 transformed into a kingdom ugram manju ruling as a king of house gow

ಬಿಗ್‌ಬಾಸ್‌ ಕನ್ನಡ 11ರ ಸೀಸನ್ 8ನೇ ವಾರಕ್ಕೆ ಕಾಲಿಟ್ಟಿದೆ. ಉಗ್ರಂ ಮಂಜು ಈ ವಾರದ ಕ್ಯಾಪ್ಟನ್‌ ಆಗಿದ್ದಾರೆ. 57ನೇ ದಿನ ಬಿಗ್‌ಬಾಸ್‌ ಮನೆಯಲ್ಲಿ ರಾಜ ಮತ್ತು ಪ್ರಜೆಗಳ ಟಾಸ್ಕ್‌ ನೀಡಲಾಗಿದೆ. ಬಿಗ್‌ಬಾಸ್‌ಮನೆಯಲ್ಲಿ ರಾಜ ಮಂಜು ಕೊಡುವ ಕಾಟ, ದಬ್ಬಾಳಿಕೆಯನ್ನು ಮನೆಯ ಇತರ ಸ್ಪರ್ಧಿಗಳು ಸಹಿಸಬೇಕಿದೆ.

ಇದರಲ್ಲಿ ಮುಖ್ಯವಾಗಿ ಕ್ಯಾಪ್ಟನ್ ಮಂಜು ವಿರುದ್ಧ   ಹನುಮಂತ ಮತ್ತು ಧನರಾಜ್  ‘ಬಿಗ್ ಬಾಸ್… ನೀವು ರಾಜರಿಗೆ ಅಧಿಕಾರ ಕೊಟ್ಟಿದ್ದೀರಿ ಅಂತ ಸುಮ್ಮನಿದ್ದೀವಿ. ಇಲ್ಲ ಅಂದ್ರೆ ಸುಮ್ಮನಿರುವ ಮಗನೇ ಅಲ್ಲ ನಾನು’ ಎಂದು ಧನರಾಜ್ ಹೇಳಿದ್ದಾರೆ. ‘ಇರ್ಲಿ ಇರ್ಲಿ ಇದೊಂದು ಸಲ ಹೊಟ್ಟೆಗೆ ಹಾಕಿಕೋ’ ಎಂದು ಹನುಮಂತ ಸಮಾಧಾನ ಮಾಡಿದ್ದಾರೆ. ಏನಂದುಕೊಂಡಿದ್ದಾರೆ ಅವರು ಹೇಳಿದನ್ನೆಲ್ಲ ಕೇಳಿಸಿಕೊಳ್ಳೋಕೆ? ಎಂದು ಧನ್‌ರಾಜ್ ಹೇಳಿದಾಗ ಹನುಮಂತು ಟಾಸ್ಕ್‌ ಆಯ್ತಲೇ, ಪಟ್ಟಾಭಿಷೇಕ ಮುಂಚೇನೆ ಅವಾಜ್‌ ಹಾಕತ್ತಾನಾ, ನಾವು ರಾಜನ ಮುಂದೆ ಒಳ್ಳೆಯವರಾಗಿದ್ದು, ಅವರ ಮುಂದೆನೇ ಮಸಲತ್ತು ಮಾಡೋಣ ಎಂದು ಇಬ್ಬರೂ ಪ್ಲಾನ್‌ ಮಾಡಿಕೊಂಡು ತಮಾಷೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಕ್ವಾಟ್ಲೆ ಟಾಸ್ಕ್‌ ನಲ್ಲಿ ಚೆನ್ನಾಗಿ ಮೂಡಿಬಂದಿದೆ.

ಸ್ಲಿಮ್ ಹುಡುಗಿಯರಿಗೆ ನಟಿ ಶ್ರೀಲೀಲಾರಿಂದ 7 ಬ್ಲೌಸ್ ಐಡಿಯಾಗಳು

ಮಹಾರಾಜ ಮಂಜು ಅವರ ಇಬ್ಬರು ದಂಡನಾಯಕರನ್ನಾಗಿ ತ್ರಿವಿಕ್ರಮ್ ಮತ್ತು ರಜತ್‌ ಅವರನ್ನು ಆಯ್ಕೆ ಮಾಡಲಾಗಿದೆ. ಆತ್ಮೀಯ ಸೇವಕನಾಗಿ ಸುರೇಶ್ ಇದ್ದಾರೆ. ತಪ್ಪು ಮಾಡಿದ ಹೆಚ್ಚಿನವರಿಗೆ ರಾಜ ಮಂಜು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.ಚೈತ್ರಾ ಮತ್ತು ಶೋಭಾ ಶೆಟ್ಟಿ ಮಾತನಾಡದಂತೆ ಬಾಯಿಯಲ್ಲಿ ಆಲೂಗಡ್ಡೆಯನ್ನು ಇಟ್ಟುಕೊಳ್ಳುವ ಶಿಕ್ಷೆ ನೀಡಲಾಯ್ತು. 

ಇನ್ನು ಮಹರಾಜ ಮನೆಯಲ್ಲಿರುವ ಪ್ರಜೆಗಳಿಗೆ ಊಟ ಹಾಕದೆ ಶಿಕ್ಷೆ ನೀಡಿದ್ದು, ಉಪವಾಸ ಹಾಕಿದ್ದಾರೆ. ಇನ್ನು ಮನೆಯ ಪ್ರಜೆಯಾಗಿರುವ ಪಾಸಿಟಿವ್‌ ಗೌತಮಿ ಹೇಳಿದ ಮಾತನ್ನು ಕೇಳುತ್ತಿರಲಿಲ್ಲ. ಇದರ ಮಧ್ಯೆ ಮನೆಯ ರಾಜ ಮಂಜು ಅವರಿಗೆ ಬಿಗ್‌ಬಾಸ್ ಸೀಕ್ರೆಟ್‌ ಟಾಸ್ಕ್‌ ನೀಡಿದ್ದು, ಮನೆಯ ನಾಲ್ವರು ಸದಸ್ಯರಲ್ಲಿ ಇಬ್ಬರು ನೈಜವಾಗಿ ಅಳುವಂತೆ ಮತ್ತು ಇಬ್ಬರು ನೈಜವಾಗಿ ನಗುವಂತೆ ಮಾಡಬೇಕೆಂದು ಟಾಸ್ಕ್‌ ನೀಡಿದರು. ಯಾವುದೇ ರೀತಿಯ ಆದೇಶ ನೀಡಿ ನಗಿಸುವಂತಿಲ್ಲ. ನಾಲ್ಕು ಪ್ರಜೆಗಳಲ್ಲಿ ಮೂರು ಪ್ರಜೆಗಳು ಯಶಸ್ವಿಯಾಗಿ ಟಾಸ್ಕ್‌ ಮುಗಿಸುವಂತೆ ಮಾಡಿದರೆ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗುತ್ತೀರಿ ಎಂದು ಬಿಗ್‌ಬಾಸ್‌ ಹೇಳಿದರು.

ನಿರ್ದೇಶಕರ ವೃತ್ತಿಜೀವನವನ್ನೇ ಕೊನೆಗೊಳಿಸಿದ ತಾಜ್ ಮಹಲ್ !

ಸೀಕ್ರೆಟ್‌ ಟಾಸ್ಕ್‌ ನಂತೆ ಗೋಲ್ಡ್‌ ಸುರೇಶ್ ಅವರನ್ನು ಅಳಿಸಲು ಮಂಜು ಪ್ರೇರೇಪಿಸಿದರು. ಮನೆ ಮಗಳ ನೆನಪು ಮಾಡಿಕೊಳ್ಳಿ ಎಂದು ಅಳಿಸಲು ಪ್ರಯತ್ನಿಸಿದರು. ಆದರೆ ಸುರೇಶ್ ನನಗೆ ಕಣ್ಣೀರು ಬತ್ತಿ ಹೋಗಿದೆ ಎಂದರು. ಬಳಿಕ ಶಿಶಿರ್‌ ಬಳಿ ಮಾತನಾಡಿ ಅವರನ್ನು ನೈಜವಾಗಿ ಅಳುವಂತೆ ಮಾಡಿ ಟಾಸ್ಕ್‌ ಮುಗಿಸಿದರು. ಇಬ್ಬರನ್ನು ನಗಿಸುವ ಟಾಸ್ಕ್‌ ನಲ್ಲಿ ತ್ರಿವಿಕ್ರಮ್‌ ಮತ್ತು ರಜತ್‌ ಅವರನ್ನು ನಗಿಸಿದರು. ಇನ್ನು ಟಾಸ್ಕ್‌ ಮಧ್ಯೆ ಧನ್‌ರಾಜ್‌ ಕುಳ್ಳನ ವೇಷ ಧರಿಸಿದರು. ಮೋಕ್ಷಿತಾ ಈ ಹಾಡು ಮಂಜಣ್ಣನಿಗಾಗಿ "ಇನ್ನೂನು ಬೇಕಾಗಿದೆ ಒಲವು ಇನ್ನೂನು ಬೇಕಾಗಿದೆ ಎಂಬ ಹಾಡು ಹಾಡುತ್ತಲೇ ಜೋರಾಗಿ ಅತ್ತರು. ಮಂಜು ಮತ್ತು ಗೌತಮಿ ಕೂಡ ತಮ್ಮ ಗೆಳೆತನ ನೆನೆದು ಅತ್ತರು. ಮೂವರಿದ್ದ ಗುಂಪಿನಿಂದ ಈಗ ಮೋಕ್ಷಿತಾ ಅವರು ಹೊರಬಂದು ಒಬ್ಬಂಟಿಯಾಗಿ ಆಟ ಆಡುತ್ತಿದ್ದಾರೆ. ನಾಳಿನ ಸಂಚಿಕೆಯಲ್ಲಿ  ಬಿಗ್‌ಬಾಸ್‌  ರಾಜ ಮತ್ತು ಪ್ರಜೆ ಟಾಸ್ಕ್‌ ನಲ್ಲಿ ಯಾವ ಯಾವ  ಆಟ ನೀಡದಲಿದೆ ಎಂಬುದನ್ನು ಕಾದು ನೋಡಬೇಕು.

Latest Videos
Follow Us:
Download App:
  • android
  • ios