ಕರ್ನಾಟಕದಲ್ಲೇ ಹೆಚ್ಚು ದೇಶದ್ರೋಹ ಕೇಸ್ ದಾಖಲು..!
2019ರಲ್ಲಿ 22 ದೇಶದ್ರೋಹ ಕೇಸ್,18 ಜನರ ಬಂಧನ| ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಗೃಹ ಖಾತೆ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ| ಕರ್ನಾಟಕದಲ್ಲಿ ದೇಶದ್ರೋಹದ ಅತ್ಯಧಿಕ 22 ಪ್ರಕರಣಗಳು ದಾಖಲು|
ನವದೆಹಲಿ(ಫೆ.11): 2019ರಲ್ಲಿ ದೇಶದ ವಿವಿಧ ಭಾಗಗಳಲ್ಲಿ 93 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, 96 ಮಂದಿಯನ್ನು ಬಂಧಿಸಲಾಗಿದೆ.
ಈ ಪೈಕಿ ಕರ್ನಾಟಕದಲ್ಲಿ ದೇಶದ್ರೋಹದ ಅತ್ಯಧಿಕ ಕೇಸ್‌ಗಳು (22 ಪ್ರಕರಣ) ದಾಖಲಾಗಿದ್ದು 18 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಖಾತೆ ರಾಜ್ಯಸಚಿವ ಜಿ.ಕೃಷ್ಣ ರೆಡ್ಡಿ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ರಾಯಚೂರು: ವಾಟ್ಸಪ್‌ನಲ್ಲಿ ದೇಶದ್ರೋಹದ ಸಂದೇಶ, ಉರ್ದು ಶಾಲೆ ಶಿಕ್ಷಕಿ ಅಮಾನತು
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, 2019ರಲ್ಲಿ ದೇಶದ್ರೋಹ ಪ್ರಕರಣಗಳಿಗೆ ಸಂಬಂಧಿಸಿದಂತೆ 76 ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಿಕೊಳ್ಳಲಾಗಿದ್ದು, 29 ಮಂದಿ ಖುಲಾಸೆಗೊಂಡಿದ್ದಾರೆ. ಇನ್ನು ಅಸ್ಸಾಂನಲ್ಲಿ 17, ಜಮ್ಮು- ಕಾಶ್ಮೀರದಲ್ಲಿ 11, ಉತ್ತರ ಪ್ರದೇಶದಲ್ಲಿ 10 ಕೇಸ್‌ಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.