ಧರ್ಮಶಾಲಾ[ಸೆ.12]: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಮಯಕ್ಕೆ ಸರಿಯಾಗಿ ಪಿಚ್ ತಯಾರಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಅದಕ್ಕೂ ಮುನ್ನ ಮಳೆ ಸಾಧ್ಯತೆಯಿದ್ದು, ಮೈದಾನ ಸಿಬ್ಬಂದಿಗಳು ನಿದ್ದೆಗೆಟ್ಟು ಕರ್ತವ್ಯ ನಿರ್ವಹಿಸುವ ಸವಾಲು ಎದುರಾಗಿದೆ. 

ಕೋಚ್ ಹುದ್ದೆಯಿಂದ ಗೇಟ್‌ಪಾಸ್: ಮೌನ ಮುರಿದ ಬಾಂಗರ್

ಬುಧವಾರ ತಡರಾತ್ರಿ ಮಳೆ ಸುರಿಯಲಿದ್ದು, ಗುರುವಾರ ಪಿಚ್ ಆಟವಾಡಲು ಯೋಗ್ಯ ರೀತಿಯಲ್ಲಿ ಸಿದ್ಧವಾಗುವುದು ಅನುಮಾನವಾಗಿದೆ. ಗುರುವಾರವೂ ಮಳೆ ನಿಲ್ಲದಿದ್ದರೆ ಮೈದಾನ ಸಿಬ್ಬಂದಿ ಮತ್ತಷ್ಟು ಸಂಕಷ್ಟ ಎದುರಿಸಲಿದ್ದಾರೆ. ಯಾಕೆಂದರೆ ಭಾನುವಾರ (ಸೆ.15) ಮೊದಲ ಟಿ20 ಪಂದ್ಯ ನಡೆಯಬೇಕಿದೆ.

ಪಾಂಡ್ಯ ಬ್ರದರ್ಸ್ ಪ್ರಾಕ್ಟೀಸ್ ಶುರು: ಹಾರ್ದಿಕ್‌ಗೆ ಟಾಂಗ್ ಕೊಟ್ಟ ಕೃನಾಲ್

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 15ರಂದು ಧರ್ಮಶಾಲಾದಲ್ಲಿ ನಡೆಯಲಿದೆ.