ಇಂಧನ ಬೆಲೆ ಏರಿಕೆ ಸರಿಯಲ್ಲ: ಮೋದಿಗೆ ಸೋನಿಯಾ ಪತ್ರ
ಕೊರೋನಾ ಮಹಾಮಾರಿಯಿಂದ ಕೆಲಸ, ಆದಾಯವಿಲ್ಲದೆ ಜನ ಕಷ್ಟ ಪಡುತ್ತಿರುವಾಗ ಬೆಟ್ರೋಲ್, ಡಿಸೇಲ್ ಬೆಲೆ ಏರಿಸುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ.
ಕೊರೋನಾ ಮಹಾಮಾರಿಯಿಂದ ಕೆಲಸ, ಆದಾಯವಿಲ್ಲದೆ ಜನ ಕಷ್ಟ ಪಡುತ್ತಿರುವಾಗ ಬೆಟ್ರೋಲ್, ಡಿಸೇಲ್ ಬೆಲೆ ಏರಿಸುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ.
ಈ ಸಂಬಂಧ ಪ್ರಧಾನಿಗೆ ಪತ್ರ ಬರೆದ ಅವರು, ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ದೇಶ ಆರ್ಥಿಕವಾಗಿ, ಆರೋಗ್ಯದ ವಿಚಾರದಲ್ಲಿ, ಸಾಮಾಜಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಮಾರ್ಚ್‌ನಿಂದ ಆರಂಭಿಸಿದಂತೆ ಸಂಕಷ್ಟದಲ್ಲಿರುವ ಜನರಿಗೆ ಪೆಟ್ರೋಲ್ ಬೆಲೆ ಏರಿಕೆ ಬರೆ ನೀಡಿದ್ದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
Fact check: ನಟ ಸುಶಾಂತ್ ಸಿಂಗ್ ರಜಪೂತ್ ಅವ್ರನ್ನು ಕ್ರಿಕೆಟರ್ ಎಂದ್ರಾ ರಾಹುಲ್ ಗಾಂಧಿ..?
ದೊಡ್ಡ, ಚಿಕ್ಕ ಉದ್ಯಮಗಳು ನಶಿಸಿ, ಜನ ಕೆಲಸ ಕೂಲಿ ಕಳೆದುಕೊಂಡಿರುವ ಸಂದರ್ಭ ಈ ರೀತಿ ಇಂಧನ ಬೆಲೆ ಏರಿಕೆ ಮಾಡಿರುವ ಲಾಜಿಲ್ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಇಂಧನಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಜನರಿಗೆ ಇನ್ನಷ್ಟು ಕಷ್ಟ ಕೊಟ್ಟು ಬಿಜೆಪಿ ಸರ್ಕಾರ ಖಜಾನೆ ತುಂಬಿಸಿಕೊಳ್ಳುತ್ತಿದೆ. ಕಷ್ಟದಲ್ಲಿ ಜನರಿಗೆ ನೆರವಾಗುವುದು ಜನರ ಕೆಲಸ, ಜನರಿಗೆ ಮತ್ತ್ಟು ಕಷ್ಟ ಕೊಡಬಾರದು ಎಂದಿದ್ದಾರೆ.
Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!
ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಶೇ ೯ರಷ್ಟು ಕಡಿಮೆಯಾಗಿದೆ. ಈ ಸಂದರ್ಭ ಜನರಿಗೆ ಲಾಭ ಮಾಡಿಕೊಡಲು ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.