ಸಂಗೀತ ಕ್ಷೇತ್ರದಲ್ಲಿಯೂ ಪ್ರತಿಭಾನ್ವಿತರ ಆತ್ಮಹತ್ಯೆಯ ಸುದ್ದಿಯನ್ನು ಜನ ಕೇಳಬೇಕಾಗಬಹುದು ಎಂದಿರುವ ಪ್ರಸಿದ್ದ ಗಾಯಕ ಸೋನು ನಿಗಮ್ ಬಾಲಿವುಡ್ ಮ್ಯೂಸಿಕ್ ಮಾಫಿಯಾ ಬಗ್ಗೆ ಏನ್ ಹೇಳಿದ್ದಾರೆ..? ಇಲ್ಲಿ ಓದಿ.

ಯುವ ನಟ ಸುಶಾಂತ್ ಸಿಂಗ್ ರಜಪೂತ್ ಜೂ.14ರಂದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಬಾಲಿವುಡ್‌ನ ಸ್ವಜನಪಕ್ಷಪಾತದ ಬಗ್ಗೆ ಭಾರೀ ಚರ್ಚೆಯಾಯಿತು. ಆಲಿಯಾ ಭಟ್, ಸಲ್ಮಾನ್‌ ಖಾನ್, ಕರಣ್ ಜೋಹರ್ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ರು. ನಟಿ ಕಂಗನಾ ರಣಾವತ್ ನೇರ ಮತ್ತು ಸ್ಪಷ್ಟವಾಗಿ ಬಾಲಿವುಡ್ ನೆಪೋಟಿಸಂನ್ನು ಟೀಕಿಸಿದ್ರು. ಇದೀಗ ಸಂಗೀತ ಕ್ಷೇತ್ರದ ಬಗ್ಗೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಂ ಮಾತನಾಡಿದ್ದಾರೆ.

ಮ್ಯೂಸಿಕ್ ಮಾಫಿಯಾ ಬಗ್ಗೆ ಮಾತನಾಡಿದ ಸೋನು, ಬಾಲಿವುಡ್‌ನಲ್ಲಿ ಪ್ರತಿಭಾನ್ವಿತ ಹಾಡುಗಾರರು, ಕವಿಗಳು, ಕಂಪೋಸರ್‌ಗಳ ಜೀವನ ಹೇಗೆ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್!

ಹಾಡುಗಳನ್ನು ಬರೆಯುವವರಿಗೆ ಅತ್ಯಂತ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಪ್ಲೇಬ್ಯಾಕ್ ಕಲಾವಿದರು ಮತ್ತು ಅವರೊಂದಿಗೆ ಸಂಯೋಜಿತವಾಗಿರುವ ಸಂಯೋಜಕರಿಗೆ ಮಾತ್ರ ಸಹಿ ಹಾಕುವುದನ್ನು ಲೇಬಲ್‌ ಎಂದು ಅವರು ಕರೆದಿದ್ದಾರೆ. ಹಾಗೆಯೇ ನಿರ್ದೇಶಕ, ನಿರ್ಮಾಪಕರನ್ನು ಮೀರಿ ಅಗತ್ಯವಿರದಿದ್ದರೂ ಹಾಡುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ.

ಒಂದು ಚಿತ್ರದಲ್ಲಿ ಯಾರು ಹಾಡಬೇಕು ಮತ್ತು ಯಾರು ಹಾಡಬಾರದು ಎಂಬ ಬಗ್ಗೆ ಶಾಟ್‌ಗಳನ್ನು ಕರೆಯುವ ಎರಡು ಸಂಗೀತ ಕಂಪನಿಗಳು ಇವೆ ಎಂದಿದ್ದಾರೆ. ಹೊಸ ಗಾಯಕರ ಧ್ವನಿ, ಮಾತು, ಶಬ್ದಗಳಲ್ಲಿ ಅವರ ಹತಾಶೆಯನ್ನು ನಾನು ನೋಡಿದ್ದೇನೆ. ಅವರದು ರಕ್ತ ಕಣ್ಣೀರು ಎಂದು ಬೇರಸ ವ್ಯಕ್ತಪಡಿಸಿದ್ದಾರೆ ಗಾಯಕ ಸೋನು.

ಕಾರಣ ಹೇಳದೆ ಸಿನಿಮಾ ನಿರಾಕರಿಸಿದ ಆಲಿಯಾ; ಸುಶಾಂತ್ ಕೊಟ್ಟ ಟಾಂಗ್ ಹೀಗಿತ್ತು! 

ಒಬ್ಬ ನಟನಿಗೆ ಗಾಯಕನೊಂದಿಗೆ ಉತ್ತಮ ಸಂಬಂಧವಿರದಿದ್ದರೆ ಆಗಲೂ ಕಲಾವಿದನೊಬ್ಬ ಅವಕಾಶ ಕಳೆದುಕೊಳ್ಳುತ್ತಾನೆ. ಒಂದು ಸಿನಿಮಾಗೆ ಗಾಯಕನನ್ನು ಆರಿಸುವಾಗ ಆ ಸಿನಿಮಾದ ನಟನ ಇಷ್ಟ ಕಷ್ಟವನ್ನೂ ಗಮನಿಸಿ ಗಾಯಕನ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ.

View post on Instagram

1991ರಿಂದ ನಾನು ಬಾಲಿವುಡ್‌ನಲ್ಲಿದ್ದೇನೆ. ಕೆಲವೊಮ್ಮ ಬೇರೆಯವರು ಹಾಡಿದ ಹಾಡಿಗೆ ಡಬ್ಬಿಂಗ್‌ನಲ್ಲಿ ನಾನು ಧ್ವನಿ ಕೊಡಬೇಕಾಗಿ ಬಂದಿದೆ ಎಂದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿಯೂ ಪ್ರತಿಭಾನ್ವಿತರ ಆತ್ಮಹತ್ಯೆಯ ಸುದ್ದಿಯನ್ನು ಜನರು ಕೆಳಬೇಕಾಗಬಹುದು ಎಂದಿರುವ ಅವರು, ಬಾಲಿವುಡ್ ಮ್ಯೂಸಿಕ್ ಇಂಡಸ್ಟ್ರಿ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿದ್ದಾರೆ.