1) ಡಿಕೆಶಿ ಪುತ್ರಿ ಐಶ್ವರ್ಯಾಗೂ ಕಂಟಕ : ಇ.ಡಿ. ವಿಚಾರಣೆ

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಕಳೆದ 8 ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದು, ಗುರುವಾರದಂದು ಅವರ ಪುತ್ರಿ ಐಶ್ವರ್ಯ ಅವರ ವಿಚಾರಣೆಯೂ ನಡೆಯಲಿದೆ.


2) ಡಿಕೆಶಿ ಪ್ರಕರಣ: ಕೋಲಾರಕ್ಕೆ ‘ಅಕ್ರಮ ಹಣ’ದ ನಂಟು? ಯಾರಿಗೆ ಬೀಳುತ್ತೆ ED ಪಂಚ್?

 ಡಿ.ಕೆ.ಶಿವಕುಮಾರ್ ಅಕ್ರಮ ಹಣ ವ್ಯವಹಾರ ಪ್ರಕರಣದ ತನಿಖೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಅಕ್ರಮ ಹಣ ವ್ಯವಹಾರದ ತನಿಖೆ ಈಗ ಕೋಲಾರದವರೆಗೂ ತಲುಪಿದೆ. ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕೋಲಾರಕ್ಕೆ ಭೇಟಿ ನೀಡೋ ಸಾಧ್ಯತೆಗಳಿವೆ. 

3) ಇಂಡೋ-ಆಫ್ರಿಕಾ ಮೊದಲ ಟಿ20 ಪಂದ್ಯ ಡೌಟ್..?

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಮಯಕ್ಕೆ ಸರಿಯಾಗಿ ಪಿಚ್ ತಯಾರಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಅದಕ್ಕೂ ಮುನ್ನ ಮಳೆ ಸಾಧ್ಯತೆಯಿದ್ದು, ಮೈದಾನ ಸಿಬ್ಬಂದಿಗಳು ನಿದ್ದೆಗೆಟ್ಟು ಕರ್ತವ್ಯ ನಿರ್ವಹಿಸುವ ಸವಾಲು ಎದುರಾಗಿದೆ. 

4) ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಆಘಾತ!

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇನ್ನು ಎರಡು ದಿನ ಬಾಕಿ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಇತ್ತ ಟೀಂ ಇಂಡಿಯಾ ಆಯ್ಕೆ ಸಮಿತಿ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಿದೆ. ವಿಶೇಷ  ಅಂದರೆ 20ರ ಹರೆಯದ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ  ವಿಂಡೀಸ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೆಎಲ್ ರಾಹುಲ್‌ಗೆ ಕೊಕ್ ನೀಡಲಾಗಿದೆ. ಆದರೆ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

5) ಸಲ್ಲು ಬಾಯ್ ಬಾಯಲ್ಲಿ ಕನ್ನಡದ ಮಾತು! ವಿಡಿಯೋ ವೈರಲ್

ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ದಬಾಂಗ್-3 ಚಿತ್ರದ ಟೀಸರ್ ನಲ್ಲಿ ಸಲ್ಲು ಮೊಟ್ಟ ಮೊದಲ ಬಾರಿಗೆ   ಕನ್ನಡದಲ್ಲಿ ಮಾತನಾಡಿದ್ದಾರೆ....
 

6) ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕ : 7 ವರ್ಷ ಜೈಲು ಶಿಕ್ಷೆ!

ಬಾಲಿವುಡ್ ಪಿಂಕಿ ಅಲಿಯಾಸ್ ಪ್ರಿಯಾಂಕ ಚೋಪ್ರಾ ಮದುವೆ ನಂತರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ . ಪ್ರಿಯಾಂಕ ಚೋಪ್ರಾ ವಿರುದ್ಧ ಮಹಾರಾಷ್ಟ್ರ ಪೊಲೀಸರು IPC ಸೆಕ್ಷನ್ 393 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ನೀಡಲಾಗುವುದು ಎಂದಿದ್ದಾರೆ. 

7) ‘IT ರೈಡ್ ಮಾಡಿಸಿದ್ದು ಸಿದ್ದರಾಮಯ್ಯ ಎಂದು ಡಿಕೆಶಿ ತಾಯಿಯೇ ಹೇಳಿದ್ದರು’

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿದ್ದು,  ಈ ಹಿಂದೆ ಅವರ ತಾಯಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡಿದ್ದರು.ಐಟಿ ದಾಳಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದಿದ್ದರು ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ. 

8) ಇದು ತೀರ ಖಾಸಾ: ನಮ್ಮ ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ ನಾಸಾ!

 ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್‌ ಜೊತೆ ಮರು ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ನಾಸಾದ ಡೀಪ್-ಸ್ಪೇಸ್ ಆಂಟೆನಾಗಳು ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ್ದು, ಸಂಪರ್ಕ ಸಾಧನೆಗೆ ನಾಸಾ ಯತ್ನಿಸುತ್ತಿದೆ ಎಂಬ ಮಾಹಿತಿ ಬಂದಿದೆ. 

9) 4 ವರ್ಷ ಹಿಂದೆಯೇ ಉಬರ್, ಓಲಾ ಬಗ್ಗೆ ಎಚ್ಚರಿಸಿದ್ದ ಆನಂದ್ ಮಹೀಂದ್ರಾ!

ಹೊಸ ತಲೆಮಾರಿನ ಜನರ ಮನಸ್ಥಿತಿ ಕೂಡಾ ಭಾರತದ ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದೆ. ಜನರು ಓಲಾ, ಉಬರ್‌ಗೆ ಮೊರೆ ಹೋಗುತ್ತಿರುವುದು ಕೂಡಾ ದೇಶದಲ್ಲಿ ವಾಹನ ಮಾರಾಟ ಕಾರಣ ಎಂಬ ಸಚಿವೆ ನಿರ್ಮಲಾ ಹೇಳಿಕೆ ಸಾಕಷ್ಟುವಿವಾದಕ್ಕೆ ಕಾರಣವಾಗಿದೆ.

10) ಭಾರೀ ದಂಡದ ಭೀತಿ: ಬೈಕ್‌ ಸಾಹಸ ತಡೆಯಲು ಮಗನ ಬಂಧಿಸಿಟ್ಟ ಅಪ್ಪ!

ಬೈಕ್‌ ಸಿಕ್ಕರೆ ಸಾಕು ಮಗ ಯದ್ವಾತದ್ವ ಗಾಡಿ ಓಡಿಸುತ್ತಾನೆ. ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗನನ್ನು ಮನೆಯ ಕೋಣೆಯಲ್ಲೇ ಕೂಡಿ ಹಾಕಿದ್ದ. ಕೊನೆಗೆ ಪೊಲೀಸರಿಗೆ ಕರೆ ಮಾಡಿದ ಆತನ ಮಗ, ಕೋಣೆಯಿಂದ ಹೊರಬಂದಿದ್ದಾನೆ.