Asianet Suvarna News Asianet Suvarna News

ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ

ಗಡಿಯಲ್ಲಿ ಬೇಕಂತಲೇ ಭಾರತವನ್ನು ಕೆಣಕುತ್ತಿರುವ ಚೀನಾಕ್ಕೆ ಆರ್ಥಿಕ ಹೊಡೆತ ನೀಡಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆ ದೇಶದಿಂದ ಆಮದು ಮಾಡಿಕೊಳ್ಳುವ 371 ವಸ್ತುಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ.

India plans to stop import of 371 china made items
Author
Bangalore, First Published Jun 19, 2020, 10:23 AM IST

ನವದೆಹಲಿ(ಜೂ.19): ಗಡಿಯಲ್ಲಿ ಬೇಕಂತಲೇ ಭಾರತವನ್ನು ಕೆಣಕುತ್ತಿರುವ ಚೀನಾಕ್ಕೆ ಆರ್ಥಿಕ ಹೊಡೆತ ನೀಡಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆ ದೇಶದಿಂದ ಆಮದು ಮಾಡಿಕೊಳ್ಳುವ 371 ವಸ್ತುಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಈ ಕುರಿತು ವಾಣಿಜ್ಯ ಸಚಿವಾಲಯವು ಶೀಘ್ರದಲ್ಲೇ ಪ್ರಧಾನಿ ಕಾರ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದಿಂದ ಭಾರತಕ್ಕೆ ಆಟಿಕೆಗಳು, ಪ್ಲಾಸ್ಟಿಕ್‌ ಸಾಮಗ್ರಿಗಳು, ಕ್ರೀಡಾ ಸಾಮಗ್ರಿಗಳು, ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಔಷಧ, ಬಟ್ಟೆಹಾಗೂ ಇತರ ಗ್ರಾಹಕ ವಸ್ತುಗಳು ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತವೆ.

ಟಿಕ್‌ಟಾಕ್ ಸೇರಿ ಚೀನಾದ 52 ಆ್ಯಪ್ ಬ್ಯಾನ್‌; ಕೇಂದ್ರಕ್ಕೆ ಭಾರತ ಗುಪ್ತಚರ ಇಲಾಖೆ ಸೂಚನೆ!

ಇವುಗಳ ಮೌಲ್ಯ ವರ್ಷಕ್ಕೆ ಸುಮಾರು 10 ಲಕ್ಷ ಕೋಟಿ ರು.ನಷ್ಟಾಗುತ್ತದೆ. ಚೀನಾಕ್ಕೆ ಭಾರತವು ಜಗತ್ತಿನಲ್ಲೇ ಬಹುದೊಡ್ಡ ಆಮದುದಾರ ರಾಷ್ಟ್ರ. ಹೀಗಾಗಿ ಭಾರತ ಈ ವಸ್ತುಗಳ ಆಮದಿಗೆ ಕಠಿಣ ನಿರ್ಬಂಧಗಳನ್ನು ಹೇರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆಮದು ವಸ್ತುಗಳಿಗೆ ಗುಣಮಟ್ಟನಿಗದಿಪಡಿಸುವುದು, ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ ನೀಡುವುದು, ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವಂತೆ ಸೂಚಿಸುವುದು ಮುಂತಾದ ರೂಪದಲ್ಲಿ ನಿರ್ಬಂಧ ಹೇರುವ ಸಾಧ್ಯತೆಯಿದೆ. ಚೀನಾ ವಸ್ತುಗಳಿಗೆ ನೇರವಾಗಿ ತೆರಿಗೆ ಏರಿಸಿದರೆ ದೇಸೀ ಉತ್ಪಾದನೆಯ ಮೇಲೂ ಪರಿಣಾಮ ಉಂಟಾಗುವುದರಿಂದ ತೆರಿಗೆ ಏರಿಸುವ ಬಗ್ಗೆ ಸರ್ಕಾರ ಒಲವು ಹೊಂದಿಲ್ಲ. ಬದಲಿಗೆ, ಚೀನಾದಿಂದ ಆಮದು ಮಾಡಿಕೊಳ್ಳುವ ಟಾಪ್‌ 100 ವಸ್ತುಗಳಿಗೆ ಸುಂಕ ಏರಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಭಾರತ ಯುದ್ಧಕ್ಕೆ ಸನ್ನದ್ಧವಾಗ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ!

ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ಸಾಧ್ಯವೇ ಎಂಬುದನ್ನು ಇನ್ನಷ್ಟೇ ಪರಿಶೀಲನೆ ನಡೆಸಬೇಕಿದೆ. ಬೇರೆ ದೇಶಗಳಲ್ಲಿ ಬೆಲೆ ಹೆಚ್ಚಿದ್ದರೆ ಅದು ಆಮದುದಾರರಿಗೆ ನಷ್ಟಉಂಟುಮಾಡುವ ಸಾಧ್ಯತೆಯಿದೆ. ಜೊತೆಗೆ ಭಾರತೀಯ ಗ್ರಾಹಕರಿಗೂ ಬೆಲೆ ದುಬಾರಿಯಾಗುತ್ತದೆ. ಈಗ ಕೊರೋನಾ ಹಾವಳಿಯ ಸಮಯದಲ್ಲಿ ಇದು ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಬ್ಬರಿಗೂ ಸಮಸ್ಯೆ ಉಂಟುಮಾಡಬಹುದು. ಹಾಗಾಗಿ ಇನ್ನೂ ಒಂದೆರಡು ತಿಂಗಳು ಹೀಗೇ ಬಿಟ್ಟು ನಂತರ ನಿರ್ಧಾರ ಕೈಗೊಳ್ಳಬೇಕು ಎಂಬ ವಾದವೂ ಸರ್ಕಾರದಲ್ಲಿದೆ ಎನ್ನಲಾಗಿದೆ.

Follow Us:
Download App:
  • android
  • ios