ರಾಜಕಾರಣಿಗಳನ್ನು ಒಗ್ಗೂಡಿಸಿದ ಕೊರೋನಾ: ಮೋದಿಗೆ ಸೋನಿಯಾ ಫುಲ್ ಸಪೋರ್ಟ್!

ರಾಜಕಾರಣಿಗಳು ಪಕ್ಷಬೇಧ ಮರರೆತು ಒಂದುಗೂಡುವಂತೆ ಮಾಡಿದ ಕೊರೋನಾ| ಮೋದಿ ಕ್ರಮಕ್ಕೆ ಸೋನಿಯಾ ಬೆಂಬಲ| ಜೊತೆಗೆ ಮಾಡಿದ್ರು ಈ ಮನವಿ

Sonia Gandhi writes to PM Modi voices support to coronavirus lockdown

ನವದೆಹಲಿ(ಮಾ.26): ಮಾರಕ ಕೊರೋನಾ ವೈರಸ್ ಹಲವರ ಪ್ರಾಣಕ್ಕೆ ಸಂಚಾಕಾರವಾಗಿ ಪರಿಣಮಿಸಿದೆ. ಅಪಾರ ಸಾವು, ನೋವು ಉಂಟು ಮಾಡಿದೆ. ಜನರೆಲ್ಲಾ ಕಂಗಾಲಾಗಿದ್ದಾರೆ. ಹೀಗಿರುವಾಗ ಈ ಮಹಾಮಾರಿ ರಾಜಕೀಯ ನಾಯಕರನ್ನೂ ಪಕ್ಷಬೇಧ ಮರೆಯುವಂತೆ ಮಾಡಿದೆ. ಹೌದು ಬಿಜೆಪಿ ಬದ್ಧ ವೈರಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಪತ್ರ ಒಂದನ್ನು ಬರೆದು ಕೊರೋನಾ ನಿಯಂತ್ರಿಸಲು ಪಿಎಂ ಮೋದಿ ರಾಷ್ಟ್ರಾದ್ಯಂತ ಹೇರಿರುವ ಲಾಕ್‌ಡೌನ್‌ ಕ್ರಮಕ್ಕೆ ಎಂಬಲ ಸೂಚಿಸಿದ್ದಾರೆ. 

ಹೋಂ ಕ್ವಾರೆಂಟೈನ್ ಜವಾಬ್ದಾರಿ ತೆಗೆದುಕೊಳ್ಳಲಿದೆಯಾ ಸೇನೆ..?

ಹೌದು ಪಿಎಂ ಮೋದಿ ನಡೆಯನ್ನು ಬೆಂಬಲಿಸಿರುವ ಸೋನಿಯಾ ಈ ಕ್ರಮ ಸ್ವಾಗತಾರ್ಹ ಎಂದಿದ್ದಾರೆ.  ಸೋನಿಯಾ ಬರೆದಿರುವ ನಾಲ್ಕು ಪುಟದ ಪತ್ರದಲ್ಲಿ 'ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತೆಗೆದುಕೊಂಡಿರುವ ಪ್ರತಿಯೊಂದು ಕ್ರಮವನ್ನು ಕಾಂಗ್ರೆಸ್‌ ಬೆಂಬಲಿಸುತ್ತದೆ. ಈ ವೈರಸ್ ಹೊಡೆದೋಡಿಸಲು ಸರಕಾರದೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದ್ದಾರೆ.

ಅಲ್ಲದೇ ದೇಶಕ್ಕಾಗಿ ಹಾಗೂ ಮಾನವೀಯತೆಗಾಗಿ ಪ್ರತಿಯೊಬ್ಬರು ಕೇಂದ್ರ ಸರಕಾರ ಸೂಚಿಸಿರುವ ಕ್ರಮಗಳನ್ನು ಜನರರೆಲ್ಲರೂ ಪಾಲಿಸಬೇಕು. ಭಾರತದ ಮುಂದಿರುವ ಈ ದೊಡ್ಡ ಸವಾಲನ್ನು ಎದುರಿಸಲು ಪ್ರತಿಯೊಬ್ಬರು ಕೈ ಜೋಡಿಸಿದರೆ, ಯಶಸ್ವಿಯಾಗಿ ಈ ಮಾರಕ ವೈರಸ್‌ನ್ನು ತೊಲಗಿಸಬಹುದು ಎಂದಿದ್ದಾರೆ. ಈ ಮೂಲಕ ಕೇಂದ್ರದ ಕ್ರಮವನ್ನು ಪಾಲಿಸುವಂತೆ ಜನತೆಗೆ ಕರೆ ನೀಡಿದ್ದಾರೆ.

ಕೊರೋನಾ ಪರಿಹಾರ: 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ!

ಇನ್ನು ಇದೇ ಸಂದರ್ಭದಲ್ಲಿ ಕನಿಷ್ಟ ಪಕ್ಷ ಮುಂದಿನ ಆರು ತಿಂಗಳ ಕಾಲ ಇಎಂಐ ಮುಂದೂಡಬೇಕು. ಈ ಅವಧಿಯಲ್ಲಿ ಬ್ಯಾಂಕ್‌ಗಳು ಜನಸಾಮಾನ್ಯರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios