ಆಗಸ್ಟ್‌ವರೆಗೂ ಕನ್ನಡ ಸಿನಿಮಾ ಮಾಡಲ್ವಂತೆ ರಶ್ಮಿಕಾ..! ಕಾರಣ..?
ಧ್ರುವ ಸರ್ಜಾ ಹೊಸ ಅವತಾರಕ್ಕೆ ಬೆಚ್ಚಿಬಿದ್ರಂತೆ ಪೊಗರು ನಾಯಕಿ | ಪೊಗರು ಚಿತ್ರ ಫೆ. 19 ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಜೊತೆಗೆ ಮಾತುಕತೆ.
ಪ್ರಿಯಾ ಕೆರ್ವಾಶೆ
-ಪೊಗರು ಚಿತ್ರದಲ್ಲಿ ರಶ್ಮಿಕಾ ಖದರು ಜೋರಾ?
ಇದು ಮಾಸ್ ಎಂಟರ್‌ಟೈನರ್. ಧ್ರುವ ಸರ್ಜಾ ಹಾಗೂ ನನ್ನ ಪಾತ್ರ ಟಾಮ್ ಆ್ಯಂಡ್ ಜೆರ್ರಿ ಇದ್ದ ಹಾಗಿರುತ್ತೆ. ನಾನಿದ್ರಲ್ಲಿ ಇಂಟ್ರಾವರ್ಟ್, ಧ್ರುವ ಸರ್ಜಾ ಎಕ್ಸ್‌ಟ್ರಾವರ್ಟ್. ಇದು ಹೀರೋ ಮೇಲೇ ಕೇಂದ್ರೀಕೃತವಾದ ಸಿನಿಮಾ. ನನ್ನ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೇನೆ.
- ಕೋವಿಡ್ ನಂತರ ರಿಲೀಸ್ ಆಗ್ತಿರುವ ನಿಮ್ಮ ಮೊದಲ ಸಿನಿಮಾ ‘ಪೊಗರು’. ಹೇಗನಿಸುತ್ತಿದೆ?
ಎಕ್ಸೈಟ್‌ಮೆಂಟ್, ಟೆನ್ಶನ್ ಎರಡೂ ಇದೆ. ಕೋವಿಡ್‌ಗೆ ವ್ಯಾಕ್ಸಿನ್ ಬಂದರೂ ಸಾಮಾನ್ಯ ಜನರನ್ನದು ತಲುಪಿಲ್ಲ. ಇಂಥಾ ಸನ್ನಿವೇಶದಲ್ಲಿ ಜನ ಹೇಗೆ ರಿಸೀವ್ ಮಾಡಬಹುದು ಅನ್ನುವ ಕುತೂಹಲ ಇದ್ದೇ ಇದೆ. ಆದರೂ ಸುರಕ್ಷತೆಯೊಂದಿಗೆ ಬಂದು ಸಿನಿಮಾ ವೀಕ್ಷಿಸಿ ಅನ್ನುತ್ತೀನಿ. ಮಾಸ್, ಎಂಟರ್‌ಟೈನರ್, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲ ಇರುವ ಸಿನಿಮಾ ಇದು.
- ಧ್ರುವ ಸರ್ಜಾ ಜೊತೆಗೆ ನಿಮ್ಮ ಮೊದಲ ಚಿತ್ರ. ಹೇಗಿತ್ತು ಆ ಅನುಭವ?
ಧ್ರುವ ಸರ್ಜಾ ಅವರನ್ನು ಬೀಸ್ಟ್ ಮೋಡ್‌ನಲ್ಲಿ ನೋಡಿ ಬೆಚ್ಚಿಬಿದ್ದಿದ್ದೆ. ಹಿಂದೆಲ್ಲಾ ಅವರ ಲುಕ್ಕೇ ಬೇರೆ ಥರ ಇತ್ತು. ಇದ್ರಲ್ಲಿ ಫುಲ್ ಕೂದ್ಲು, ಗಡ್ಡ ಎಲ್ಲ ಬಿಟ್ಕೊಂಡು ಕ್ಷಣ ಶಾಕ್ ಆಗಿತ್ತು. ಮೊದಲು ನೋಡಿದಾಗ ಸ್ವೀಟ್ ಬಾಯ್ ತರ ಇದ್ರು.
ಫೋನ್ ಬಳಸಲ್ಲ ಎಂದ ರಶ್ಮಿಕಾ; ಹಾಗಾದ್ರೆ ಫೋಟೋ ಅಪ್ಲೋಡ್ ಮಾಡ್ತಿರೋದು ಯಾರು?
ಈಗ ಬೀಸ್ಟ್ ಥರ ಕಾಣ್ತಿದ್ರು. ವಾಟ್ ಹ್ಯಾಪನ್‌್ಡ ಟು ಯೂ ಮ್ಯಾನ್ ಅಂತಲೇ ಕೇಳಿದ್ದೆ. ಅವರ ಡೆಡಿಕೇಶನ್, ಹಾರ್ಡ್‌ವರ್ಕ್ ಎಲ್ಲರಿಗೂ ಸ್ಫೂರ್ತಿ ಕೊಡುವಂಥಾದ್ದು. ಅವರ ಬಗ್ಗೆ ಹೆಮ್ಮೆ ಅನಿಸುತ್ತೆ.
- ಖರಾಬು ಹಾಡಿನ ಶೂಟಿಂಗ್ ಸಖತ್ ರಗಡ್ ಆಗಿ ಬಂದಿದೆ, ಸಖತ್ ಹಿಟ್ ಆಯ್ತು. ಹೇಗಿತ್ತು ಆ ಅನುಭವ?
ಇದು ಹಾಡಿನ ಚಿತ್ರೀಕರಣಕ್ಕಿಂತಲೂ ಸೀನ್‌ನ ಶೂಟಿಂಗ್ ಥರ ಇತ್ತು. ಅಷ್ಟೊಂದು ಡ್ಯಾನ್ಸರ್ಸ್, ಜನರನ್ನಿಟ್ಟು ಶೂಟ್ ಮಾಡಿದ್ದು ಗ್ರೇಟ್ ಎಕ್ಸ್‌ಪೀರಿಯನ್ಸ್. ನಾನು ಜಿಮ್‌ಗೆ ಹೋದ್ರೂ ಈ ಹಾಡು ಹಾಕಿರ್ತಾರೆ, ಜನ ನನ್ನ ಕಡೆ ಅಭಿಮಾನದಿಂದ ನೋಡ್ತಿರ್ತಾರೆ.
- ರಶ್ಮಿಕಾ ಕನ್ನಡ ವಿರೋಧಿನಾ?
ಯಾರಂದಿದ್ದು? ಖಂಡಿತಾ ಅಲ್ಲ. ಆಗಸ್ಟ್‌ವರೆಗೂ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದೀನಿ. ಆಮೇಲೆ ಒಳ್ಳೆ ಸ್ಕಿ್ರಪ್ಟ್ ಸಿಕ್ಕರೆ ಖಂಡಿತಾ ಕನ್ನಡದಲ್ಲಿ ನಟಿಸೋಕೆ ರೆಡಿ.
ಕಿರಿಕ್ ಪಾರ್ಟಿ 2 ಸಿನಿಮಾ ಬರುತ್ತಂತೆ. ಅದ್ರಲ್ಲಿ ನೀವಿರ್ತೀರಾ?
ಕತೆಗೆ ಅವಶ್ಯಕತೆ ಇದ್ದರೆ ಬರ್ತೀನಿ. ಆದರೆ ಆಲ್‌ರೆಡಿ ಸಾನ್ವಿ ಸತ್ತೋಗಿದ್ದಾಳಲ್ಲಾ..
ಕಿರಿಕ್ ಪಾರ್ಟಿ 2 ಹಾರರ್ ಆದ್ರೆ?
ಅಯ್ಯಯ್ಯೋ, ಹಾರರ್ ಸಿನಿಮಾಗೆ ನಾನಿಲ್ವೇ ಇಲ್ಲ. ನಾನು ಈವರೆಗೆ ಒಂದೇ ಒಂದು ಹಾರರ್ ಸಿನಿಮಾ ನೋಡಿಲ್ಲ. ಸಿನಿಮಾ ನೋಡೋದು ಬಿಡಿ, ಪೋಸ್ಟರ್ ಸಹ ನೋಡಲ್ಲ. ಅಷ್ಟುಭಯ ನಂಗೆ.
ನಿಮಗೆ 2 ಕೋಟಿ ಸಂಭಾವನೆ ಇದೆಯಂತೆ ಹೌದಾ?
ದೇವ್ರೇ, ಅಷ್ಟುಬಂದ್ರೆ ಎಷ್ಟುಚೆನ್ನಾಗಿರ್ತಿತ್ತು (ನಗು). ಖಂಡಿತಾ ಅಷ್ಟಿಲ್ಲ. ಸಂಭಾವನೆ ಒಂಚೂರು ಹೆಚ್ಚು ಕೇಳಿದ್ರೇ ಆ ಹೀರೋಯಿನ್‌ಗೆ ಇಷ್ಟೇ ಕೊಡೋದು, ನಿಮಗೂ ಇಷ್ಟೇ ಅಂತಾರೆ, ದುಡ್ಡೇ ಕೊಡಲ್ಲ ಗೊತ್ತಾ!
ವಿವಾದಗಳಿಲ್ಲದಿದ್ದರೆ ಏನೋ ಕಳಕೊಂಡ ಭಾವ
ಸುಮಾರು 3 ವರ್ಷ ಇಡೀ ದಿನ ಅತ್ತಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಬರುತ್ತಿದ್ದ ಟೀಕೆಗಳು, ಟ್ರೋಲ್‌ಗಳು ನಿತ್ಯವೂ ಕಣ್ಣೀರು ಹಾಕುವಂತೆ ಮಾಡುತ್ತಿದ್ದವು. ಕ್ರಮೇಣ ಅವನ್ನೆಲ್ಲ ಹೇಗೆ ಜೀರ್ಣಿಸಿಕೊಂಡೆ ಅಂದ್ರೆ ಈಗ ಜನ ಟ್ರೋಲ್ ಮಾಡದಿದ್ರೇ ಬೇಜಾರಾಗುತ್ತೆ. ನೆಗೆಟಿವ್ ಇರಲಿ, ಪಾಸಿಟಿವ್ ಇರಲಿ, ಸದಾ ಸುದ್ದಿಯಲ್ಲಿದ್ದರೇ ನೆಮ್ಮದಿ.