ನವದೆಹಲಿ(ಮಾ.26): ಭಾರತದಲ್ಲಿ ಲಾಕ್‌ಡೌನ್‌ ಹೇರಿದ್ದರೂ ಕೊರೋನಾ ಪೀಡಿತರ ಹಾಗೂ ಈ ಮಾರಕ ವೈರಸ್‌ಗೆ ಬಲಿಯಾದವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇಂದು ಗುರುವಾರ ಕೊರೋನಾ ಮಹಾಮಾರಿಗೆ ಮತ್ತಿಬ್ಬರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 15ಕ್ಕೇರಿದೆ. ಇತ್ತ ಸೋಂಕಿತರ ಸಂಖ್ಯೆಯೂ ನಿರಂತರವಾಗಿ ಏರಿಕೆಯಾಗುತ್ತಿದ್ದು, 649 ಮಂದಿಯಲ್ಲಿ ಸೋಂಕು ದೃಢವಾಗಿದೆ.

ಶ್ರೀನಗರದ 65 ವರ್ಷದ ವೃದ್ಧ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದ್ದು, ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ ಇಂದು ಗುರುವಾರ, ಮುಂಜಾನೆ ಅವರು ಮೃತಪಟ್ಟಿದ್ದಾರೆ. ಈ ಮೂಲಕ ಇದು ಶ್ರೀನಗರದಲ್ಲಿ ಕೊರೋನಾ ವೈರಸ್‌ನಿಂದ ಮೊದಲ ಸಾವು ಸಂಭವಿಸಿದೆ.

ಕೊರೋನಾ ಕೇಂದ್ರ ವುಹಾನ್‌ ಸಂಪೂರ್ಣ ಗುಣಮುಖ, ಏ.8ಕ್ಕೆ ಲಾಕ್‌ಡೌನ್‌ ಅಂತ್ಯ!

ಇನ್ನು ಇತ್ತ ನವಿ ಮುಂಬೈನಲ್ಲೂ ಓರ್ವ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ. ಸದ್ಯ ಮಹಾರಾ‍ಷ್ಟ್ರದಲ್ಲಿ ಅತಿ ಹೆಚ್ಚು, 125 ಪ್ರಕರಣಗಳು ದಾಖಲಾಗಿವೆ. 

ಭಾರತದಲ್ಲಿ ಈಗಾಗಲೇ 649 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಅಪ್ಪಾ.. ಹೊರಗೋಗ್ಬೇಡಾ ಕೊರೋನಾವಿದೆ: ಪೊಲೀಸಪ್ಪ ಮಗಳ ಮಾತ ಕೇಳಿಯೊಮ್ಮೆ!

ಈವರೆಗೆ ವಿಶ್ವದಲ್ಲಿ ಒಟ್ಟು 21,363 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಯುರೋಪ್​ ರಾಷ್ಟ್ರವೊಂದರಲ್ಲೇ 14 ಸಾವಿರಕ್ಕೂ ಅಧಿಕ ಜನರು ಅಸುನೀಗಿದ್ದಾರೆ. ಚೀನಾದಲ್ಲಿ ಸದ್ಯ, ಕೊರೋನಾ ವೈರಸ್​ ಅಟ್ಟಹಾಸ ನಿಯಂತ್ರಣಕ್ಕೆ ಬಂದಿದೆ. ಈವರೆಗೆ ಚೀನಾದಲ್ಲಿ 3,281 ಜನರು ಬಲಿಯಾಗಿದ್ದಾರೆ.