ಶಾರ್ಜಾ(ಅ.12): 6 ಪಂದ್ಯಗಳಲ್ಲಿ ತಲಾ 4 ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಸೋಮವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿವೆ. 

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಆರ್‌ಸಿಬಿ 2ನೇ ಪಂದ್ಯದಲ್ಲಿ ಸೋತಿತ್ತು. ನಂತರದ ಎರಡೂ ಪಂದ್ಯಗಳಲ್ಲಿ ಗೆದ್ದ ಕೊಹ್ಲಿ ಬಳಗ ನಂತರದ ಪಂದ್ಯದಲ್ಲಿ ಸೋತಿತ್ತು. ಕಳೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ವಿರುದ್ಧ ಜಯಿಸಿರುವ ಆರ್‌ಸಿಬಿ, ಇದೀಗ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಶಾರ್ಜಾದಲ್ಲಿ ಆರ್‌ಸಿಬಿಗೆ ಇದು ಮೊದಲ ಪಂದ್ಯವಾಗಿದೆ. ನಾಯಕ ಕೊಹ್ಲಿ ಲಯದಲ್ಲಿದ್ದು, ಎಬಿಡಿ, ಫಿಂಚ್, ಸುಂದರ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಮೋರಿಸ್ ಸೇರ್ಪಡೆ ಹೆಚ್ಚಿನ ಬಲ ತಂದಿದೆ. 

"

ಪ್ರತಿ ಆವೃತ್ತಿಯಲ್ಲಿ RCB ಪರ ಗರಿಷ್ಠ ರನ್ ಬಾರಿಸಿದವರು ಯಾರು..?

ಇನ್ನು ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಮೊದಲ ಪಂದ್ಯದಲ್ಲಿ ಸೋತಿದ್ದು, ನಂತರದ 2 ಪಂದ್ಯಗಳಲ್ಲಿ ಗೆದ್ದಿತ್ತು. ಮತ್ತೊಂದು ಸೋಲಿನ ಬಳಿಕ ಕಳೆದೆರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ದಿನೇಶ್ ಕಾರ್ತಿಕ್ ಪಡೆ, ಆರ್‌ಸಿಬಿ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿ

ಪಿಚ್ ರಿಪೋರ್ಟ್: ಶಾರ್ಜಾ ಪಿಚ್ ಸ್ಪಿನ್ ಸ್ನೇಹಿಯಾಗಿದೆ. ಮೈದಾನ ಚಿಕ್ಕದಾಗಿರುವ ಕಾರಣ ಬ್ಯಾಟ್ಸ್‌ಮನ್‌ಗಳಿಗೂ ಲಾಭ. ವೇಗದ ಬೌಲರ್‌ಗಳು ಇಲ್ಲಿ ಯಶಸ್ಸು ಕಂಡಿದ್ದಾರೆ. ಟಾಸ್ ಪ್ರಮುಖ ಪಾತ್ರವಹಿಸಲಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ಸ್ಥಳ: ಶಾರ್ಜಾ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್