ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಕೋರಮಂಗದಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಬ್ಯಾರಿಕೇಡ್ ಹಾಕಿ ಮಾರ್ಗಗಳು ಬಂದ್.  

ಬೆಂಗಳೂರು (ಜ.01) ಹೊಸ ವರ್ಷವನ್ನು ಭಾರತ ಭರ್ಜರಿಯಾಗಿ ಬರ ಮಾಡಿಕೊಂಡಿದೆ. ಜನವರಿ 1, 2026 ಅದ್ಧೂರಿಯಾಗಿ ಆರಂಭಗೊಂಡಿದೆ. ಹೊಸ ವರ್ಷಾಚರಣೆಗೆ ಕೋರಮಂಗಲಕ್ಕೆ ಜನಸಾಗರವೇ ಹರಿದು ಬಂದಿದೆ. ಎಂಜಿ ರಸ್ತೆ, ಬ್ರಿಗ್ರೇಡ್ ರಸ್ತೆಗಿಂತ ಹೆಚ್ಚು ಜನ ಈ ಬಾರಿ ಕೋರಮಂಗಲದತ್ತ ದೌಡಾಯಿಸಿದ್ದಾರೆ. ಮಧ್ಯರಾತ್ರಿ 12 ಗಂಟೆಯಲ್ಲೂ ಕೋರಮಂಗಲದತ್ತ ಜನಸಾಗರ ಹರಿದುಬರುತ್ತಿರುವ ಕಾರಣ ಸಾರ್ವಜನಿಕ ಪ್ರವೇಶ ಬಂದ್ ಮಾಡಲಾಗಿದೆ. ಜರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಎಲ್ಲಾ ಪ್ರವೇಶ ಬಂದ್, ಜರನ್ನು ಕಳಹಿಸುತ್ತಿರುವ ಪೊಲೀಸರು

ಕೋರಮಂಗಲದಲ್ಲಿ ಹೊಸ ವರ್ಷ ಆಚರಣೆ ಮಾಡಲು ಬರುತ್ತಿರುವ ಯುವ ಸಮೂಹಕ್ಕೆ ಪ್ರವೇಶ ನಿರಾಕರಸಲಾಗಿದೆ. ಎಲ್ಲಾ ಸಾರ್ವಜನಿಕ ಪ್ರವೇಶ ಬಂದ್ ಮಾಡಲಾಗಿದೆ. ಕೋರಮಂಗದಲ್ಲಿ ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದೆ. ಇತ್ತ ಈಗಾಗಲೇ ಬಂದು ಸೇರಿರುವ ಜನರನ್ನು ಹೊರಕ್ಕೆ ಕಳುಹಿಸಲಾಗುತ್ತಿದೆ.

ಕಿರಿಕ್ ಮಾಡಿದವನ ವಶಕ್ಕೆ ಪಡೆದ ಪೊಲೀಸ್

ಕೋರಮಂಗಲದಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆ ಕಿರಿಕ್ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದ್ಯಪಾನ ಮಾಡಿ ಕ್ಯಾತೆ ತೆಗೆದವನನ್ನ ಪೊಲೀಸರು ಎಳೆದೊಯ್ದಿದ್ದಾರೆ. ಇದೇ ವೇಳೆ ಜನಜಂಗುಳಿಯನ್ನು ನಿಯಂತ್ರಿಸುವಷ್ಟರಲ್ಲಿ ಪೊಲೀಸರ ಹೈರಾಣಾಗದ್ದಾರೆ. ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಕಾರಣ ಮದ್ಯಾಪಾನಿಗಳನ್ನು ನಿಯಂತ್ರಿಸುವುದೋ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಏಕಾಏಕಿ ಬ್ರಿಗೇಡ್ ರೋಡ್ ಚರ್ಚ್ ಸ್ಟ್ರೀಟ್ ಗೆ ಹರಿದು ಬಂದ ಜನಸಾಗರ

ಕೋರಮಂಗಲ ಜೊತೆಗೆ ಏಕಾಏಕಿ ಬ್ರಿಗೇಡ್ ರೋಡ್ ಚರ್ಚ್ ಸ್ಟ್ರೀಟ್ ಗೆ ಜನಸಾಗರ ಹರಿದು ಬಂದಿದೆ. ಇಂದು ಸಂಜೆಯಿಂದ ಎಂಜಿ ರೋಡ್, ಬ್ರಿಗೇಡ್ ರೋಡ್ ಚರ್ಚ್‌ಸ್ಟ್ರೀಟ್ ಈ ಹಿಂದಿನ ವರ್ಷಗಳಂತೆ ಜನಸಾಗರ ಇರಲಿಲ್ಲ. ಆದರೆ ಇದೀಗ ಏಕಾಏಕಿ ಜನರು ಹರಿದುಬಂದಿದ್ದಾರೆ ಚರ್ಚ್ ಸ್ಟ್ರೀಟ್ ನಲ್ಲಿ ಹೊಸವರ್ಷವನ್ನ ಬರಮಾಡಿಕೊಂಡು ಸಂಭ್ರಮಿಸಿದ್ದಾರೆ. ಜನಸಂದಣಿ ಹೆಚ್ಚಾದ ಹಿನ್ನಲೆ ಚರ್ಚ್ ಸ್ಟ್ರೀಟ್ ನಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ.