Asianet Suvarna News

ಯಡಿಯೂರಪ್ಪರನ್ನು ಹೊಗಳಿದ ಪ್ರತಿಪಕ್ಷ, KGF ಚಿತ್ರ ತಂಡಕ್ಕೆ ಹೊಸ ಸಂಕಷ್ಟ; ಮೇ.09ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ರಾಜ್ಯದಲ್ಲಿನ ಆರ್ಥಿಕತೆ ಪಾತಾಳಕ್ಕಿಳಿದಿದೆ. ಇದರ ನಡುವೆ ಸಿಎಂ ಯಡಿಯೂರಪ್ಪ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಪ್ರತಿಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೇ ಏರಿಕೆಯಾಗಿದೆ. ಇದರ ನಡುವೆ ತಬ್ಲೀಘಿ ಜಮಾತ್‌ಗೆ ತೆರಳಿದ್ದ 9 ಮಂದಿ ಶಿವಮೊಗ್ಗಕ್ಕೆ ಮರಳಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ತೆಲುಗು ವಾಹಿನಿ ವಿರುದ್ಧ ಕಾನೂನು ಹೋರಾಟಕ್ಕಿಳಿದ ಕೆಜಿಎಫ್ ಚಿತ್ರತಂಡ, ತುಮಕೂರಿಗೆ ಕಂಟಕವಾದ ಪಾದರಾಯನಪುರ ಅಸಾಮಿ ಸೇರಿದಂತೆ ಮೇ.09ರ ಟಾಪ್ 10 ಸುದ್ದಿ ಇಲ್ಲಿವೆ.
 

CM BS Yediyurappa to  KGF movie top 10 news of may 9
Author
Bengaluru, First Published May 9, 2020, 4:52 PM IST
  • Facebook
  • Twitter
  • Whatsapp

ಸಂಕಷ್ಟದ ನಡುವೆ ದೇಶಕ್ಕೇ ಮಾದರಿ ಆಗುವ ಕೆಲಸ: ಬಿಎಸ್‌ವೈ ಹೊಗಳಿದ ಸಿದ್ದು, ಡಿಕೆಶಿ!...

ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ವಿವಿಧ ವರ್ಗಗಳ ಜನರಿಗೆ ನೆರವು ನೀಡುವುದಕ್ಕಾಗಿ ವಿಶೇಷ ಪ್ಯಾಕೇಜ್‌ ಘೋಷಿಸಿರುವುದನ್ನು ಪ್ರತಿಪಕ್ಷಗಳು ಮುಕ್ತ ಕಂಠದಿಂದ ಪ್ರಶಂಸಿಸಿವೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ..!...

585 ಜನರ ಕೊರೋನಾ ರಿಪೋರ್ಟ್ ಹೊರಬಿದ್ದಿದ್ದು ಈ ಪೈಕಿ, 36 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮತ್ತೆ ಇಂದು ಹೊಸದಾಗಿ 5 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಚಿತ್ರದುರ್ಗದಲ್ಲಿ ಮೂರು ಕೋವಿಡ್ 19 ಪ್ರಕರಣಗಳು ದಾಖಲಾಗಿದೆ.   

ಪಾಕ್ ಸೇನಾ ಮೇಜರ್ ಸೇರಿ 6 ಯೋಧರ ಹತ್ಯೆ; ದಾಳಿ ಹೊಣೆ ಹೊತ್ತ ಬಲೂಚ್ ಲಿಬರೇಶನ್ ಆರ್ಮಿ!...

ಪಾಕಿಸ್ತಾನ ಹಾಗೂ ಬಲೂಚಿಸ್ತಾನ ನಡುವಿನ ಕಲಹ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಾಕಿಸ್ತಾನದ ಕಪಿಮುಷ್ಠಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಬಲೂಚಿಸ್ತಾನ ಮೇಲೆ ಪಾಕಿಸ್ತಾನ ಸೇನೆ ಸಂಪೂರ್ಣ ಅಧಿಕಾರ ಚಲಾಯಿಸುತ್ತಿದೆ. ಪಾಕ್ ಸೇನೆಯ ಉಪಟಳ ಹೆಚ್ಚಾದಂತೆ ಇದೀಗ ನೆಲಬಾಂಬ್ ಮೂಲಕ ಪಾಕಿಸ್ತಾನ ಸೇನಾ ಮೇಜರ್ ಸೇರಿ 6 ಮಂದಿಯನ್ನು ಹತ್ಯೆ ಮಾಡಲಾಗಿದೆ.


ತೆಲುಗು ಲೋಕಲ್‌ ವಾಹಿನಿಯಲ್ಲಿ ಕೆಜಿಎಫ್‌ ಪ್ರಸಾರ: ಕಾನೂನು ಮೊರೆ ಹೋದ ಚಿತ್ರ ತಂಡ?

 ಲೋಕಲ್‌ ತೆಲುಗು ವಾಹಿನಿಯಲ್ಲಿ ಕಾನೂನು ಬಾಹಿರವಾಗಿ ಕೆಜಿಎಫ್‌ ಪ್ರಸಾರ ಮಾಡಲಾಗಿದೆ. ಡಿಜಿಟಲ್‌ ರೈಟ್ಸ್ ಪಡೆಯದೇ ಮಾಡಿದ ತಪ್ಪಿಗೆ ದೂರು ನೀಡಲು ಚಿಂತಿಸುತ್ತಿದೆ ಚಿತ್ರತಂಡ.

ಫಾರ್ಮ್‌ಹೌಸ್‌ನಲ್ಲಿ ಜಾಕ್ವೆಲಿನ್ ಜೊತೆ ಸಾಂಗ್ ಶೂಟ್ ಮಾಡ್ತಿದ್ದಾರೆ ಸಲ್ಮಾನ್..!

ಲಾಕ್‌ಡೌನ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಏನು ಮಾಡ್ತಿದ್ದಾರೆ ಗೊತ್ತಾ..? ಜಾಕಿ ಜೊತೆ ಸಾಂಗ್ ಶೂಟ್ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಲಾಕ್‌ಡೌನ್ ಎಂದು ಸಲ್ಮಾನ್ ಸುಮ್ಮನೆ ಕೂತಿಲ್ಲ. ಫಾರ್ಮ್‌ ಹೌಸ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

6 ಬ್ಯಾಂಕ್‌ಗಳಿಗೆ 400 ಕೋಟಿ ಪಂಗನಾಮ, ದೇಶ ಬಿಟ್ಟು ಪರಾರಿಯಾದ ವ್ಯಾಪಾರಿ!

ಭಾರತೀಯ ಬ್ಯಾಂಕ್‌ಗಳಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು, ಅದನ್ನು ಪಾವತಿಸದೆ ವಿದೇಶಕ್ಕೆ ಪರಾರಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಈ ಪಟ್ಟಿಗೆ ಬಾಸ್ಮತಿ ಅಕ್ಕಿ ವ್ಯಾಪಾರ ನಡೆಸುವ ಕಂಪನಿ ರಾಮ್‌ದೇವ್ ಇಂಟರ್‌ ನ್ಯಾಷನಲ್ ಲಿಮಿಟೆಡ್‌ನ ಮಾಲೀಕನ ಹೆಸರೂ ಸೇರ್ಪಡೆಯಾಗಿದೆ. 

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿ; ಹೇಗಿದ್ದಾರೆ ನೋಡಿ!

ಡಾ. ರಾಜ್‌ಕುಮಾರ್‌ ಮೊಮ್ಮಗಳು, ಶಿವ ರಾಜ್‌ಕುಮಾರ್‌ ದ್ವಿತೀಯ ಪುತ್ರಿ ನಿವೇದಿತಾ  ಈಗ ನಿರ್ಮಾಪಕಿಯಾಗಿದ್ದಾರೆ. ವೆಬ್‌ ಸೀರಿಸ್‌ವೊಂದನ್ನು ನಿರ್ಮಿಸುತ್ತಿದ್ದಾರೆ. ಅಜ್ಜಿ ಪಾರ್ವತಮ್ಮ ರಾಜ್‌ಕುಮಾರ್ ದಾರಿಯಲ್ಲಿ ನಿವೇದಿತಾ ಸಾಗುತ್ತಿದ್ದಾರೆ.

ತಬ್ಲಿಘ್ ಜಮಾತ್‌ಗೆ ಹೋಗಿದ್ದ 9 ಜನ ಗ್ರೀನ್ ಝೋನ್ ಶಿವಮೊಗ್ಗಕ್ಕೆ ವಾಪಾಸ್...

ರಾಜ್ಯ ಮತ್ತು ದೇಶಾದ್ಯಂತ ತಬ್ಲಿಘಿಗಳು ತಂದಿಟ್ಟ ಆತಂಕ ಎಲ್ಲರಿಗೂ ತಿಳಿದೇ ಇದೆ. ಇನ್ನೂ ತಬ್ಲಿಘಿ ಸೋಂಕು ಪರಿಣಾಮ ಮುಗಿದಿಲ್ಲ. ಈ ನಡುವೆಯೇ ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದ 9 ಜನರು ಶಿವಮೊಗ್ಗಕ್ಕೆ ಮರಳಿದ್ದಾರೆ.

ತುಮಕೂರಿಗೆ ಕಂಟಕವಾದ ಪಾದರಾಯನಪುರದ ಆಸಾಮಿ..!

ತುಮಕೂರಿನವರ ಪಾಲಿಗೆ ಪಾದರಾಯನಪುರದ ವ್ಯಕ್ತಿ ಕಂಟಕವಾಗಿ ಪರಿಣಮಿಸಿದ್ದಾನೆ. ಸ್ಥಳೀಯ ಮಾಹಿತಿಯ ಮೇರೆಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ.

ಅಪ್ಪು ಖಾತೆಯಲ್ಲೊಂದು ಅಪರೂಪದ ವಿಡಿಯೋ; ಹೇಗಿದೆ ಅಣ್ಣಾವ್ರು ಜಾಹೀರಾತು ನೋಡಿ!

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌, ಇತ್ತೀಚಿಗೆ ಡಾ.ರಾಜ್‌ಕುಮಾರ್‌ ಅವರ ಮೊದಲ ಚಿತ್ರದ ಬಗ್ಗೆ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರು ಚಿತ್ರರಂಗಕ್ಕೆ ಕಾಲಿಟ್ಟು 66 ವರ್ಷಗಳು ಕಳೆದಿದೆ. 

Follow Us:
Download App:
  • android
  • ios