ಕ್ಯಾಲಿಫೋರ್ನಿಯಾ(ಮಾ.26): ಕೊರೋನಾ ವೈರಸ್ ಅದೆಷ್ಟು ಮಾರಕ ಎಂಬುವುದಕ್ಕೆ ಇದರಿಂದ ಆಗಿರುವ ಸಾವಿನ ಸಂಖ್ಯೆ ಗಮನಿಸಿದರೆ ತಿಳಿಯುತ್ತೆ. ಹೀಗಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸದ ಮಂದಿ ಸರ್ಕಾರ ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಿ, ಇದನ್ನು ಸಾಮಾನ್ಯವಾಗಿ ಪರಿಗಣಿಸುತ್ತಿದ್ದಾರೆ. ಆದರೀಗ ಇದನ್ನು ತಮಾಷೆಯಾಗಿ ಪರಿಗಣಿಸಿ ವಿಚಿತ್ರ ಚಾಲೆಂಜ್ ಮಾಡಿದವನಿಗೆ ಸೋಂಕು ತಗುಲಿದೆ.

ಹೌದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಚಾಲೆಂಜ್ ವಿಡಿಯೋ ಒಂದು ಹರಿದಾಡಿತ್ತು. ಇದರಲ್ಲಿ ಟಾಯ್ಲೆಟ್​ ಸೀಟ್​ ನೆಕ್ಕುವ ಮೂಲಕ ಕೊರೋನಾಗೆ ಚಾಲೆಂಜ್ ಹಾಕಿಕಲಾಗಿತ್ತು. ಆದರೀಗ ಕೊರೋನಾ ಚಾಲೆಂಜ್​ಗಾಗಿ ಕಮೋಡ್ ನೆಕ್ಕಿ ಉದ್ಧಟತನ ಮೆರೆದಿದ್ದ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಖಚಿತವಾಗಿದೆ. 

ಗೇಶಾನ್ ಮೆಂಡೆಸ್ ಎಂಬ ಯುವಕ ಸ್ವೀಕರಿಸಿ ಟಾಯ್ಲೆಟ್ ಸೀಟ್ ನೆಕ್ಕುವ ವಿಡಿಯೋ ಮಾಡಿ ಟಿಕ್​ಟಾಕ್​ನಲ್ಲಿ ಹರಿಯಬಿಟ್ಟಿದ್ದ. ಈ ಮೂಲಕ  #CoronaChallenge ಹಾಕಿದ್ದ. ಆ ವಿಡಿಯೋ ನೋಡಿದ ಕೆಲವು ಸೆಲೆಬ್ರಿಟಿಗಳು ಕೂಡ ಈ ಸವಾಲನ್ನು ಸ್ವೀಕರಿಸಿ, ಕಮೋಡ್ ನೆಕ್ಕಿದ್ದರು. ಈ ಮೂಲಕ ಕೊರೋನಾ ವೈರಸ್​ ಸಾಂಕ್ರಾಮಿಕ ರೋಗವಲ್ಲ ಎಂದು ಸಾಬೀತುಪಡಿಸಲು ಹೊರಟಿದ್ದರು.

ಆದರೀಗ ಸಾವಿರಾರು ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಸೋಂಕು ಗೇಶಾನ್ ಮೆಂಡೆಸ್ನನ್ನೂ ಬಾಧಿಸಿದೆ. ತಾನು ಆಸ್ಪತ್ರೆಯಲ್ಲಿ ಮಲಗಿರುವ ಫೋಟೋದೊಂದಿಗೆ ಗೇಶಾನ್ ಮೆಂಡೆಸ್ ಟ್ವೀಟ್ ಮಾಡಿದ್ದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಿಕೊಂಡಿದ್ದಾನೆ. ಆತನ ಟ್ವಿಟ್ಟರ್​ ಖಾತೆಯನ್ನು ಈಗ ಬ್ಲಾಕ್​ ಮಾಡಲಾಗಿದೆ.