Asianet Suvarna News Asianet Suvarna News

ಚೀನಿ ವಸ್ತು ನಿರ್ಬಂಧಕ್ಕೆ ಮುಂದಾದ ಇಂಡಿಯಾ, ಬಾಲಿವುಡ್‌ನಲ್ಲಿ ಮ್ಯೂಸಿಕ್ ಮಾಫಿಯಾ;ಜೂ.19ರ ಟಾಪ್ 10 ಸುದ್ದಿ!

ಭಾರತ-ಚೀನಾ ಗಡಿ ರೇಖೆಯನ್ನೇ ಬದಲಾಯಿಸಲು ಚೀನಾ ಮಾಡಿದ ಅತೀ ದೊಡ್ಡ ಪ್ಲಾನ್ ಬಯಲಾಗಿದೆ. ಇದರ ಬೆನ್ನಲ್ಲೇ ಚೀನಾದ 371 ವಸ್ತುಗಳಿಗೆ ನಿರ್ಬಂಧ ಹೇರಲು ಸರ್ಕಾರ ಮುಂದಾಗಿದೆ. ಕೊರೋನಾ ವೈರಸ್‌ ಅಟ್ಟಹಾಸ ದೇಶದಲ್ಲಿ ಮುಂದುವರಿದಿದ್ದು ಇದೀಗ ಭಾರತ 4ನೇ ಸ್ಥಾನಕ್ಕೇರಿದೆ.  ಬಾಲಿವುಡ್‌ನಲ್ಲಿ ಮ್ಯೂಸಿಕ್ ಮಾಫಿಯಾ ನಡೆಯುತ್ತಿದೆ ಎಂದು ಎಚ್ಚರಿಸಿದ ಸೋನು ನಿಗಮ್. ದುಬಾರಿಯಾದ ತಿರುಪತಿ ತಿಮ್ಮಪ್ಪ, 80 ರೂಪಾಯಿ ತಲುಪಿದ ಪೆಟ್ರೋಲ್ ದರ ಸೇರಿದಂತೆ ಜೂನ್ 19ರ ಟಾಪ್ 10 ಸುದ್ದಿ ಇಲ್ಲಿವೆ.

India china ladakh to Bollywood music top 10 news of June 19
Author
Bengaluru, First Published Jun 19, 2020, 5:01 PM IST

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಬಿಗ್ ಶಾಕ್

India china ladakh to Bollywood music top 10 news of June 19

 ತಿರುಪತಿ ತಿರುಮಲ ದೇವಾಲಯ  ಭಕ್ತರಿಗೆ ಒಂದು ಶಾಕ್ ನೀಡಿದೆ. ಆನ್ ಲೈನ್ ಮೂಲಕ ದರ್ಶನಕ್ಕೆ ಟಿಕೆಟ್ ಬುಕ್ ಮಾಡುತ್ತಿದ್ದವರು ಇನ್ನು ಮುಂದೆ ಡಬಲ್ ಹಣ ನೀಡಬೇಕಾಗುತ್ತದೆ.

ಗಲ್ವಾನ್ ನದಿ ತಿರುಗಿಸಲು ಚೀನಾ ಯತ್ನ: ಗ್ರಾಫ್ ಮೂಲಕ ತಿಳಿಸುವ ಪ್ರಯತ್ನವಿದು..!...

India china ladakh to Bollywood music top 10 news of June 19

20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್‌ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್‌ ಕಾಣಿಸಿದೆ.

ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ

India china ladakh to Bollywood music top 10 news of June 19

ಗಡಿಯಲ್ಲಿ ಬೇಕಂತಲೇ ಭಾರತವನ್ನು ಕೆಣಕುತ್ತಿರುವ ಚೀನಾಕ್ಕೆ ಆರ್ಥಿಕ ಹೊಡೆತ ನೀಡಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆ ದೇಶದಿಂದ ಆಮದು ಮಾಡಿಕೊಳ್ಳುವ 371 ವಸ್ತುಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ.

ಒತ್ತೆಯಿಟ್ಟಿದ್ದ 10 ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದ ಚೀನಾ

India china ladakh to Bollywood music top 10 news of June 19

ಓರ್ವ ಲೆಫ್ಟಿನೆಂಟ್ ಕರ್ನಲ್ ಹಾಗೂ ಮೂವರು ಮೇಜರ್ ಸೇರಿ 10 ಮಂದಿ ಭಾರತದ ಸೈನಿಕರನ್ನು ಚೀನಾ ಒತ್ತೆಯಿಟ್ಟುಕೊಂಡಿತ್ತು. ಗುರುವಾರ ಸಂಜೆ ನಡೆದ ಮೇಜರ್ ಜನರಲ್ ಸಭೆಯ ಬಳಿಕ ಚೀನಾ ಸೈನಿಕರನ್ನು ಬಿಡುಗಡೆ ಮಾಡಿದೆ. ಶಸ್ತ್ರಾಸ್ತ್ರ ರಹಿತವಾಗಿದ್ದ ಯೋಧರು ಭಾರತದ ಸೇನಾ ಕ್ಯಾಂಪ್‌ಗೆ ವಾಪಾಸಾಗಿದ್ದಾರೆ

ದೇಶದಲ್ಲಿ ಕೊರೋನಾ ತಾಂಡವ: 4ನೇ ಸ್ಥಾನದಲ್ಲಿ ಭಾರತ

India china ladakh to Bollywood music top 10 news of June 19

ಕೊರೋನಾ ವೈರಸ್‌ ಅಟ್ಟಹಾಸ ದೇಶದಲ್ಲಿ ಮುಂದುವರಿದಿದ್ದು, ಗುರುವಾರ 349 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಮೃತರ ಸಂಖ್ಯೆ 12532ಕ್ಕೆ ಏರಿಕೆಯಾಗಿದೆ. 

ಬಾಕಿ ಇದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ರಿಸಲ್ಟ್ ಡೇಟ್ ಘೋಷಣೆ ...

India china ladakh to Bollywood music top 10 news of June 19

 ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

6 ವರ್ಷದಲ್ಲೇ ಸಿಕ್ಸ್‌ ಪ್ಯಾಕ್‌ ; ನಾನು ಮೆಸ್ಸಿಯಂತಾಗುತ್ತೇನೆ ಎಂದ ಪೋರ..!

India china ladakh to Bollywood music top 10 news of June 19

ಲ್ಲೊಬ್ಬ ಕೇವಲ 6 ವರ್ಷದ ಹುಡುಗನಿದ್ದಾನೆ ನೋಡಿ. ಅವನ ಮೈಕಟ್ಟು, ಅವನ ಸ್ಟಂಟ್ಸ್‌ ನೋಡಿದರೆ ಎಂತವರೂ ನಿಬ್ಬೆರಗಾಗಿ ಬಿಡಬೇಕು ನೋಡಿ. ಇರಾನ್ ದೇಶದ ಬಾಬೋಲ್ ನಗರದ ಆರ್ತ್ ಹುಸೈನ್ ಈಗ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾನೆ. ಈತನನ್ನು ಇನ್‌ಸ್ಟಾಗ್ರಾಂನಲ್ಲಿ ಸುಮಾರು 4 ಮಿಲಿಯನ್(40 ಲಕ್ಷ) ಮಂದಿ ಫಾಲೋ ಮಾಡುತ್ತಿದ್ದಾರೆ. 

ಮ್ಯೂಸಿಕ್ ಮಾಫಿಯಾ ಬಗ್ಗೆ ಸೋನು ನಿಗಮ್ ಮಾತು: ಸಂಗೀತ ಕ್ಷೇತ್ರದಲ್ಲೂ ಆತ್ಮಹತ್ಯೆ ಎಚ್ಚರಿಕೆ

India china ladakh to Bollywood music top 10 news of June 19

ಸಂಗೀತ ಕ್ಷೇತ್ರದಲ್ಲಿಯೂ ಪ್ರತಿಭಾನ್ವಿತರ ಆತ್ಮಹತ್ಯೆಯ ಸುದ್ದಿಯನ್ನು ಜನ ಕೇಳಬೇಕಾಗಬಹುದು ಎಂದಿರುವ ಪ್ರಸಿದ್ದ ಗಾಯಕ ಸೋನು ನಿಗಮ್ ಬಾಲಿವುಡ್ ಮ್ಯೂಸಿಕ್ ಮಾಫಿಯಾ ಬಗ್ಗೆ ಏನ್ ಹೇಳಿದ್ದಾರೆ.

ಚೀನಾ ಉತ್ಪನ್ನಗಳಿಗೆ ಬಹಿಷ್ಕಾರ; ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾದ ಭಾರತದ ಮೈಕ್ರೋಮ್ಯಾಕ್ಸ್ !

India china ladakh to Bollywood music top 10 news of June 19

ಭಾರತದಲ್ಲಿ ಚೀನಾ ಫೋನ್‌ಗಳ ಆಕ್ರಮಣದಿಂದ ಭಾರತದ ಹಲವು ಕಂಪನಿಗಳು ಬಾಗಿಲು ಮುಚ್ಚಿತ್ತು. ಬಹುತೇಕ ಸ್ಮಾರ್ಟ್ ಫೋನ್‌ ಕಂಪನಿಗಳು ಭಾರತದಲ್ಲಿ ಫೋನ್ ಬಿಡುಗಡೆ ಮಾಡುವು ಸಾಹಸಕ್ಕೆ ಮುಂದಾಗುತ್ತಿರಲಿಲ್ಲ. ಇದೀಗ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದಂತೆ ಭಾರತದ ಮೈಕ್ರೋಮ್ಯಾಕ್ಸ್ ಕಂಪನಿ ಇದೀಗ ಹೊಸ ಹಾಗೂ ಆಕರ್ಷಕ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ.

ಬೆಂಗಳೂರಲ್ಲಿ ಲೀಟರ್‌ಗೆ 80 ರುಪಾಯಿ ಗಡಿ ದಾಟಿದ ಪೆಟ್ರೋಲ್‌..!

India china ladakh to Bollywood music top 10 news of June 19

ದೇಶದಲ್ಲಿ ಕೊರೋನಾ ರೀತಿಯಲ್ಲಿಯೇ ಪೆಟ್ರೋಲ್ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೂನ್ 18ರಂದು ಬೆಂಗಳೂರಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 80 ರುಪಾಯಿ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 
Follow Us:
Download App:
  • android
  • ios