ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಆಕರ್ಷಿತವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು 'ಕೆಜಿಎಫ್‌' ಸಿನಿಮಾ. ರಾಕಿ ಬಾಯ್‌ ಪಾತ್ರದಲ್ಲಿ ಮಿಂಚಿರುವ ಯಶ್‌ ಪಾತ್ರವನ್ನು ನೋಡಿ ಅಭಿಮಾನಿಗಳು ಫುಲ್ ಥ್ರಿಲ್ಲಾಗಿದ್ದಾರೆ. ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆದಾ ಕೆಜಿಎಫ್‌ ಚಾಪ್ಟರ್‌ 2ಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಲೋಕಲ್‌ ವಾಹಿನಿಯಲ್ಲಿ ಕೆಜಿಎಫ್:

ಕೆಜಿಎಫ್‌ ಸಿನಿಮಾ ಡಿಜಿಟಲ್‌ ರೈಟ್ಸ್‌ ಅಮೇಜಾನ್‌ಗೆ ಹಾಗೂ ಟಿವಿ ರೈಟ್ಸ್ ಕಲರ್ಸ್‌ಗೆ ಮಾರಾಟವಾಗಿದೆ. ಇದನ್ನು ಆಯಾ ಮಾಧ್ಯಮದಲ್ಲಿ ಹೊರತು ಪಡಿಸಿ, ಎಲ್ಲಿಯೋ ಪ್ರಸಾರ ಮಾಡುವಂತಿಲ್ಲ. ಆದರೆ 'Every' ಎಂಬ ತೆಲುಗಿನ ಸ್ಥಳೀಯ ಚಾನೆಲ್‌ನಲ್ಲಿ ಕೆಜಿಎಫ್‌ ಪ್ರಸಾರವಾದ ಕಾರಣ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಈ ಬಗ್ಗೆ ಟ್ಟಿಟ್ಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

'ತೆಲುಗು ಲೋಕಲ್‌ 'Every' ಎಂಬ ವಾಹಿನಿಯಲ್ಲಿ ಕೆಜಿಎಫ್‌ ಕಾನೂನು ಬಾಹಿರವಾಗಿ ಚಿತ್ರ ಪ್ರಸಾರವಾಗುತ್ತಿದೆ. ಇದಕ್ಕೆ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸೆಟಲೈಟ್‌ ಡೀಲ್‌ ಅವರ ಜೊತೆ ಮಾತನಾಡಿ, ಎಲ್ಲಾ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ವಿಡಿಯೋ ಹಾಗೂ ಪೋಟೋ ಸಾಕ್ಷಿಗಳು ನಮ್ಮ ಬಳಿ ಇವೆ,' ಎಂದು ಕಾರ್ತಿಕ್ ಟ್ಟಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

ರಿಲೀಸ್‌ ದಿನ ಥಿಯೇಟರ್‌ನಲ್ಲಿ ಅಭಿಮಾನಿ ಲೈವ್:

ಕೆಜಿಎಫ್‌ ಚಿತ್ರ ರಿಲೀಸ್‌ ಆದ ದಿನವೇ ಬೆಳಗ್ಗೆ 7 ಗಂಟೆ ಶೋನಲ್ಲಿ ಫೇಸ್‌ಬುಕ್‌ ಲೈವ್‌ ಮಾಡಿದ ಅಭಿಮಾನಿಯೊಬ್ಬನ ವಿರುದ್ಧ ಕರ್ನಾಟಕದಲ್ಲಿ ದೂರು ದಾಖಲಾಗಿತ್ತು. ಸುಮಾರು 1 ಗಂಟೆ ಕಾಲ ಸಿನಿಮಾವನ್ನು ಲೈವ್‌ ತೋರಿಸಲಾಗಿತ್ತು.

ಯಶ್‌ ತಂದೆಯನ್ನು ಹೊಗಳಿದ ನಿರ್ದೇಶಕ:

ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ ಯಶ್‌ ತಂದೆ ಬಗ್ಗೆ ಮಾತನಾಡಿದ್ದಾರೆ.' ಯಶ್‌ ಒಬ್ಬರು ಡ್ರೈವರ್‌ ಮಗ ಎಂದು ಕೇಳಿ ತಿಳಿದಿದ್ದೇನೆ. ಅಂಥ ಹಿನ್ನೆಲೆ ಇರುವ ಯಶ್‌ ಈಗ ಸೂಪರ್‌ಸ್ಟಾರ್‌. ಈಗಲೂ ಅವರ ತಂದೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಿತು. ಅವರೇ ನಿಜವಾದ ಸ್ಟಾರ್' ಎಂದು ಬಾಹುಬಲಿ ನಿರ್ದೇಶಕ ರಾಜಮೌಳಿ ಹೇಳಿದ್ದರು.

ಕೆಜಿಎಫ್‌-2 ರಿಲೀಸ್ ಗೂ ಮುನ್ನವೇ ಡಿಮ್ಯಾಂಡ್;55 ಕೋಟಿ ಗೆ ಡಿಜಿಟಲ್ ರೈಟ್ಸ್ ?

ಕೆಜಿಎಫ್‌- 2ನಲ್ಲಿ ಬಾಲಿವುಡ್‌ ನಟರು:

ಕಳ ನಾಯಕ ಅಧೀರನ ಪಾತ್ರದಲ್ಲಿ ಸಂಜಯ್ ದತ್ ಹಾಗೂ ಪ್ರಧಾನಿ ರಮೀಕಾ ಸೇನ್ ಎಂಬ ಪಾತ್ರದಲ್ಲಿ 90ರ ದಶಕದ ಬಾಲಿವುಡ್ ನಟಿ ರವೀನಾ ಟಂಡನ್‌ ಮಿಂಚುತ್ತಿದ್ದಾರೆ. ಇನ್ನು ಮೊದಲ ಚಾಪ್ಟರ್‌‌ನಲ್ಲಿಯೂ ಸುನೀಲ್‌ ಶೆಟ್ಟಿ ನಟಿಸಿದ್ದರು. 

'KGF ಡೈರೆಕ್ಟರ್ ಪ್ರಶಾಂತ್‌ ನೀಲ್‌ಗೆ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ವಂತೆ' ಏನ್ ಕತೆ

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಯಶ್ ಹಲವು ವರ್ಷಗಳಿಂದ ತಮ್ಮನ್ನು ಸಮರ್ಪಿಸಿಕೊಂಡಿದ್ದು, ಶೇವ್ ಮಾಡದೇ ತಮ್ಮ ಲುಕ್ ಉಳಿಸಿಕೊಂಡಿದ್ದಾರೆ. ಕೆಜಿಎಫ್ ಎರಡರ ಶೂಟಿಂಗ್ ಬಹುತೇಕ ಮುಗಿದಿದ್ದು, ರಿಲೀಸ್‌ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.