ಕೊರೋನಾ ಸಾವಿನ ಸಂಖ್ಯೆ: ಭಾರತವೀಗ ವಿಶ್ವ ನಂ.8!

ಸಾವಿನ ಸಂಖ್ಯೆ: ಭಾರತವೀಗ ವಿಶ್ವ ನಂ.8| ನಿನ್ನೆ 366 ಜನರ ಸಾವು, 10490 ಜನರಿಗೆ ಕೊರೋನಾ| ಸಾವಿನ ಪ್ರಮಾಣ 9911ಕ್ಕೆ, ಸೋಂಕಿತರು 3.32 ಲಕ್ಷಕ್ಕೆ

India coronavirus death toll nears 10000 mark cases cross 3 32 lakh

ನವದೆಹಲಿ(ಜೂ.16): ದೇಶಾದ್ಯಂತ ಕೊರೋನಾ ಅನಾಹುತಗಳು ಸೋಮವಾರ ಕೂಡಾ ಮುಂದುವರೆದಿದ್ದು, ನಿನ್ನೆ ಒಂದೇ ದಿನ 366 ಜನ ಸಾವನ್ನಪ್ಪಿದ್ದು, 10490 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 9911ಕ್ಕೆ ತಲುಪಿದೆ. ಈ ಮೂಲಕ ಅತಿ ಹೆಚ್ಚು ಕೊರೋನಾ ಸೋಂಕಿತರು ಸಾವನ್ನಪ್ಪಿದ ದೇಶಗಳ ಪೈಕಿ 9ರಿಂದ 8ನೇ ಸ್ಥಾನಕ್ಕೆ ಏರಿದೆ. ಮತ್ತೊಂದೆಡೆ ಒಟ್ಟು ಸೋಂಕಿತರ ಸಂಖ್ಯೆ 335626 ಕ್ಕೆ ತಲುಪಿದೆ. ಜೊತೆಗೆ 174315 ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಸೋಮವಾರ ಮಹಾರಾಷ್ಟ್ರದಲ್ಲಿ 188 ಬಲಿಯಾಗುವುದರೊಂದಿಗೆ ಈ ವ್ಯಾಧಿಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 4128ಕ್ಕೆ ಜಿಗಿದಿದೆ. ದಿಲ್ಲಿಯಲ್ಲಿ ಸೋಮವಾರ 73 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 1400ಕ್ಕೆ ಏರಿಕೆಯಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ 44, ಗುಜರಾತ್‌ನಲ್ಲಿ 28, ಒಡಿಶಾದಲ್ಲಿ 14, ಹರ್ಯಾಣದಲ್ಲಿ 12, ಪಶ್ಚಿಮ ಬಂಗಾಳದಲ್ಲಿ 10 ಮಂದಿ ಬಲಿಯಾಗಿದ್ದಾರೆ.

ಮತ್ತೊಂದೆಡೆ, ಮಹಾರಾಷ್ಟ್ರದಲ್ಲಿ 2786,ತಮಿಳುನಾಡಿನಲ್ಲಿ 1843, ದೆಹಲಿಯಲ್ಲಿ 1647, ಗುಜರಾತ್‌ನಲ್ಲಿ 514, ಉತ್ತರ ಪ್ರದೇಶದಲ್ಲಿ 000, ಪಶ್ಚಿಮ ಬಂಗಾಳದಲ್ಲಿ 407, ಆಂಧ್ರ ಪ್ರದೇಶದಲ್ಲಿ 304 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

Latest Videos
Follow Us:
Download App:
  • android
  • ios