ಸರ್ಕಾರಿ ನೌಕರರಿಗೆ ಬಂಪರ್, RCBಗೆ ಸವಾಲ್ ಹಾಕಿದ ಕೆಕೆಆರ್; ಅ.12ರ ಟಾಪ್ 10 ಸುದ್ದಿ!
ಹಬ್ಬದ ವೇಳೆ ಸರ್ಕಾರಿ ನೌಕಕರಿಗೆ ಹಲವು ಆಫರ್ ಘೋಷಿಸಲಾಗಿದೆ. ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜಮಾತೆ ವಿಜಯಾ ರಾಜೆ ಸಿಂಧಿಯಾರವರ 100 ಜಯಂತಿಯಂದು 100 ರೂ. ನಾಣ್ಯ ಬಿಡುಗಡೆ ಮಾಡಲಾಗಿದೆ. ಬೂದುಪಟ್ಟಿಯಿಂದ ಹೊರ ಬರಲು ಪಾಕಿಸ್ತಾನ ಕಸರತ್ತು, ಆರ್‌ಸಿಬಿ ತಂಡಕ್ಕೆ ಕೆಕೆಆರ್ ಸವಾಲು ಸೇರಿದಂತೆ ಅಕ್ಟೋಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಹಬ್ಬದ ವೇಳೆ ಸರ್ಕಾರಿ ನೌಕಕರಿಗೆ ಬಂಪರ್, 10 ಸಾವಿರ ರೂ. ಅಡ್ವಾನ್ಸ್ ಪಡೆಯುವ ಅವಕಾಶ!...
ಕೊರೋನಾತಂಕ ನಡುವೆ ದೇಶದ ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿಗೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೇಕ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕೊರೋನಾ ದೇಶದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹೀಗಿದ್ದರೂ ಸರ್ಕಾರ ಬಡವರು ಹಾಗೂ ನಿರಾಶ್ರಿತರಿಗೆ ಸಹಾಯ ಮಾಡಿದೆ. ಆತ್ಮನಿರ್ಭರ ಭಾರತ ಪ್ಯಾಕೇಜಗ್‌ನಿಂದ ಬೇಡಿಕೆ ಹೆಚ್ಚಿದೆ. ಇದು ಪೂರೈಕೆ ಅಡಚಣೆಯನ್ನು ಕಡಿಮೆ ಮಾಡಿದೆ ಎಂದಿದ್ದಾರೆ.
ಕಾಂಗ್ರೆಸ್‌ಗೆ ಗುಡ್‌ಬೈ, ಬಿಜೆಪಿಗೆ ಸೇರಿದ ನಟಿ ಖುಷ್ಬೂ!...
ಕನ್ನಡ ಸೇರಿ ಬಹುಭಾಷಾ ತಾರೆ ಹಾಗೂ ಕಾಂಗ್ರೆಸ್ ವಕ್ತಾರೆ ಖುಷ್ಬೂ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ರಾಜಮಾತೆ ಸಿಂಧಿಯಾ ಜಯಂತಿ, 100 ರೂ. ನಾಣ್ಯ ಬಿಡುಗಡೆ ಮಾಡಿದ ಮೋದಿ!...
ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜಮಾತೆ ವಿಜಯಾ ರಾಜೆ ಸಿಂಧಿಯಾರವರ 100 ಜಯಂತಿಯಂದು 100 ರೂ. ನಾಣ್ಯವನ್ನು ಬಿಡುಗಡೆಗೊಳಿಸಿದ್ದಾರೆ.
ಶಾರ್ಜಾದಲ್ಲಿಂದು ಬಲಿಷ್ಠ RCB-KKR ತಂಡಗಳು ಮುಖಾಮುಖಿ..!...
ಶಾರ್ಜಾದಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಬಲಿಷ್ಠ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅರ್ಜುನ್ ಸರ್ಜಾ- ರಾಧಿಕಾ ಕುಮಾರಸ್ವಾಮಿ ವಿಡಿಯೋಗಳು ವೈರಲ್!...
ನಟಿ ರಾಧಿಕಾ ಕುಮಾರಸ್ವಾಮಿ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಸದ್ದು ಮಾಡುತ್ತಿವೆ. ಅಂದಹಾಗೆ ಇನ್ನೂ ತೆರೆ ಕಾಣದ ಚಿತ್ರದ ಮೇಕಿಂಗ್ ವಿಡಿಯೋಗಳು ಇವು ಎಂಬುದು ನಿಮ್ಮ ಗಮನಕ್ಕಿರಲಿ.
ಅಧಿಕಾರಕ್ಕೆ ಪಕ್ಷೇತರರ ಮನ ಒಲಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್...
ಅಧಿಕಾರ ಸೂತ್ರ ಪಕ್ಷೇತರ ಸದಸ್ಯರ ಕೈಯಲ್ಲಿದೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿರುವ ಕಾರಣ ಪಕ್ಷೇತರರು ಯಾರ ಪಕ್ಷದ ಕೈ ಹಿಡಿಯುವರೋ ಆ ಪಕ್ಷ ಅಧಿಕಾರಕ್ಕೆ ಏರಲಿದೆ.
ಹೊಸ ಎಲೆಕ್ಟ್ರಿಕ್ ವಾಹನ ನೀತಿ ಜಾರಿ; ರೋಡ್ ಟ್ಯಾಕ್ಸ್ ಸಂಪೂರ್ಣ ಉಚಿತ!...
ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ದುಬಾರಿಯಾಗಿದೆ. ಹೀಗಾಗಿ ಸಬ್ಸಡಿ ಘೋಷಿಸಿದೆ. ಇದೀಗ ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ಎಲೆಕ್ಟ್ರಿಕ್ ವಾಹನಕ್ಕೆ ರೋಡ್ ಟ್ಯಾಕ್ಸ್ ಸಂಪೂರ್ಣ ಉಚಿತವಾಗಿದೆ.
ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!...
ಸೋಶಿಯಲ್ ಮಿಡಿಯಾ ಅನ್ನೋದು ದೊಡ್ಡ ಸಾಗರದಂತೆ, ಇಲ್ಲೊಂದು ವಿಚಾರ ಮೆಚ್ಚುಗೆಗೆ ಪಾತ್ರವಾದರೆ ಭಾರೀ ಪ್ರಸಿದ್ಧಿ ತಂದು ಕೊಡುತ್ತದೆ. ಆದರೆ ಯಾವುದಾದರೊಂದು ವಿಚಾರಕ್ಕೆ ಖಂಡನೆಗೊಳಗಾದರೆ ಅದು ಮತ್ತೆ ಜನರ ಪ್ರೀತಿ ಪಡೆಯಲು ಹರ ಸಾಹಸ ಮಾಡಬೇಕಾಗುತ್ತದೆ. ಟೈಟಾನ್ ಗ್ರೂಪ್‌ನ ತನಿಷ್ಕ್ ಜ್ಯುವೆಲ್ಲರಿಯ ಜಾಹೀರಾತೊಂದು ನೆಟ್ಟಿಗರನ್ನು ಕೆರಳಿಸಿದ್ದು, #BoycottTanishq ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.
ಬೂದುಪಟ್ಟಿಯಿಂದ ಹೊರಕ್ಕೆ ಬರಲು ಲಾಬಿ ಸಂಸ್ಥೆ ಮೊರೆ ಹೋದ ಪಾಕಿಸ್ತಾನ!...
ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿರುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ನಿರ್ಬಂಧಗಳ ‘ಬೂದು ಪಟ್ಟಿ’ಯಲ್ಲಿರುವ ಪಾಕಿಸ್ತಾನ, ಮುಂಬರುವ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಸಭೆಯಲ್ಲಿ ಅದರಿಂದ ಹೊರಬರಲು ಹರಸಾಹಸ ಆರಂಭಿಸಿದೆ.
ಮೂರು ಸಚಿವರ ಖಾತೆ ಬದಲು: ಶ್ರೀರಾಮುಲುಗೆ ಶಾಕ್, ಡಿಸಿಎಂ ಸಿಗಲಿಲ್ಲ, ಆರೋಗ್ಯ ಖಾತೆಯೂ ಇಲ್ಲ!...
ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ಒಟ್ಟು ಮೂವರು ಸಚಿವರ ಖಾತೆಗಳನ್ನು ಬದಲಾಯಿಸಿದ್ದು, ಇದಕ್ಕೆ ರಾಜ್ಯಪಾಲರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಚಿವ ಶ್ರೀರಾಮುಲು ಬಳಿ ಇದ್ದ ಎರಡು ಖಾತೆಗಳನ್ನು ಹಿಂಪಡೆದು, ಒಂದು ಹೊಸ ಖಾತೆ ಜವಾಬ್ದಾರಿ ವಹಿಸಲಾಗಿದೆ. ಈ ಬದಲಾವಣೆಯಿಂದ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.