ಗುಂಡಿನ ದಾಳಿ ಮಾಡಿದ ಚೀನಾ, ಬಯಲಾಯ್ತು ಸುಶಾಂತ್ ಆತ್ಮಹತ್ಯೆ ಕಾರಣ; ಜೂ.16ರ ಟಾಪ್ 10 ಸುದ್ದಿ!

ಗಡಿಯಲ್ಲಿ ಖ್ಯಾತೆ ತೆಗೆದಿದ್ದ ಚೀನಾ ಇದೀಗ ಭಾರತದ ಮೇಲೆ ಗುಂಡಿನ ದಾಳಿ ಮಾಡಿದೆ. ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಕೊರೋನಾ ಸಾವಿನಲ್ಲಿ ಭಾರತ 8ನೇ ಸ್ಥಾನಕ್ಕೆ ಜಿಗಿದಿದೆ. ವೈರಸ್ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್‌ಗೆ ಸ್ಥಳಾಂತರವಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಬಾಲಿವುಡ್ ಒತ್ತಡವೇ ಕಾರಣ ಎನ್ನಲಾಗುತ್ತಿದೆ. ಜೂನ್ 16ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.
 

India China border to Sushant singh suicide top 10 news of june 16

ಭಾರತದ ಸೇನೆ ಮೇಲೆ ಚೀನಾ ಗುಂಡಿನ ದಾಳಿ: ಮೂವರು ಯೋಧರು ಹುತಾತ್ಮ!...

India China border to Sushant singh suicide top 10 news of june 16

ಗಡಿಯಲ್ಲಿ ದಿನೇ ದಿನೇ ಚೀನಾ ಹಾವಳಿ ಹೆಚ್ಚುತ್ತಿದ್ದು, ಮತ್ತೆ ಮತ್ತೆ ಇದು ತನ್ನ ನರಿ ಬುದ್ಧಿ ತೋರಿಸುತ್ತಿದೆ. ಈಗಾಗಲೇ ಭಾರತ ಹಾಗೂ ಚೀನಾದ ಗಡಿ ಪ್ರದೇಶವಾದ ಲಡಾಖ್‌ನಲ್ಲಿ ಹೆಚ್ಚಿನ ಸೈನ್ಯ ನಿಯೋಜಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಡ್ರ್ಯಾಗನ್ ರಾಷ್ಟ್ರ, ಮತ್ತೆ ತನ್ನ ಪುಂಡಾಟ ಮುಂದುವರೆಸಿದೆ. ಈ ಬಾರಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಸೇನಾಧಿಕಾರಿ ಸೇರಿ ಒಟ್ಟು ಮೂರು ಯೋಧರು ಹುತಾತ್ಮರಾಗಿದ್ದಾರೆ.

ಕೊರೋನಾ ಸಾವಿನ ಸಂಖ್ಯೆ: ಭಾರತವೀಗ ವಿಶ್ವ ನಂ.8!

India China border to Sushant singh suicide top 10 news of june 16

ದೇಶಾದ್ಯಂತ ಕೊರೋನಾ ಅನಾಹುತಗಳು ಸೋಮವಾರ ಕೂಡಾ ಮುಂದುವರೆದಿದ್ದು, ನಿನ್ನೆ ಒಂದೇ ದಿನ 366 ಜನ ಸಾವನ್ನಪ್ಪಿದ್ದು, 10490 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 9911ಕ್ಕೆ ತಲುಪಿದೆ. ಈ ಮೂಲಕ ಅತಿ ಹೆಚ್ಚು ಕೊರೋನಾ ಸೋಂಕಿತರು ಸಾವನ್ನಪ್ಪಿದ ದೇಶಗಳ ಪೈಕಿ 9ರಿಂದ 8ನೇ ಸ್ಥಾನಕ್ಕೆ ಏರಿದೆ. ಮತ್ತೊಂದೆಡೆ ಒಟ್ಟು ಸೋಂಕಿತರ ಸಂಖ್ಯೆ 335626 ಕ್ಕೆ ತಲುಪಿದೆ. ಜೊತೆಗೆ 174315 ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಕೊರೋನಾ ಮುಕ್ತ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ?

India China border to Sushant singh suicide top 10 news of june 16

ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬರದ ಕಾರಣ ಇದೀಗ ಟಿ20 ವಿಶ್ವಕಪ್ ಆಯೋಜನೆ ಕ್ರಿಕೆಟ್ ಆಸ್ಟ್ಕೇಲಿಯಾಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೂರ್ನಿ ಮುಂದೂಡಲು ಐಸಿಸಿಗೆ ಆಸೀಸ್ ಮನವಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೊರೋನಾ ವೈರಸ್‌ನಿಂದ ಮುಕ್ತವಾಗಿರುವ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲು ಮುಂದೆ ಬಂದಿದೆ.

ಬಾಲಿವುಡ್‌ ಒತ್ತಡದಿಂದಾಗಿ ಸುಶಾಂತ್‌ ಆತ್ಮಹತ್ಯೆ? ಕಣ್ಣೀರಿಟ್ಟಿದ್ದ ನಟ!

India China border to Sushant singh suicide top 10 news of june 16

ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದ ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ಸೋಮವಾರ ಸಂಜೆ ನೆರವೇರಿತು. ಹಲವು ನಟರು ಹಾಗೂ ಚಿತ್ರೋದ್ಯಮದ ಮಂದಿ ಈ ವೇಳೆ ಹಾಜರಿದ್ದು ಅಗಲಿದ ನಟನಿಗೆ ವಿದಾಯ ಹೇಳಿದರು. ಈ ನಡುವೆ, ನಟನ ಸಾವಿನ ಕುರಿತು ಸೋಮವಾರ ಸಾಕಷ್ಟುಚರ್ಚೆಯಾಗಿದ್ದು, ಚಿತ್ರೋದ್ಯಮ ಹಾಗೂ ಹೊರಗಿನ ಹಲವು ಮಂದಿ ಬಾಲಿವುಡ್‌ ಬಗ್ಗೆಯೇ ಬೊಟ್ಟು ಮಾಡಿದ್ದಾರೆ.

ರೇಪ್, ಕೊಲೆ ಬೆದರಿಕೆ ಹಾಕಲು ಹೇಸದ ಸಲ್ಮಾನ್ ಖಾನ್ ಕುಟುಂಬ'

India China border to Sushant singh suicide top 10 news of june 16

ಬಾಲಿವುಡ್ ನಲ್ಲಿ ಎಲ್ಲವೂ ಸರಿ ಇಲ್ಲ. ಸುಶಾಂತ್ ಅವರನ್ನು ಬ್ಯಾನ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಇದೇ ಕಾರಣಕ್ಕೆ ನಟ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಹರಿದಾಡುತ್ತಿರುವಾಗ  ನಿರ್ದೇಶಕರೊಬ್ಬರು ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಮೇಲೆ ಗುಡುಗಿದ್ದಾರೆ.

ಚೀನಾ ವಸ್ತು ನಿಷೇಧಕ್ಕೆ ಬಜಾಜ್‌ ಸೇರಿ ಕೆಲ ಕಂಪನಿಗಳ ಆಕ್ಷೇಪ!

India China border to Sushant singh suicide top 10 news of june 16

ಗಡಿಯಲ್ಲಿ ಕ್ಯಾತೆ ಹಿನ್ನೆಲೆಯಲ್ಲಿ ಚೀನಾ ವಸ್ತುಗಳ ಆಮದು ನಿಷೇಧಕ್ಕೆ ದೇಶಾದ್ಯಂತ ಭಾರೀ ಕೂಗು ವ್ಯಕ್ತವಾಗಿರುವಾಗಲೇ, ಇಂಥದ್ದೊಂದು ಆಂದೋಲನಕ್ಕೆ ದೇಶದ ಪ್ರಮುಖ ವಾಹನ ಉತ್ಪಾದನಾ ಕಂಪನಿ ಬಜಾಜ್‌ ಸೇರಿದಂತೆ ಕೆಲ ಆಟೋಮೊಬೈಲ್‌ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ನಮ್ಮ ಉತ್ಪನ್ನಗಳಿಗೆ ಅಗತ್ಯವಾದ ಹಲವು ವಸ್ತುಗಳಿಗೆ ಚೀನಾವನ್ನೇ ಅವಲಂಬಿಸಿರುವಾಗ, ಇಂಥ ನಿಷೇಧ ಕಾರ್ಯಸಾಧುವಾಗದು ಎಂದು ಉಭಯ ಕಂಪನಿಗಳು ಹೇಳಿವೆ.

'ಫೀಸ್ ಕಟ್ಟಿ'; ಪೋಷಕರಿಗೆ ಪ್ರತಿಷ್ಠಿತ ಕಾಲೇಜುಗಳಿಂದ ಕಿರುಕುಳ

India China border to Sushant singh suicide top 10 news of june 16

ಕೆಲವು ಪ್ರತಿಷ್ಠಿತ ಕಾಲೇಜುಗಳು ಫೀಸ್ ಕಟ್ಟಿ ಅಂತ ವಿದ್ಯಾರ್ಥಿಗಳ ಪೋಷಕರಿಗೆ ಕಿರುಕುಳ ಕೊಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಡೆಡ್‌ಲೈನ್ ಕೊಟ್ಟು ಫೀಸ್ ಕಟ್ಟಲೇಬೇಕು ಅಂತ ನೋಟಿಸ್ ನೀಡಿದೆ. 

ಮ್ಯಾನೇಜರ್ ಆಯ್ತು, ಸುಶಾಂತ್ ಸಿಂಗ್ ಆಯ್ತು, ಇದೀಗ ವರ್ಣಚಿತ್ರಕಾರನೂ ಆತ್ಮಹತ್ಯೆ; ಏನಿದು ಟ್ಟೀಟ್?

India China border to Sushant singh suicide top 10 news of june 16

ಬಾಲಿವುಡ್ ನಟ ಸುಶಾಂತ್ ಸಿಂಗ್ ಟ್ಟೀಟ್ಟರ್ ಖಾತೆ ಕವರ್‌ ಫೋಟೋ ಮಾಡಿರುವ ವರ್ಣಚಿತ್ರಕಾರನೂ ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ....

ಪೋರ್ನ್‌ ವೀಕ್ಷಿಸಿದರೆ ಮನೆಗೇ ಪೋರ್ನ್‌ ನಟರ ಆಗಮನ, ವಿಡಿಯೋ ವೈರಲ್!...

India China border to Sushant singh suicide top 10 news of june 16

ಹದಿಹರೆಯದವರಲ್ಲಿ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಚಿತ್ರತಾರೆಯರನ್ನು ಬಳಸಿ ನ್ಯೂಜಿಲೆಂಡ್‌ ಸರ್ಕಾರ ತಯಾರಿಸಿರುವ ಜಾಹೀರಾತಿಗೆ ಭಾರಿ ಮೆಚ್ಚುಗೆ ಕೇಳಿಬರುತ್ತಿದೆ. ಪೋರ್ನ್‌ ಸಿನಿಮಾಗಳಲ್ಲಿ ನೈಜ ಲೈಂಗಿಕತೆಯನ್ನು ತೋರಿಸುವುದಿಲ್ಲ, ಪೋರ್ನ್‌ಗೂ ವಾಸ್ತವದ ಲೈಂಗಿಕ ಕ್ರಿಯೆಗೂ ವ್ಯತ್ಯಾಸವಿದೆ. ಸೆಕ್ಸ್‌ಗೂ ಮುನ್ನ ಸಂಗಾತಿಯ ಒಪ್ಪಿಗೆ ಕೇಳುವುದು ಮುಖ್ಯ ಎಂಬುದನ್ನು ಈ ಜಾಹೀರಾತು ಹೇಳುತ್ತದೆ.

ಇಂಧನ ಬೆಲೆ ಏರಿಕೆ ಸರಿಯಲ್ಲ: ಮೋದಿಗೆ ಸೋನಿಯಾ ಪತ್ರ...

India China border to Sushant singh suicide top 10 news of june 16

ಕೊರೋನಾ ಮಹಾಮಾರಿಯಿಂದ ಕೆಲಸ, ಆದಾಯವಿಲ್ಲದೆ ಜನ ಕಷ್ಟ ಪಡುತ್ತಿರುವಾಗ ಬೆಟ್ರೋಲ್, ಡಿಸೇಲ್‌ ಬೆಲೆ ಏರಿಸುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios