Asianet Suvarna News Asianet Suvarna News

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಜಾರಿ; ರೋಡ್ ಟ್ಯಾಕ್ಸ್ ಸಂಪೂರ್ಣ ಉಚಿತ!

ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ದುಬಾರಿಯಾಗಿದೆ. ಹೀಗಾಗಿ ಸಬ್ಸಡಿ ಘೋಷಿಸಿದೆ. ಇದೀಗ ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ಎಲೆಕ್ಟ್ರಿಕ್ ವಾಹನಕ್ಕೆ ರೋಡ್ ಟ್ಯಾಕ್ಸ್ ಸಂಪೂರ್ಣ ಉಚಿತವಾಗಿದೆ.

Delhi government exempted road tax on new electric vehicle ckm
Author
Bengaluru, First Published Oct 12, 2020, 3:34 PM IST
  • Facebook
  • Twitter
  • Whatsapp

ದೆಹಲಿ(ಅ.12): ಎಲೆಕ್ಟ್ರಿಕ್ ವಾಹನ ಬಳಕೆಯಿಂದ ಪ್ರಮುಖವಾಗಿ ನಗರ ಪ್ರದೇಶದಲ್ಲಿನ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಇಂಧನ ಆಮದು ಪ್ರಮಾಣವೂ ಕಡಿಮೆಯಾಗಲಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ವಿಶೇಷ ಒತ್ತು ನೀಡುತ್ತಿದೆ. ಇದರಲ್ಲಿ ದೆಹಲಿ ಸರ್ಕಾರ ಇತರ ಎಲ್ಲಾ ರಾಜ್ಯಗಳಿಗಿಂತ ಮುಂದಿದೆ. ಈಗಾಗಲೇ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ  ಸಬ್ಸಿಡಿ ನೀಡುತ್ತಿರುವ ದೆಹಲಿ ಸರ್ಕಾರ ಇದೀಗ ನೂತನ ರಸ್ತೆ ತೆರಿಗೆ ಸಂಪೂರ್ಣ ಉಚಿತ ಮಾಡಲಾಗಿದೆ.

ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ; ಸರ್ಕಾರ ಮಹತ್ವದ ನಿರ್ಧಾರ!

ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ಅಧೀಕೃತ ಪ್ರಕಟಣೆ ಹೊರಡಿಸಿದ್ದಾರೆ. ಬ್ಯಾಟರಿ ಚಾಲಿತ ಎಲ್ಲಾ ನೂತನ ವಾಹನಗಳಿಗೆ ಯಾವುದೇ ರಸ್ತೆ ತೆರಿಗೆ ಇಲ್ಲ ಎಂದು ಘೋಷಿಸಿದ್ದಾರೆ. ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

 

ಎಲೆಕ್ಟ್ರಿಕ್ ಕಾರು ತಯಾರಿಯಲ್ಲಿ ವೋಲ್ವೋ: 2021ರಿಂದ ಕೇವಲ ಹೈಬ್ರಿಡ್, ಎಲೆಕ್ಟ್ರಿಕ್ ಕಾರು ಮಾರಾಟ!

ದೆಹಲಿ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರ ಖಾತೆ ನೇರವಾಗಿ ಗರಿಷ್ಠ 1.5 ಲಕ್ಷ ರೂಪಾಯಿ ಸಬ್ಸಡಿ ನೀಡುತ್ತಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್, ಬೈಕ್, ಹಾಗೂ ರಿಕ್ಷಾ ಖರೀದಿಸುವ ಗ್ರಾಹಕರಿಗೆ 30,000 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಇದೀಗ ರಸ್ತೆ ತೆರಿಗೆ ಕೂಡ ಉಚಿತ ಮಾಡಿರುವುದು, ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಸುಲಭವಾಗಿದೆ.

Follow Us:
Download App:
  • android
  • ios