ಕೊರೋನಾ ತಾಂಡವ: ದೇಶದಲ್ಲಿ ಸಾವಿನ ಸಂಖ್ಯೆ 15ಕ್ಕೇರಿಕೆ, 649 ಮಂದಿಗೆ ಸೋಂಕು!

ಭಾರತದಲ್ಲಿ ಲಾಕ್‌ಡೌನ್‌ ಹೇರಿದ್ದರೂ ಕೊರೋನಾ ಪೀಡಿತರ ಹಾಗೂ ಈ ಮಾರಕ ವೈರಸ್‌ಗೆ ಬಲಿಯಾದವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇಂದು ಗುರುವಾರ ಕೊರೋನಾ ಮಹಾಮಾರಿಗೆ ಮತ್ತಿಬ್ಬರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 15ಕ್ಕೇರಿದೆ. ಇತ್ತ ಸೋಂಕಿತರ ಸಂಖ್ಯೆಯೂ ನಿರಂತರವಾಗಿ ಏರಿಕೆಯಾಗುತ್ತಿದ್ದು, 649 ಮಂದಿಯಲ್ಲಿ ಸೋಂಕು ದೃಢವಾಗಿದೆ.


ಕೊರೋನಾ ಪರಿಹಾರ: 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ! 

ದೇಶದಲ್ಲಿ ದಿನೇ ದಿನೇ ಉಲ್ಭಣಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದ ಜನ ಸಾಮಾನ್ಯರಿಗೆ ಸಮಸ್ಯೆಳನ್ನೆದುರಿಸಬೇಕಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅರ್ಥಿಕವಾಗಿಯೂ ಕಷ್ಟವುಂಟು ಮಾಡಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. 


ರಾಜಕಾರಣಿಗಳನ್ನು ಒಗ್ಗೂಡಿಸಿದ ಕೊರೋನಾ: ಮೋದಿಗೆ ಸೋನಿಯಾ ಫುಲ್ ಸಪೋರ್ಟ್!...

ಮಾರಕ ಕೊರೋನಾ ವೈರಸ್ ಹಲವರ ಪ್ರಾಣಕ್ಕೆ ಸಂಚಾಕಾರವಾಗಿ ಪರಿಣಮಿಸಿದೆ. ಅಪಾರ ಸಾವು, ನೋವು ಉಂಟು ಮಾಡಿದೆ. ಜನರೆಲ್ಲಾ ಕಂಗಾಲಾಗಿದ್ದಾರೆ. ಹೀಗಿರುವಾಗ ಈ ಮಹಾಮಾರಿ ರಾಜಕೀಯ ನಾಯಕರನ್ನೂ ಪಕ್ಷಬೇಧ ಮರೆಯುವಂತೆ ಮಾಡಿದೆ. ಹೌದು ಬಿಜೆಪಿ ಬದ್ಧ ವೈರಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಪತ್ರ ಒಂದನ್ನು ಬರೆದು ಕೊರೋನಾ ನಿಯಂತ್ರಿಸಲು ಪಿಎಂ ಮೋದಿ ರಾಷ್ಟ್ರಾದ್ಯಂತ ಹೇರಿರುವ ಲಾಕ್‌ಡೌನ್‌ ಕ್ರಮಕ್ಕೆ ಎಂಬಲ ಸೂಚಿಸಿದ್ದಾರೆ. 

ಕಮೋಡ್ ನೆಕ್ಕಿ ಚಾಲೆಂಜ್ ಹಾಕಿದ್ದ ವ್ಯಕ್ತಿಗೆ ಕೊರೋನಾ ಸೋಂಕು!

 ಕೊರೋನಾ ವೈರಸ್ ಅದೆಷ್ಟು ಮಾರಕ ಎಂಬುವುದಕ್ಕೆ ಇದರಿಂದ ಆಗಿರುವ ಸಾವಿನ ಸಂಖ್ಯೆ ಗಮನಿಸಿದರೆ ತಿಳಿಯುತ್ತೆ. ಹೀಗಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸದ ಮಂದಿ ಸರ್ಕಾರ ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಿ, ಇದನ್ನು ಸಾಮಾನ್ಯವಾಗಿ ಪರಿಗಣಿಸುತ್ತಿದ್ದಾರೆ. ಆದರೀಗ ಇದನ್ನು ತಮಾಷೆಯಾಗಿ ಪರಿಗಣಿಸಿ ವಿಚಿತ್ರ ಚಾಲೆಂಜ್ ಮಾಡಿದವನಿಗೆ ಸೋಂಕು ತಗುಲಿದೆ.

ಕೊರೋನಾ ಲಾಕ್‌ಡೌನ್: ಲಕ್ಷಾಂತರ ಮೌಲ್ಯದ ಅಕ್ಕಿ ದಾನ ಮಾಡಿದ ದಾದ..!.

ಇಡೀ ದೇಶವೇ ಒಂದಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಅಗತ್ಯವಿರುವ ಜನರಿಗೆ 50 ಲಕ್ಷ ರುಪಾಯಿ ಮೌಲ್ಯದ ಅಕ್ಕಿಯನ್ನು ದಾನ ಮಾಡಿದ್ದಾರೆ.

ಕೋವಿಡ್19 ವಿರುದ್ಧ ಹೋರಾಟ: ಮನೆಯನ್ನೇ ಆಸ್ಪತ್ರೆ ಮಾಡಲು ಕಮಲ್ ನಿರ್ಧಾರ!

ಕೊರೋನಾ ವಿರುದ್ಧ ಹೋರಾಡಲು ಕೇವಲ ಮನೆಯಲ್ಲಿಯೇ ಯೋಧರಂತೆ ಕೆಲಸ ಮಾಡುವುದು ಮಾತ್ರವಲ್ಲ, ಪ್ರಜ್ಞಾವಂತ ನಾಗರಿಕರಾಗಿಯೂ ಕೆಲವು ಉದ್ಯಮಿಗಳು, ಕ್ರೀಡಾಪಟುಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತುರ್ತು ಅವಶ್ಯಕತೆ ಆದ ಆಸ್ಪತ್ರೆ ಮಾಡಲು, ಸ್ಯಾನಿಟೈಸರ್ ತಯಾರಿಸಲು ಕೆಲವರು ನೆರವು ನೀಡುತ್ತಿದ್ದಾರೆ. ಇದಕ್ಕೆ ಕಮಲ್ ಹಾಸನ್ ಸಹ ಹೊರತಾಗಿಲ್ಲ. 


ಕರ್ನಾಟಕ: ವಿದೇಶಕ್ಕೆ ಹೋಗಿಲ್ಲ, ಇದ್ದೂರಲ್ಲಿದ್ರೂ ಬಂತು ಕೊರೋನಾ.

ಒಂದು ಕಡೆ ಲಾಕ್‌ ಡೌನ್ ಮತ್ತೊಂದೆಡೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕೇಸ್‌ಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇವತ್ತು (ಗುರುವಾರ) ಮಧ್ಯಾಹ್ನದ ವೇಳೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಮೈಸೂರು ಮೂಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ಇಡೀ ರಾಜ್ಯ ಇಲಾಖೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

ವಾಟ್ಸಾಪ್‌ನಲ್ಲಿ ಕೊರೋನಾ ಸುಳ್ಳು ಸುದ್ದಿ ಪರೀಕ್ಷೆಗೆ ಹೊಸ ಫೀಚರ್‌!

ಕೊರೋನಾ ವೈರಸ್‌ ಬಗ್ಗೆ ಸುಳ್ಳು ಸುದ್ದಿ​ಗಳನ್ನು ಹಬ್ಬಿ​ಸು​ವು​ದನ್ನು ತಡೆ​ಯುವ ನಿಟ್ಟಿ​ನಿಂದ ವಾಟ್ಸ್‌ ಆ್ಯಪ್‌ ಹೊಸ​ದೊಂದು ಫೀಚರ್‌ ಅನ್ನು ಪರಿ​ಚ​ಯಿಸಲು ನಿರ್ಧರಿಸಿದೆ.

ಆಲಿಯಾ ಭಟ್‌ಗೆ ಹೇಗೆ ಬಂತು ಬಿಕಿನಿ ಬಾಡಿ? ಯಪ್ಪೋ ನೋಡ್ರಿ ಈ ಟಿಪ್ಸ್.

ಬಾಲಿವುಡ್‌ ಲಿಟಲ್‌ ಕಿಡ್‌ ಬಟ್‌ ಮಾಸ್ಟರ್‌ ಆ್ಯಕ್ಟರ್ ಆಲಿಯಾ ಭಟ್‌  ರಿಯಲ್‌ ಟೈಂ ಲುಕ್‌ ಟ್ರಾನ್ಸ್‌ ಫಾರ್ಮೇಷನ್‌ ಎಲ್ಲರಿಗೂ ಸ್ಫೂರ್ತಿ ತರುವಂತಿದೆ.  ಬಬ್ಲಿ ಗರ್ಲ್‌ ಆಗಿದ್ದ ಆಲಿಯಾ ಇದ್ದಕ್ಕಿದ್ದಂತೆ ಬಿಕಿನಿ ಬಾಡಿ ಮಾಡಿ ಕೊಂಡಿದ್ದು ಹೇಗೆ? ಇಲ್ಲಿದೆ ನೋಡಿ..


ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!

ಕೊರೋನಾ ವೈರಸ್ ಚೀನಾದಲ್ಲಿ ಆರಂಭವಾದಾಗಲೇ ಭಾರತ ಸೇರಿದಂತೆ ವಿಶ್ವದ ಎಲ್ಲಾ ವಾಹನ ಉತ್ಪಾದನಾ ಕಂಪನಿಗಳಿ ಹೊಡೆತ ಬಿದ್ದಿತು. ಕೊರೋನಾ ಗಂಭೀರ ಸ್ವರೂಪ ಪಡೆಯುತ್ತಿದ್ದಂತ  ಇದೀಗ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಇದೀಗ ಕರೋನಾ ವೈರಸ್ ವಿರುದ್ಧ ಹೋರಾಡಲು ಮಹೀಂದ್ರ ಮುಂದಾಗಿದೆ.