ಲಾಕ್‌ಡೌನ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಏನು ಮಾಡ್ತಿದ್ದಾರೆ ಗೊತ್ತಾ..? ಜಾಕಿ ಜೊತೆ ಸಾಂಗ್ ಶೂಟ್ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಲಾಕ್‌ಡೌನ್ ಎಂದು ಸಲ್ಮಾನ್ ಸುಮ್ಮನೆ ಕೂತಿಲ್ಲ. ಫಾರ್ಮ್‌ ಹೌಸ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಪ್ಯಾರ್ ಕರೋನಾ ಸಾಂಗ್ ಬಿಡುಗಡೆ ನಂತ್ರ ತೇರೇ ಬೀನಾ ಸಾಂಗ್ ರಿಲೀಸ್ ಮಾಡೋದಕ್ಕಿರೋ ಸಿದ್ಧತೆ ಮಾಡುತ್ತಿದ್ದಾರೆ. ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡಾ ನಟಿಸಿದ್ದಾರೆ.

ಐಶ್ವರ್ಯಾ ಮಾತ್ರವಲ್ಲ ಸುಶ್ಮಿತಾ ಜೊತೆಗೂ ಕೇಳಿಬಂದಿತ್ತು ಅನಿಲ್‌ ಅಂಬಾನಿ ಹೆಸರು!

ಇತ್ತೀಚೆಗೆ ತಮ್ಮ ಸಾಂಗ್ ಬಗ್ಗೆ ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದ ಸಲ್ಮಾನ್ ತಮ್ಮ ಹಾಗೂ ಜಾಕಿ ಫೋಟೋವನ್ನೂ ಶೇರ್ ಮಾಡಿದ್ದಾರೆ. ಈ ಸಾಂಗ್ ಬಹಳಷ್ಟು ಹಿಂದೆಯೇ ನನ್ನನ್ನು ಕಾಡುತ್ತಿದೆ. ಈ ಸಮಯದಲ್ಲಿ ಇದನ್ನು ರಿಲೀಸ್ ಮಾಡೋಣ ಎಂದೆನಿಸುತ್ತಿದೆ. ಆ ಸಾಂಗ್ ಯಾವ ಸಿನಿಮಾಗೂ ಸೂಟ್ ಆಗುವಂತಿಲ್ಲ. ಹಾಗಾಗಿ ಹೀಗೆಯೇ ರಿಲೀಸ್ ಮಾಡಬೇಕೆಂದಿದ್ದೇನೆ ಎಂದು ಸಲ್ಲು ಹೇಳಿದ್ದಾರೆ.

 
 
 
 
 
 
 
 
 
 
 
 
 

@jacquelinef143 @waluschaa

A post shared by Salman Khan (@beingsalmankhan) on May 8, 2020 at 12:08pm PDT

ಸಾಮಾನ್ಯವಾಗಿ ಒಂದು ಹಾಡಿನ ಚಿತ್ರೀಕರಣವಾಗುವಾಗ ಬಹಳಷ್ಟು ಬಜೆಟ್‌ನಲ್ಲಿ ಹಲವು ವಾರಗಳ ತಯಾರಿಯಲ್ಲಿ ಸಿದ್ಧತೆಗಳು ನಡೆಯುತ್ತದೆ. ಆದರೆ ಈ ಸಾಂಗ್‌ನ ಟೀಮ್‌ನಲ್ಲಿ ಮೂರೇ ಜನ ಇದ್ದಾರೆ. ಇದೇ ಮೊದಲ ಬಾರಿಗೆ ನಾನು ನಟಿಸುವುದರ ಜೊತೆಗೆ ಲೈಟಿಂಗ್, ಮೂವಿಂಗ್, ಮೇಕಪ್‌ ಬಗ್ಗೆಯೂ ನೋಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಎಲ್ಲೇ ಹೋದ್ರು ಕಾಸ್ಟಿಂಗ್‌ ಕೌಚ್‌ ಇರುತ್ತೆ; ಕಟು ಸತ್ಯ ಬಿಚ್ಚಿಟ್ಟ 'ರಣವಿಕ್ರಮ' ನಟಿ!

ಸಾಂಗ್ ಚಿತ್ರೀಕರಣ ಮುಗಿಸಿದ ಮಾತನಾಡಿದ ಸಲ್ಮಾನ್ 3 ಜನ ಮಾತ್ರ ಸೇರಿಯೂ ಚಂದದ ಹಾಡು ಚಿತ್ರೀಕರಿಸಬಹುದು. ಎಂಥಹಾ ಸಂದರ್ಭವನ್ನೂ ಸರಿಯಾಗಿ ಬಳಸಿಕೊಳ್ಳಬಹುದೆಂದು ಎಂದು ತಿಳಿಯಿತು ಎಂದಿದ್ದಾರೆ. ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಸಲ್ಮಾನ್ ಖಾನ್ ಅವರ ಪಾನ್‌ವೆಲ್ ಫಾರ್ಮ್‌ ಹೌಸ್‌ನಲ್ಲಿಯೇ ಉಳಿದುಕೊಂಡಿದ್ದಾರೆ.