ಕೊರೋನಾ ರಣಕೇಕೆ ದೇಶದಲ್ಲಿ ಹೆಚ್ಚುತ್ತಲೇ ಇದ್ದು ಗುರುವಾರ(ಜೂನ್.18)ರಂದು ಹೊಸದಾಗಿ 12,881 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜೂ.19): ಕೊರೋನಾ ವೈರಸ್‌ ಅಟ್ಟಹಾಸ ದೇಶದಲ್ಲಿ ಮುಂದುವರಿದಿದ್ದು, ಗುರುವಾರ 349 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಮೃತರ ಸಂಖ್ಯೆ 12532ಕ್ಕೆ ಏರಿಕೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, 12,881 ಮಂದಿಯಲ್ಲಿ ಗುರುವಾರ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ವೈರಸ್‌ ಪೀಡಿತರ ಸಂಖ್ಯೆ 3.81 ಲಕ್ಷಕ್ಕೆ ಹೆಚ್ಚಳವಾಗಿದೆ. ಜೂ.1ರಿಂದ 18ರವರೆಗೆ ದೇಶದಲ್ಲಿ 1.76 ಲಕ್ಷ ಹೊಸ ಕೇಸ್‌ಗಳು ಪತ್ತೆಯಾಗಿವೆ. 

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ ಹಾಗೂ ಉತ್ತರಪ್ರದೇಶಗಳು ಅತಿ ಹೆಚ್ಚು ಕೊರೋನಾಪೀಡಿತ ರಾಜ್ಯಗಳಾಗಿ ಮುಂದುವರಿದಿವೆ. ಸಮಾಧಾನದ ಸಂಗತಿಯೆಂದರೆ, ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಳದ ನಡುವೆಯೇ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.53 ಕ್ಕೇರಿಕೆಯಾಗಿದೆ.

ಕ್ವಾರಂಟೈನ್‌ನಲ್ಲಿ ಇರುವವರ ಕಣ್ಗಾವಲಿಗೆ ತಂಡ: ನಿಯಮ ಉಲ್ಲಂಘಿಸಿದ್ರೆ FIR

ಅತಿಹೆಚ್ಚು ಕೊರೋನಾ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದೆ. ಎರಡು ಹಾಗೂ ಮೂರನೇ ಸ್ಥಾನದಲ್ಲಿ ಕ್ರಮವಾಗಿ ಬ್ರೆಜಿಲ್ ಹಾಗೂ ರಷ್ಯಾ ದೇಶಗಳಿವೆ. ಭಾರತದಲ್ಲಿ ಜೂನ್ 19ರ ಬೆಳಗಿನ ವರದಿಯಂತೆ ಎರಡು ಲಕ್ಷದ ಐದುಸಾವಿರ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ 1,63,305 ಸಕ್ರಿಯ ಕೊರೋನಾ ಪ್ರಕರಣಗಳಿವೆ.