ಬಾಲಿವುಡ್ ಮೊಸ್ಟ್ ರಿಲ್ಯಾಕ್ಸ್ ನಟಿ ಅಂದ್ರೆ ಪ್ರಿಯಾಂಕ ಚೋಪ್ರಾ ಅನ್ನುತ್ತಾರೆ ಜನರು. ಮದುವೆ ನಂತರ ಕೊಂಚ ಬ್ರೇಕ್ ತೆಗೆದುಕೊಂಡು ಜಾಲಿ  ಮೂಡ್ ನಲ್ಲಿದ್ದ ಪಿಗ್ಗಿ ಈಗ ‘ಸ್ಕೈ ಈಸ್ ಪಿಂಕ್’ ಚಿತ್ರದ ಮೂಲಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಅರೇ ಸಿನಿಮಾಗೂ ಪೊಲೀಸರಿಗೂ ಏನ್ ಸಂಬಂಧಾ? ಮದುವೆ ಆಗೋದೆ ತಪ್ಪಾ ಅಥವಾ ಮದುವೆ ಆದ ಮೇಲೆ ಸಿನಿಮಾ ಮಾಡೋದೆ ತಪ್ಪಾ? ಏನಿದು ಎನ್ನುವ ಪ್ರಶ್ನೆ  ಕಾಡುತ್ತಿದೆಯಾ. ಇಲ್ಲಿದೆ ನೋಡಿ ಕ್ಲ್ಯಾರಿಟಿ

'ಅಪ್ಪಾ ಐ ಲವ್‌ ಯೂ' ಅಂದ ಪ್ರಿಯಾಂಕಾ ಚೋಪ್ರಾ!

ತೆರೆ ಮೇಲೆ ಬರಲು ಸಜ್ಜಾಗಿರುವ ಬಾಲಿವುಡ್ ‘ಸ್ಕೈ ಈಸ್ ಪಿಂಕ್’  ಚಿತ್ರದ ಟೀಸರ್ ರಿಲೀಸ್ ಆಗಿದೆ.  ಅದರಲ್ಲೊಂದು ಸಂಭಾಷಣೆಯಲ್ಲಿ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಯಾವುದಾದರೋ ಬ್ಯಾಂಕ್ ದರೋಡೆ ಮಾಡೋಣ ಎಂದು ಫರಾನ್ ಅಖ್ತಾರ್ ಗೆ ಪ್ರಿಯಾಂಕ ಹೇಳುತ್ತಾರೆ. ಆ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಮಹಾರಾಷ್ಟ್ರ ಪೊಲೀಸರು  ‘ಈ ಘಟನೆ ನಡೆದರೆ IPC Section 393 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಬೇಕು’ ಎಂದು ಟ್ಟೀಟ್ ಮಾಡಿದ್ದಾರೆ.

 


ಇದನ್ನು ತಕ್ಷಣ ಗಮನಿಸಿದ ಪ್ರಿಯಾಂಕ ‘Oops, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದೆ, ಇದರಿಂದ ಮತ್ತೊಂದು ಪ್ಲಾನ್ ಹುಡುಕಬೇಕು’ ಎಂದು ರಿಟ್ಟೀಟ್  ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಜೊತೆ ಫರಾನ್ ಅಖ್ತಾರ್ ಹಾಗೂ ಮಗಳಾಗಿ ಜೈರಾ  ವಾಸಿಂ ಕಾಣಿಸಿಕೊಂಡಿದ್ದಾರೆ.