ಚೀನಾ ಉತ್ಪನ್ನಗಳಿಗೆ ಬಹಿಷ್ಕಾರ; ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾದ ಭಾರತದ ಮೈಕ್ರೋಮ್ಯಾಕ್ಸ್ !

ಭಾರತದಲ್ಲಿ ಚೀನಾ ಫೋನ್‌ಗಳ ಆಕ್ರಮಣದಿಂದ ಭಾರತದ ಹಲವು ಕಂಪನಿಗಳು ಬಾಗಿಲು ಮುಚ್ಚಿತ್ತು. ಬಹುತೇಕ ಸ್ಮಾರ್ಟ್ ಫೋನ್‌ ಕಂಪನಿಗಳು ಭಾರತದಲ್ಲಿ ಫೋನ್ ಬಿಡುಗಡೆ ಮಾಡುವು ಸಾಹಸಕ್ಕೆ ಮುಂದಾಗುತ್ತಿರಲಿಲ್ಲ. ಇದೀಗ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದಂತೆ ಭಾರತದ ಮೈಕ್ರೋಮ್ಯಾಕ್ಸ್ ಕಂಪನಿ ಇದೀಗ ಹೊಸ ಹಾಗೂ ಆಕರ್ಷಕ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ.

Micromax set to launch smartphone in India after boycott china products

ನವದೆಹಲಿ(ಜೂ.19): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಚೀನಾ ವಿರುದ್ಧ ಹಲವು ದೇಶಗಳು ಅಸಮಧಾನ ವ್ಯಕ್ತಪಡಿಸಿದೆ. ಇನ್ನು ಚೀನಾ ಜೊತೆಗಿನ ವ್ಯವಾಹಾರಕ್ಕೆ ಬ್ರೇಕ್ ಹಾಕುತ್ತಿದೆ. ಇತ್ತ ಭಾರತ ಕೂಡ ಚೀನಿ ವಸ್ತುಗಳ ಬಳಕೆ ಮಾಡದಂತೆ ಅಭಿಯಾನ ಆರಂಭಿಸಿತ್ತು. ಲಡಾಖ್ ಗಡಿಯಲ್ಲಿ ಭಾರತೀಯ ಯೋಧರ ಮೇಲಿನ ದಾಳಿ ಬಳಿಕ ಇದೀಗ ಚೀನಾ ಹಾಗೂ ಉತ್ಪನ್ನಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಭಾರತದ ಮೈಕ್ರೋಮ್ಯಾಕ್ಸ್ ಕಂಪನಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.

ಗಲ್ವಾನ್ ನದಿ ತಿರುಗಿಸಲು ಚೀನಾ ಯತ್ನ: ಗ್ರಾಫ್ ಮೂಲಕ ತಿಳಿಸುವ ಪ್ರಯತ್ನವಿದು..!..

ಪ್ರಿಮಿಯಂ ಫೀಚರ್ಸ್, ಮಾಡರ್ನ್ ಲುಕ್ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಇದಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ. ಒಟ್ಟು 3 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಭಾರತದಲ್ಲಿ ಚೀನಾ ಸ್ಮಾರ್ಟ್‌ ಫೋನ್‌ಗಳ ಅಬ್ಬರ ಹೆಚ್ಚಾದಾಗ ಮೈಕ್ರೋಮ್ಯಾಕ್ಸ್ ಭಾರತದಲ್ಲೇ ಹಿನ್ನಡೆ ಅನುಭವಿಸಿತು. ಹೀಗಾಗಿ 2019 ಅಕ್ಟೋಬರ್ ಬಳಿಕ ಭಾರತದಲ್ಲಿ ಯಾವುದೇ ಫೋನ್ ಬಿಡುಗಡೆ ಮಾಡಿಲ್ಲ.  ಕಳೆದ ಅಕ್ಟೋಬರ್‌ನಲ್ಲಿ ಐಒನ್ ಫೋನ್ ಬಿಡುಗಡೆ ಮಾಡಿತ್ತು. ಇದರ ಬೆಲೆ 8,199 ರೂಪಾಯಿ.

ಗಲ್ವಾನ್ ಆಯ್ತು, ಈಗ ಗೊಗ್ರಾ ಪೋಸ್ಟ್‌ನಲ್ಲಿಯೂ ಚೀನಾ ಅತಿಕ್ರಮಣ

ಮೈಕ್ರೋಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ. ಇದರ ಬೆಲೆ 10,000 ರೂಪಾಯಿ ಒಳಗಿರಲಿದೆ. ಪ್ರಧಾನಿ ನರೇಂದ್ರ ಮೋದಿಯ ವೋಕಲ್ ಫಾರ್ ಲೋಕಲ್ ಅನ್ನೋ ಘೋಷಣೆಯಿಂದ ಇದು ಸಾಧ್ಯವಾಗುತ್ತಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ.  ಸಾಮಾಜಿಕ ಜಾಲತಾಣದಲ್ಲಿ ಮೈಕ್ರೋಮ್ಯಾಕ್ಸ್ ಫೋನ್ ಬಿಡುಗಡೆ ಕುರಿತು ಹೇಳಿದೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios