ಇರಾನ್(ಜೂ.19): ಹಲವು ಯುವಕರು ಸಿಕ್ಸ್‌ ಪ್ಯಾಕ್ ಮಾಡಲು ಜಿಮ್‌ಗಳಲ್ಲಿ ಗಂಟೆಗಟ್ಟಲೇ ಬೆವರು ಸುರಿಸುತ್ತಾರೆ. ಯಾರೋ ಅಲ್ಲೋಬ್ಬರು ಇಲ್ಲೊಬ್ಬರು ತಪಸ್ಸು ಮಾಡಿದವರಂತೆ ಮೈ ಹುರಿಗೊಳಿಸಿ ಸಿಕ್ಸ್‌ ಪ್ಯಾಕ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಬಹುತೇಕರ ಸೊಂಟ ಟೈರ್‌ ರೀತಿಯಾಗಿಯೇ ಉಳಿದಿರುತ್ತೆ.

ಆದರೆ ಇಲ್ಲೊಬ್ಬ ಕೇವಲ 6 ವರ್ಷದ ಹುಡುಗನಿದ್ದಾನೆ ನೋಡಿ. ಅವನ ಮೈಕಟ್ಟು, ಅವನ ಸ್ಟಂಟ್ಸ್‌ ನೋಡಿದರೆ ಎಂತವರೂ ನಿಬ್ಬೆರಗಾಗಿ ಬಿಡಬೇಕು ನೋಡಿ. ಇರಾನ್ ದೇಶದ ಬಾಬೋಲ್ ನಗರದ ಆರ್ತ್ ಹುಸೈನ್ ಈಗ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾನೆ. ಈತನನ್ನು ಇನ್‌ಸ್ಟಾಗ್ರಾಂನಲ್ಲಿ ಸುಮಾರು 4 ಮಿಲಿಯನ್(40 ಲಕ್ಷ) ಮಂದಿ ಫಾಲೋ ಮಾಡುತ್ತಿದ್ದಾರೆ. 

 
 
 
 
 
 
 
 
 
 
 
 
 

I love football ⚽️

A post shared by Arat Hosseini (@arat.gym) on Apr 29, 2020 at 7:25am PDT

ಚಿಕ್ಕವಯಸ್ಸಿನಲ್ಲೇ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವ ಮೂಲಕ ಎಲ್ಲರ ಜಿಮ್ ಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ. ಆರ್ತ್ ಹುಸೈನ್ ಅರ್ಜೆಂಟೈನಾದ ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿಯ ಅತಿದೊಡ್ಡ ಅಭಿಮಾನಿಯಾಗಿದ್ದು, ಮುಂದೊಂದು ದಿನ ಮೆಸ್ಸಿಯಂತಾಗಲು ಈಗಿನಿಂದಲೇ ಕನಸು ಕಾಣುತ್ತಿದ್ದಾನೆ.  

65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!

6 ವರ್ಷದ ಅರ್ತ್‌ಗೆ ತಂದೆ ಮೊಹಮ್ಮದ್ ಮೊದಲ ಗುರುವಾಗಿದ್ದಾರೆ. ವರ್ಷ ತುಂಬುವುದರೊಳಗಾಗಿ ಆತನಿಗೆ ತರಬೇತಿ ನೀಡಲಾರಂಭಿಸಿದರು. ಒಂದು ವರ್ಷ 10 ತಿಂಗಳಿದ್ದಾಗ ಅರ್ತ್ ಹುಸೈನ್ ರಿವರ್ಸ್ ಜಂಪ್ ಹೇಗಿದೆಯೆಂದರೆ ಎಂತವರು ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡಬೇಕು. 

 
 
 
 
 
 
 
 
 
 
 
 
 

💪🏾 #2yearsold #Arat 1 years and 10 months old 🔥 #gymnast #football

A post shared by Arat Hosseini (@arat.gym) on Jan 17, 2020 at 5:40am PST

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಬೇಕು ಎಂದು ಕನಸು ಹೊತ್ತಿರುವ ಆರ್ತ್ ಹುಸೈನ್ ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಕಸರತ್ತು ಹಾಗೂ ತಯಾರಿ ನಡೆಸುತ್ತಿದ್ದಾರೆ. 6 ವರ್ಷದ ಆರ್ತ್ ಫುಟ್ಬಾಲ್ ಸ್ಕಿಲ್ ನೋಡಿ ಬಾರ್ಸಿಲೋನಾದ ಆಧಾರಸ್ತಂಭ ಲಿಯೋನೆಲ್ ಮೆಸ್ಸಿ ಕೂಡಾ ಬೆರಗಾಗಿ ಹೋಗಿದ್ದಾರೆ. ಈ ಬಗ್ಗೆ  ಆರ್ತ್ ನಾನು ಮುಂದೊಂದು ದಿನ ಬಾರ್ಸಿಲೋನಾ ತಂಡದ ಪರ ಆಡುಬೇಕು ಎಂದು ನಾನು ಪ್ರತಿದಿನ ಕನಸು ಕಾಣುತ್ತೇನೆ. ನಾನು ಮುಂದೊಂದು ದಿನ ನಿಮ್ಮಂತೆಯೇ(ಮೆಸ್ಸಿ) ಆಗುತ್ತೇನೆ ಎನ್ನುವುದು ಆರರ ಪೋರನ ಮಹಾದಾಸೆ.