ಬಲೂಚಿಸ್ತಾನ(ಮೇ.09): ಪಾಕಿಸ್ತಾನ ವಿರುದ್ಧ ಸದಾ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಲೂಚಿಸ್ತಾನ ಸ್ವತಂತ್ರವಾಗಲು ಹಲವು ದಶಕಗಳಿಂದ ಪ್ರಯತ್ನಿಸುತ್ತಿದೆ. ಆದರೆ ಪಾಕಿಸ್ತಾನ ಸೇನಾ ಆಡಳಿತದ ಮೂಲಕ ಬಲೂಚಿಗಳ ಮೇಲೆ ಸತತ ಆಕ್ರಮಣ ನಡೆಸುತ್ತಲೇ ಇದೆ. ಅಮಾಯಕ ಬಲೂಚಿಗಳನ್ನು ಸೆರೆಯಲ್ಲಿ ಚಿತ್ರಹಿಂಸೆ ನೀಡುತ್ತಿದೆ. ಇಷ್ಟೇ ಅಲ್ಲ ಬಲೂಚಿ ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ ಹಲವು ಆರೋಪಗಳು ಪಾಕಿಸ್ತಾನ ಸೇನೆ ಮೇಲಿದೆ. ಇದೀಗ ಬಲೂಚಿಗಳ ಆಕ್ರೋಶ ಕಟ್ಟೆ ಒಡೆದಿದೆ. ಹೀಗಾಗಿ ದಕ್ಷಿಣ ಬಲೂಚಿಸ್ತಾನದಲ್ಲಿ ಕಾರ್ಯಚರಣೆ ತೊಡಗಿದ್ದ ಪಾಕಿಸ್ತಾನ ಸೇನೆ ಮೇಲೆ ನೆಲಬಾಂಬ್ ಸ್ಫೋಟಿಸಿ 6 ಯೋಧರನ್ನು ಹತ್ಯೆಗೈಯಲಾಗಿದೆ.

ಪಾಕ್‌ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮನೆ ಹೆಣ್ಮಕ್ಕಳನ್ನು ಹೊತ್ತೊಯ್ಯುತ್ತಿದ್ದಾರೆ!.

ಪಾಕಿಸ್ತಾನ-ಇರಾನ್ ಗಡಿ ಪ್ರದೇಶದಿಂದ 14 ಕಿ.ಮೀ ದೂರದಲ್ಲಿ ನೆಲಬಾಂಬ್ ಸ್ಫೋಟಿಸಲಾಗಿದೆ. ಕೆಚ್ ಜಿಲ್ಲೆಯ ತರ್ಬತ್ ಕಣಿವೆಗೆ ತೆರಳಿದ್ದ ಪಾಕಿಸ್ತಾನ ಸೇನೆ ಮರಳಿ ಬರುವಾಗ ನೆಲಬಾಂಬ್ ಸ್ಫೋಟಿಸಲಾಗಿದೆ. ರಿಮೂಟ್ ಮೂಲಕ ನೆಲಬಾಂಬ್ ಸ್ಫೋಟಿಸಲಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ವಕ್ತಾರ ಹೇಳಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನಾ ಮೇಜರ್ ಸೇರಿದಂತೆ 6 ಮಂದಿ ಯೋಧರು ಹತರಾಗಿದ್ದಾರೆ.

'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ

ಈ ದಾಳಿಯನ್ನು ಬಲೂಚಿಸ್ತಾನದ ಎರಡು ಲಿಬರೇಶನ್ ಆರ್ಮಿ ಗುಂಪು ಹೊಣೆ ಹೊತ್ತುಕೊಂಡಿದೆ. ಬಲೂಚ್ ಲಿಬರೇಶನ್ ಆರ್ಮಿ ಹಾಗೂ ಬಲೂಚ್ ರಾಜಿ ಅಯೂಜಿ ಸಂಗರ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಹತ್ಯೆಯಾದ ಪಾಕ್ ಸೇನಾ ಮೇಜರ್, ಬಲೂಚಿಸ್ತಾನದ ಮಹಿಳೆಯರ ಮೇಲೆ ಗ್ಯಾಂಪ್ ರೇಪ್ ಮಾಡಿದ್ದಾನೆ. ಇಷ್ಟೇ ಅಲ್ಲ ಮಾದಕ ದ್ರವ್ಯಗಳ ಸಾಗಣಿಕೆ ಹಾಗೂ ಬಲೂಚಿಸ್ತಾನದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದ. ಹೀಗಾಗಿ ಮೇಜರ್ ಸೇರಿದಂತೆ 6 ಮಂದಿಯ ಮೇಲೆ ದಾಳಿ ಮಾಡಲಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಸಂಘಟನೆ ಹೇಳಿಕೊಂಡಿದೆ.

ಈ ಕುರಿತು ಬಲೂಚಿಸ್ತಾನ ಮಾಧ್ಯಮ ಕೂಡ ಪಾಕಿಸ್ತಾನ ಸೇನೆ ನಡೆಸಿದ ಕೃತ್ಯಗಳನ್ನು ಹೇಳಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ರೇಪ್ ಪ್ರಕರಣ, ಪಾಕ್ ಸೇನಾಧಿಕಾರಿಗಳಿಗೆ ಸಹಕರಿಸಿದಿದ್ದರೆ ಗುಂಡಿಟ್ಟು ಕೊಲ್ಲುತ್ತಿದ್ದರು. ಈ ಮೂಲಕ ಬಲೂಚಿಸ್ತಾನದಲ್ಲಿ ಶಾಂತಿ ಕದಡುವ ಪ್ರಯತ್ನವನ್ನೇ ಪಾಕಿಸ್ತಾನ ಸೇನೆ ಮಾಡುತ್ತಿದೆ ಎಂದು ಬಲೂಚಿ ಮಾಧ್ಯಗಳು ಹೇಳಿವೆ.