ನವದೆಹಲಿ[ಸೆ.12]: ಹೊಸ ತಲೆಮಾರಿನ ಜನರ ಮನಸ್ಥಿತಿ ಕೂಡಾ ಭಾರತದ ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದೆ. ಜನರು ಓಲಾ, ಉಬರ್‌ಗೆ ಮೊರೆ ಹೋಗುತ್ತಿರುವುದು ಕೂಡಾ ದೇಶದಲ್ಲಿ ವಾಹನ ಮಾರಾಟ ಕಾರಣ ಎಂಬ ಸಚಿವೆ ನಿರ್ಮಲಾ ಹೇಳಿಕೆ ಸಾಕಷ್ಟುವಿವಾದಕ್ಕೆ ಕಾರಣವಾಗಿದೆ.

ಜನ ಓಲಾ, ಉಬರ್ ಬಳಸುತ್ತಾರೆ: ಹಿನ್ನಡೆ ಸಮಸ್ಯೆಗೆ ‘ನಿರ್ಮಲ’ ಉತ್ತರ!

ಅಚ್ಚರಿಯ ವಿಷಯವೆಂದರೆ ದೇಶದ ಖ್ಯಾತನಾಮ ಉದ್ಯಮಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು 2015ರಲ್ಲೇ ಇಂಥದ್ದೊಂದು ಎಚ್ಚರಿಕೆ ನೀಡಿದ್ದರು.

ನಿರ್ಮಲಾ ಓಲಾ, ಉಬರ್‌ ಹೇಳಿಕೆಗೆ ಕಾಂಗ್ರೆಸ್‌ ವ್ಯಂಗ್ಯ!

ಪುಣೆಯಲ್ಲಿ ಆಟೋಮೊಬೈಲ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆನಂದ್‌ ಮಹೀಂದ್ರಾ, ಓಲಾ ಮತ್ತು ಉಬರ್‌ ಮುಂದಿನ ದಿನಗಳಲ್ಲಿ ದೇಶದ ಆಟೋಮೊಬೈಲ್‌ ಉದ್ಯಮಕ್ಕೆ ಮಾರಕವಾಗಬಹುದು. ಈ ಎರಡೂ ಕಂಪನಿಗಳು ಸಂಚಾರವನ್ನು ಮಾರಾಟದ ಸರಕಾಗಿ ಮಾಡಿವೆ. ಹೀಗಾಗಿ ಆಟೋಮೊಬೈಲ್‌ ಕಂಪನಿಗಳು ವಾಹನಗಳನ್ನು ಕೇವಲ ಸಂಚಾರದ ಸಾಧನವನ್ನಾಗಿ ಪರಿಗಣಿಸಿದೇ, ಅವುಗಳಲ್ಲಿ ಹೊಸ ನಾವೀನ್ಯತೆ ತುಂಬದೇ ಹೋದಲ್ಲಿ ಸಾಕಷ್ಟುಸಂಕಷ್ಟಎದುರಿಸಬೇಕಾಗಿ ಬರುತ್ತದೆ ಎಂದಿದ್ದರು.